ETV Bharat / state

ಜೈನಮುನಿ ಹತ್ಯೆ ಪ್ರಕರಣ ಇಡೀ ಯತಿಕುಲವೇ ತಲೆಬಾಗುವಷ್ಟು ನೋವಾಗಿದೆ: ಜಯಮೃತ್ಯುಂಜಯ ಶ್ರೀ

ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಆಶ್ರಮಕ್ಕೆ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ, ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

flowers to the portrait of Sri Kamakumar Maharaja
ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಶ್ರೀ ಕಾಮಕುಮಾರ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು
author img

By

Published : Jul 15, 2023, 5:29 PM IST

Updated : Jul 15, 2023, 8:07 PM IST

ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.

ಚಿಕ್ಕೋಡಿ: ಹಿರೇಕೊಡಿ ನಂದಿ ಪರ್ವತ ಮಹಾರಾಜರ ಹತ್ಯೆಯಿಂದ ಭಾರತದ ಅಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ. ಒಕ್ಕೊರಲಾಗಿ ಖಂಡಿಸಿ ನ್ಯಾಯ ಕೊಡಿಸುವ ಕೆಲಸ ಎಲ್ಲರೂ ಕೂಡಿ ಮಾಡಬೇಕು. ನೊಂದ ಮನಸ್ಸುಗಳಿಗೆ ಧೈರ್ಯ ಹೇಳಿ ಮುಂದೆ ಈ ರೀತಿ ಘಟನೆ ಆಗದಂತೆ ಎಲ್ಲರೂ ಸಾಮೂಹಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಈ ಘಟನೆಯಿಂದ ಇಡೀ ಕರ್ನಾಟಕ ತಲೆ ತಗ್ಗಿಸಿದಂತಾಗಿದೆ. ಭಾರತ ಯಾವತ್ತೂ ಅಧ್ಯಾತ್ಮ ರಕ್ಷಣಾ ಭೂಮಿ ಅಂತ ತೋರಿಸಬೇಕಿದೆ. ಈ ರೀತಿಯ ಘಟ‌ನೆ ದೇಶದಲ್ಲಿ ಹಿಂದೆಂದೂ ಆಗಿಲ್ಲ. ಇಷ್ಟರಮಟ್ಟಿಗೆ ಮನುಷ್ಯನ ಮನಸ್ಸು ವಿಕಾರಗೊಂಡಿದ್ದು ವಿಚಿತ್ರವಾಗಿದೆ. ಇಂತಹ ವಿಚಾರ ವಿಷಯಾಂತರ ಮಾಡದೇ ನ್ಯಾಯ ಒದಗಿಸುವ ಕೆಲಸ ಆಗಲಿ. ಧರ್ಮಗುರುಗಳಿಗೆ ತೊಂದರೆ ಆಗದ ರೀತಿ ಎಚ್ಚರ ವಹಿಸಬೇಕಿರೋದು ದೇಶದ 125 ಕೋಟಿ ಜನರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.

ಈ ಘಟನೆ ಇಡೀ ಯತಿಕುಲವೇ ತಲೆಬಾಗುವಷ್ಟು ನೋವಾಗಿದೆ. ಭಾರತ ದೇಶದ ಆಧ್ಯಾತ್ಮಿಕ ಚರಿತ್ರೆಯಲ್ಲಿ ಧರ್ಮಗರುಗಳ ಬರ್ಬರ ಹತ್ಯೆ ಮಾಡಿದ್ದು ನಾಡಿನ ಅಧ್ಯಾತ್ಮಿಕ ಪರಂಪರೆಗೆ ನಿರಾಶೆಯಾಗಿ ದಿಗ್ಭ್ರಮೆ ಉಂಟಾಗಿದೆ. ಇಂತಹ ಘಟನೆ ಯಾವ ಕಾರಣಕ್ಕೂ ಈ ದೇಶದಲ್ಲಿ ನಡೆಯಬಾರದಿತ್ತು. ನಮ್ಮ ಎರಡೂ ಸರ್ಕಾರ ಈ ರೀತಿ ಆಗದ ಹಾಗೇ ಎಚ್ಚರ ವಹಿಸುವ ಅವಶ್ಯಕವಿದೆ ಎಂದು ಹೇಳಿದರು.

