ETV Bharat / state

ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ನೆಡಲು ತೆರಳುತ್ತಿದ್ದ ಹೋರಾಟಗಾರರು ಪೊಲೀಸರ ವಶಕ್ಕೆ - Kannada flag in Maharashtra

ಮಹಾರಾಷ್ಟ್ರದ ಗಡಿ ಗ್ರಾಮ ಶಿನ್ನೋಳಿಯಲ್ಲಿ ಕನ್ನಡ ಧ್ವಜ ಅಳವಡಿಸಲು ಮುಂದಾಗಿದ್ದ ಕನ್ನಡಪರ ಹೋರಾಟಗಾರರನ್ನು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದು, ಎಲ್ಲರನ್ನೂ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದೊಯ್ಯಲಾಯಿತು.

ಕನ್ನಡ ಧ್ವಜ ನೆಡಲು ತೆರಳುತ್ತಿದ್ದ ಹೋರಾಟಗಾರರು ಪೊಲೀಸರ ವಶಕ್ಕೆ

author img

By

Published : Jan 22, 2021, 3:20 PM IST

ಬೆಳಗಾವಿ: ಗಡಿಯಲ್ಲಿ ಗುರುವಾರ ಶಿವಸೇನೆ ನಡೆಸಿದ ಪುಂಡಾಟಿಕೆ ಖಂಡಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರಾಜ್ಯದ ವಿವಿಧ ಭಾಗದ ಕನ್ನಡ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಗಡಿ ಗ್ರಾಮ ಶಿನ್ನೋಳಿಯಲ್ಲಿ ಕನ್ನಡ ಧ್ವಜ ಅಳವಡಿಸಲು ಹೊರಟಿದ್ದ ಹೋರಾಟಗಾರರನ್ನು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದು, ಎಲ್ಲರನ್ನೂ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದೊಯ್ಯಲಾಯಿತು.

ಕನ್ನಡ ಧ್ವಜ ನೆಡಲು ತೆರಳುತ್ತಿದ್ದ ಹೋರಾಟಗಾರರು ಪೊಲೀಸರ ವಶಕ್ಕೆ

ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಹೋರಾಟಗಾರರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಶಿವಸೇನೆ ಮುಖಂಡರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ನಮ್ಮದೇ ಎಂದು ಘೋಷಣೆ ಕೂಗಿ ಮಹಾರಾಷ್ಟ್ರ ಸಿಎಂಗೆ ತಿರುಗೇಟು ನೀಡಿದರು.

ಓದಿ:ಶಿವಸೇನೆ ಕಾರ್ಯಕರ್ತರ ಬೆಳಗಾವಿ ಪ್ರವೇಶಕ್ಕೆ ನಿಷೇಧ: ಕಮಿಷನರ್​ ಆದೇಶ

ಇದಕ್ಕೂ ಮುನ್ನ 35ಕ್ಕೂ ಹೆಚ್ಚಿನ ವಾಹನಗಳಲ್ಲಿ ಬೆಳಗಾವಿ ಪ್ರವೇಶಕ್ಕೆ ಮುಂದಾಗಿದ್ದ ಕನ್ನಡ ಹೋರಾಟಗಾರರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್‌ ಬಳಿ ತಡೆದರು. ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದಿದ್ದಕ್ಕೆ ಹೆದ್ದಾರಿ ತಡೆಯಲು ಮುಂದಾದರು. ಬಳಿಕ ಚೆನ್ನಮ್ಮ ವೃತ್ತದವರೆಗೆ ಬರಲು ಹೋರಾಟಗಾರರಿಗೆ ಅನುಮತಿ ನೀಡಲಾಯಿತು. ಹಿರೇಬಾಗೇವಾಡಿಯಿಂದ ಪೊಲೀಸ್ ಭದ್ರತೆಯಲ್ಲೇ ಕನ್ನಡ ಸಂಘಟನೆ ಕಾರ್ಯಕರ್ತರು ಬೆಳಗಾವಿಯ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದರು. ಕೆಲ ಹೊತ್ತು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಶಿನ್ನೋಳಿಗೆ ತೆರಳಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.