ಗೋಕಾಕ್: ಉಪಚುನಾವಣೆ ಹಿನ್ನಲೆಯಲ್ಲಿ ಗೋಕಾಕ್ ದಿನೇದಿನೆ ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರವಾಗ್ತಿದೆ. ಇಂದು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಮತದಾರರಲ್ಲಿ ಜೋಳಿಗೆ ಮತಭಿಕ್ಷೆ ಕೇಳುವ ಮೂಲಕ ಗಮನ ಸೆಳೆದರು.
ಗೋಕಾಕ್ನ ಶೂನ್ಯ ಸಂಪಾದನಾ ಮಠದಲ್ಲಿ ಮುರಘ ರಾಜೇಂದ್ರ ಮಹಾಸ್ವಾಮಿ ನೇತೃತ್ವದಲ್ಲಿ ಜೋಳಿಗೆ ದೀಕ್ಷೆ ಪಡೆದು ಪೂಜಾರಿ ಅವರ ಮನೆಯಿಂದ ಮತಭಿಕ್ಷೆ ಶುರು ಮಾಡಿ ಪ್ರಮುಖ ಬೀದಿಯಲ್ಲಿ ಮತಭಿಕ್ಷೆ ಕೇಳಿದರು. ಅಶೋಕ ಪೂಜಾರಿಗೆ ಮತದಾರರು ಆರತಿ ಬೆಳಗಿ ಜೋಳಿಗೆಯಲ್ಲಿ ಹಣ ಹಾಕಿದರು.
ಉಪಚುನಾವಣೆ ಕಾವು ಹೆಚ್ಚಾಗಿದೆ. ಒಂದು ಕಡೆ ಜಾರಕಿಹೊಳಿ ಸಹೋದರರ ವಾಕ್‌ಸಮರ ಜೋರಾಗಿದೆ. ಕ್ಷೇತ್ರದಲ್ಲಿ ಹಿಡಿತ ಕಾಯ್ದುಕೊಳ್ಳಲು ಪೈಪೋಟಿ ತೀವ್ರವಾಗಿದೆ. ಇಬ್ಬರ ನಡುವೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಜೋಳಿಗೆ ಹಾಕಿ ಮತಭಿಕ್ಷೆ ಕೇಳುತ್ತಿರುವುದು ಮತದಾರರ ಮೇಲೆ ಯಾವ ಪ್ರಭಾವ ಬೀರಲಿದೆ ಎಂದು ಕಾದು ನೋಡಬೇಕಿದೆ.