ETV Bharat / state

ಮರಾಠಿಯಲ್ಲಿದ್ದ ಅರ್ಜಿಯನ್ನು ಅಚ್ಚ ಕನ್ನಡದಲ್ಲೇ ತುಂಬಿದ ಭೂಪ.. ಮಹಾರಾಷ್ಟ್ರ ವಿದ್ಯಾರ್ಥಿಯ ಕನ್ನಡ ಟಿಸಿ ವೈರಲ್​! - ಮರಾಠಿಯಲ್ಲಿದ್ದ ಅರ್ಜಿಯನ್ನು ಕನ್ನಡದಲ್ಲೇ ತುಂಬಿದ ಭೂಪ

ಮರಾಠಿ ಅರ್ಜಿ ನಮೂನೆಯನ್ನು ಕನ್ನಡದಲ್ಲಿ ತುಂಬಲಾಗಿರುವ ವರ್ಗಾವಣೆ ಪ್ರಮಾಣಪತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

Kannada TC at Gugavad School in Maharashtra
ಮಹಾರಾಷ್ಟ್ರದ ಗುಗವಾಡ ಶಾಲೆಯಲ್ಲಿ ಕನ್ನಡ ಟಿಸಿ
author img

By

Published : Jun 17, 2023, 7:25 PM IST

ಬೆಳಗಾವಿ: ನಾಡು ನುಡಿಯ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ವಿವಾದಗಳು ದಶಕಗಳಿಂದ ನಡೆದುಕೊಂಡು ಬಂದಿವೆ. ಗಡಿಯಲ್ಲಿ ಸೊಲ್ಲಾಪುರದ ಜಿಲ್ಲೆಯ ಬಹುತೇಕ ಗ್ರಾಮಗಳ ಜನರು ಕನ್ನಡದಲ್ಲೇ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಗೊತ್ತಿರುವ ವಿಚಾರ. ಈ ನಡುವೆ ವಿದ್ಯಾರ್ಥಿಯೋರ್ವ ಕನ್ನಡ ಪ್ರೇಮವನ್ನು ಮೆರೆದಿರುವ ಟಿಸಿ ಒಂದು ವೈರಲ್​ ಆಗಿದೆ.

ಹೌದು.., ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಗವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗೆ ನೀಡಿರುವ ವರ್ಗಾವಣೆ ಪ್ರಮಾಣ ಪತ್ರದ ಅರ್ಜಿ ನಮೂನೆ ಮರಾಠಿಯಲ್ಲಿದ್ದರೂ, ತುಂಬಿದ್ದು ಮಾತ್ರ ಕನ್ನಡದಲ್ಲಿ. ಸದ್ಯ ಈ ವರ್ಗಾವಣೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಚ್ಚ ಕನ್ನಡ ಪ್ರದೇಶಗಳಾದ ಜತ್ತ ತಾಲೂಕಿನ 44 ಹಳ್ಳಿಗಳ ಪೈಕಿ ಗುಗವಾಡ ಗ್ರಾಮವೂ ಒಂದಾಗಿದೆ. ಇಲ್ಲಿಯ ಶಾಲೆಯ ಮುಖ್ಯಶಿಕ್ಷಕರು ರಾಹುಲ್ ಚೌಗುಲೆ ಎಂಬುವವರಿಗೆ ನೀಡಿದ ಟಿಸಿ ಫಾರ್ಮ್ ಸಂಪೂರ್ಣ ಮರಾಠಿಯಲ್ಲಿಯೇ ಇದೆ. ಆದರೆ ವಿದ್ಯಾರ್ಥಿಯ ವಿವರಗಳನ್ನೆಲ್ಲ ಅಚ್ಚ ಕನ್ನಡದಲ್ಲಿಯೇ ತುಂಬಲಾಗಿದೆ. ಅಲ್ಲದೇ ಟಿಸಿಯಲ್ಲಿ 'ರಾಜ್ಯ ಕರ್ನಾಟಕ' ಎಂದೂ ನಮೂದಿಸಲಾಗಿದೆ.

1966ರ ಅಕ್ಟೋಬರ್ 25 ರಂದು ನೇಮಕವಾಗಿ 1967 ರ ಆಗಸ್ಟ್​ 25 ರಂದು ವರದಿ ನೀಡಿದ ಮೆಹರ್ ಚಂದ ಮಹಾಜನ ಆಯೋಗದ ಶಿಫಾರಸ್ಸಿನ ಪ್ರಕಾರ ಜತ್ತ ಹಾಗೂ ಅಕ್ಕಲಕೋಟೆ ತಾಲೂಕಿನ ನೂರಾರು ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತವೆ. 1970ರಲ್ಲಿ ಲೋಕಸಭೆಯಲ್ಲಿ ಮಂಡಿಸಲ್ಪಟ್ಟ ಮಹಾಜನ ವರದಿಯು ಜಾರಿಯಾಗದೇ ಹಾಗೆಯೇ ಧೂಳು ತಿನ್ನುತ್ತಲೇ ಬಿದ್ದಿದೆ.

ಮಹಾರಾಷ್ಟ್ರದ ಕನ್ನಡಿಗರು ಕರ್ನಾಟಕ ಮತ್ತು ಕನ್ನಡಿಗರ ಜೊತೆಗೆ ಹೊಂದಿರುವ ಭಾವನಾತ್ಮಕ ಸಂಬಂಧ ಪದಗಳಲ್ಲಿ ವಿವರಿಸುವಂಥದ್ದಲ್ಲ. ಹೊರನಾಡ ಕನ್ನಡಿಗರ ತುಡಿತವನ್ನು ಅರ್ಥ ಮಾಡಿಕೊಳ್ಳಲು ಕರ್ನಾಟಕ ಸರಕಾರ ಮತ್ತು ಇಲ್ಲಿಯ ನಾಯಕರಿಗೆ ಈಗಲೂ ಸಾಧ್ಯವಾಗುತ್ತಿಲ್ಲ. ಅಲ್ಲಿಯ ಕನ್ನಡಿಗರಿಗೆ ಸಿಗಬೇಕಾದ ಸಹಾಯ ಸವಲತ್ತುಗಳ ಬಗೆಗೂ ಇವರು ತಲೆಕೆಡಿಸಿಕೊಂಡಿಲ್ಲ. ಕರ್ನಾಟಕದ ಗಡಿಭಾಗದ ಮರಾಠಿಗರಿಗೆ ನಮ್ಮ ಸರಕಾರ ನೀಡುತ್ತಿರುವ ಸಹಾಯ ಸವಲತ್ತುಗಳ ಅರ್ಧದಷ್ಟೂ ನೆರವು ಮಹಾರಾಷ್ಟ್ರ ಸರ್ಕಾರ ನೀಡಿಲ್ಲ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಗವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಟಿಸಿಯಲ್ಲಿ ಕನ್ನಡದಲ್ಲೇ ತುಂಬಿ ಕರ್ನಾಟಕ ರಾಜ್ಯ ಎಂದು ಬರೆದಿರಬೇಕಾದರೆ, ಅಲ್ಲಿಯ ಕನ್ನಡಿಗರ‌ ಮನದಾಳದಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯ ಕನ್ನಡಿಗರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹರಿಸಲು ಪ್ರಸಕ್ತ ಸಿದ್ದರಾಮಯ್ಯ ಸರ್ಕಾರ ಗಂಭೀರವಾದ ಪ್ರಯತ್ನ ಮಾಡಬೇಕಿದೆ ಎಂದು ಅಶೋಕ ಚಂದರಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಎಂಇಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.