ಕಾಮಕುಮಾರ ಮಹಾರಾಜರಿಗೆ ಪರಿಸರ, ವಿದ್ಯಾಭ್ಯಾಸ, ಸಾಹಿತ್ಯ ಬಗ್ಗೆ ಕಾಳಜಿ ಬಗ್ಗೆ ಕೇಳಿದ್ದೆನು. ನಾಡಿನ ದೊಡ್ಡ ಪೂಜ್ಯರ ಕಳೆದುಕೊಂಡ ನೋವು ನಮಗೆ ಕಾಡುತ್ತಿದೆ. ಕೇವಲ ಜೈನಧರ್ಮ ಮಾತ್ರವಲ್ಲ ಇಡೀ ದೇಶದ ಅಧ್ಯಾತ್ಮಿಕ ಮನಸುಗಳಿಗೆ ನೋವಾಗಿದೆ. ಸರ್ಕಾರದಲ್ಲಿಯೂ ಪ್ರಕರಣ ಬಗ್ಗೆ ಗಂಭೀರ ಚರ್ಚೆ ಆಗಿದೆ. ಮುಂದೆ ಈ ರೀತಿ ಘಟನೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜೈನಧರ್ಮದ ಎಲ್ಲ ಗುರುಗಳ ಜೊತೆಗೆ ನಾವು ಪೂಜ್ಯರು ಇರ್ತೀವಿ. ಧೈರ್ಯದಿಂದ ಅಧ್ಯಾತ್ಮಿಕ ಚಟುವಟಿಕೆ ನಡೆಸಲಿ, ಯಾರೂ ಸಹ ದಿಗ್ಭ್ರಮೆಗೊಳಗಾಗೋದು ಬೇಡ ಎಂದು ಹೇಳಿದ ಅವರು ಈ ಪ್ರಕರಣದಲ್ಲಿ ರಾಜಕೀಯವಾಗಿ ತಿರುವು ಪಡೆದುಕೊಂಡಿದ್ದು, ನೋವು ಉಂಟಾಗಿದೆ. ಇಂತಹ ಪ್ರಕರಣದಲ್ಲಿ ರಾಜಕೀಯ ತಿರುವು ಖಂಡನೆ, ಶ್ರೀಗಳು ಪರಿಸರ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಸರ್ಕಾರ ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕಾರ್ಯ ನಿಭಾಯಿಸಲಿ ಎಂದು ಒತ್ತಾಯಿಸಿದರು.

ಜಯ ಮೃತ್ಯುಂಜಯ ಶ್ರೀಗಳಿಂದ ಸಾಂತ್ವನ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಧರ್ಮ ಆಶ್ರಮಕ್ಕೆ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ ಅಲ್ಲಿರುವ ಜನರಿಗೆ ಸಾಂತ್ವನ ಹೇಳಿದರು. ಆಶ್ರಮದ ಸದಸ್ಯರು ಹಾಗೂ ನಂದಿ ಮಹಾರಾಜರ ಸಹೋದರನ ಜೊತೆ ಕೆಲವು ಕಾಲ ಚರ್ಚೆ ನಡೆಸಿದರು. ಶ್ರೀ ಕಾಮಕುಮಾರ ನಂದಿ ಮಹಾರಾಜರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಆಶ್ರಮವನ್ನು ಸುತ್ತಾಡಿ ಆಶ್ರಮ ವೀಕ್ಷಣೆ ಮಾಡಿದರು.

ಇದನ್ನೂಓದಿ:ಜೈನಮುನಿ ಹತ್ಯೆ ಪ್ರಕರಣದಲ್ಲಿ ಪಕ್ಷಗಳು ರಾಜಕೀಯ ಮಾಡಬಾರದು: ಮುನಿಶ್ರೀ ಅಜಯ ಸಾಗರ ಸಲಹೆ

Last Updated : Jul 15, 2023, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.