ಸಂತೋಷ್ ವಿಡಿಯೋ ಡಿಕೆಶಿ ಬಳಿ ಇದ್ದರೆ ಬಿಡುಗಡೆ ಮಾಡಲಿ.. ಸಚಿವ ಕೆ ಎಸ್ ಈಶ್ವರಪ್ಪ ಸವಾಲು - ಸಚಿವ ಈಶ್ವರಪ್ಪ
ಏನೇ ಅಪಾದನೇ ಮಾಡಬೇಕು ಅಂದ್ರೇ ಡಾಕ್ಯುಮೆಂಟ್ ಬೇಕು. ಕಾಂಗ್ರೆಸ್ ನೆಲಕಚ್ಚಿ ಹೋಗಿದ್ದು, ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಂಎಲ್‌ಎ ಯಾರು?, ಎಂಎಲ್‌ಸಿ ಯಾರು?, ಮಂತ್ರಿ ಯಾರು ಅಂತಾ ಹೇಳಲಿ..
ಬೆಳಗಾವಿ : ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಮುಟ್ಠಾತನದ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಿಕೆ ಕೊಡೋಕೆ ಡಿ ಕೆ ಶಿವಕುಮಾರ್ಗೆ ನಾಚಿಕೆ ಆಗಬೇಕು. ವಿಡಿಯೋ ಲೀಕ್ ಆಗಿದೆ ಅಂದ್ರೆ ಆ ವಿಡಿಯೋ ಇವರ ಹತ್ತಿರ ಇರಬೇಕಲ್ವಾ?ಎಂದು ಪ್ರಶ್ನಿಸಿದ್ದಾರೆ.
ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆರೋಪ ಮಾಡುವುದಕ್ಕೆ ಅವರಿಗೆ ಪೂರ್ಣ ಅಧಿಕಾರ ಇದೆ. ವಿಡಿಯೋ ಇದೆ ಅಂತಾ ಹೇಳುವುದು ರಾಜ್ಯದ ಜನರ ದಿಕ್ಕು ತಪ್ಪಿಸುವಂತಹದ್ದಾಗಿದೆ. ವಿಡಿಯೋ ಲೀಕ್ ಆಗಿದೆ ಎಂದ್ರೇ ಕಾಪಿ ನಿಮ್ಮಲ್ಲಿದ್ದರೆ ಬಿಡುಗಡೆ ಮಾಡಲಿ.
ಏನೇ ಅಪಾದನೇ ಮಾಡಬೇಕು ಅಂದ್ರೇ ಡಾಕ್ಯುಮೆಂಟ್ ಬೇಕು. ಕಾಂಗ್ರೆಸ್ ನೆಲಕಚ್ಚಿ ಹೋಗಿದ್ದು, ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಂಎಲ್‌ಎ ಯಾರು?, ಎಂಎಲ್‌ಸಿ ಯಾರು?, ಮಂತ್ರಿ ಯಾರು ಅಂತಾ ಹೇಳಲಿ. ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡೋದನ್ನು ಉಗ್ರವಾಗಿ ಖಂಡಿಸ್ತೀನಿ ಎಂದರು.
ಇದನ್ನೂ ಓದಿ: ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಸಂತೋಷ್ಗೆ ಸಚಿವರ ಬ್ಲ್ಯಾಕ್ ಮೇಲ್ : ಡಿಕೆಶಿ ಬಾಂಬ್