ETV Bharat / state

ಕರ್ನಾಟಕ ಉಸ್ಕಾ ಬಾಪ್​ ಕಾ ನಹೀ... ಹಮಾರಾ ಹೈ: ‘ಮಹಾ’ ಡಿಸಿಎಂಗೆ ಟಾಂಗ್​ ಕೊಟ್ಟ ಪ್ರಭು ಚವ್ಹಾಣ್​

author img

By

Published : Nov 18, 2020, 2:23 PM IST

ಕರ್ನಾಟಕ ಅವರಪ್ಪಂದಲ್ಲ, ನಮ್ಮದು ಎಂದು ಹಿಂದಿ ಭಾಷೆಯಲ್ಲೇ ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್​ಗೆ ಸಚಿವ ಪ್ರಭು ಚವ್ಹಾಣ್​ ಟಾಂಗ್​ ಕೊಟ್ಟಿದ್ದಾರೆ.

Prabhu Chavan reaction, Prabhu Chavan reaction on DCM Ajit Pawar statement, Kannada is our language, Prabhu Chavan, Prabhu Chavan news, ಪ್ರಭು ಚವ್ಹಾಣ್​ ಪ್ರತಿಕ್ರಿಯೆ, ಡಿಸಿಎಂ ಅಜಿತ್​ ಪವಾರ್​ ಹೇಳಿಕೆಗೆ ಪ್ರಭು ಚವ್ಹಾಣ್​ ಪ್ರತಿಕ್ರಿಯೆ, ಕನ್ನಡ ನಮ್ಮ ಬಾಷೆ, ಪ್ರಭು ಚವ್ಹಾಣ್​, ಪ್ರಭು ಚವ್ಹಾಣ್​ ಸುದ್ದಿ,
ಮಹಾರಾಷ್ಟ್ರ ಡಿಸಿಎಂಗೆ ಟಾಂಗ್​ ಕೊಟ್ಟ ಪ್ರಭು ಚವ್ಹಾಣ್​

ಚಿಕ್ಕೋಡಿ: ಕರ್ನಾಟಕ ಉಸ್ಕಾ ಬಾಪ್​ ಕಾ ನಹೀ ಹಮಾರಾ ಹೈ ಎಂದು ಸಚಿವ ಪ್ರಭು ಚವ್ಹಾಣ್​ ಮಹಾರಾಷ್ಟ್ರಕ್ಕೆ ಭರ್ಜರಿ ಟಾಂಗ್​ ಕೊಟ್ಟಿದ್ದಾರೆ.

ನಿಪ್ಪಾಣಿಯಲ್ಲಿ 2019-20ನೇ ಸಾಲಿನ ಆರ್‌ಐಡಿಎಫ್ ಟ್ರ್ಯಾಂಚ್ - 25 ಅಡಿ ಮಂಜೂರಾದ ಪಶು ಆಸ್ಪತ್ರೆ ಕಟ್ಟಡದ ಶಂಕು ಸ್ಥಾಪನೆ ಸಮಾರಂಭ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. 'ಕರ್ನಾಟಕ ಉಸ್ಕಾ ಬಾಪ್​ ಕಾ ನಹೀ.. ಹೇ ಹಮಾರಾ ಹೈ' ಎಂದರು. ಈ ಮೂಲಕ ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದಿದ್ದ ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್​ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.

ಅವರು ಏನ್ ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಕರ್ನಾಟಕ ಮಾತೇ ನಮ್ಮ ತಾಯಿ. ಅವರಿಗೆ ಏನು ಸಂಬಂಧವಿಲ್ಲ. ಅವರ ಮಾತಿಗೆ ಯಾವುದೇ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದು ಪಶುಸಂಗೋಪನ ಸಚಿವ ಪ್ರಭು ಚವ್ಹಾಣ ಹೇಳಿದರು.

ಮರಾಠ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರ ಬೇಡಿಕೆಯಂತೆ ಸಿಎಂ ಯಡಿಯೂರಪ್ಪನವರು ನಿರ್ಣಯ ತೆಗೆದುಕೊಳ್ಳುತ್ತಾರೆ. ಎಲ್ಲರಿಗೂ ನ್ಯಾಯ ಸಿಗಬೇಕು. ಎಲ್ಲರ ಅಭಿವೃದ್ಧಿ, ವಿಕಾಸ ಕಾರಣಕ್ಕಾಗಿ ಪ್ರಾಧಿಕಾರ ರಚನೆ ಮಾಡಲೇಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.