ETV Bharat / state

ಎಂಇಎಸ್ ನಿಂದ ಇಡೀ ಮರಾಠಾ ಸಮುದಾಯಕ್ಕೆ ಅನ್ಯಾಯ: ಶಾಸಕ ಅನಿಲ ಬೆನಕೆ

ಮರಾಠಿಗರು ಕನ್ನಡ ಭಾಷೆ ಒಪ್ಪಿಕೊಂಡಿದ್ದಾರೆ. ಕೆಲವರಷ್ಟೇ ಒಪ್ಪಿಕೊಂಡಿಲ್ಲ. ಎಂಇಎಸ್ ಸಂಘಟನೆಯೇ ಬೇರೆ, ಮರಾಠಾ ಸಮುದಾಯವೇ ಬೇರೆಯಾಗಿದೆ‌. ಎಂಇಎಸ್‌ನವರು ಸಹ ಈ ನಿಗಮಕ್ಕೆ ವಿರೋಧ ವ್ಯಕ್ತಪಡಿಸಬಾರದು. ಮರಾಠಾ ನಿಗಮ ವಿರೋಧಿಸಿದರೆ ಅವರೂ ಸಹ ಮರಾಠಿಗರಿಗೆ ಅನ್ಯಾಯ ಮಾಡಿದಂತೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.

MLA anila benake
ಶಾಸಕ ಅನಿಲ ಬೆನಕೆ
author img

By

Published : Nov 21, 2020, 1:54 PM IST

ಬೆಳಗಾವಿ: ಮರಾಠಾ ಪ್ರಾಧಿಕಾರ ವಿರೋಧ ಮಾಡುವ ಎಂಇಎಸ್​ನಿಂದ ಇಡೀ ಮರಾಠಾ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.

ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ನಿಗಮ ಮಾಡಿದಕ್ಕೆ ನಿನ್ನೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮರಾಠ- ಕ್ಷತ್ರಿಯ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಗಿದೆ. ಬಹಳಷ್ಟು ವರ್ಷಗಳಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಪಕ್ಷಾತೀತವಾಗಿ ಬೇಡಿಕೆ ಇತ್ತು. ಆ ಬೇಡಿಕೆ ಈಡೇರಿಕೆಗೆ ಸಿಎಂ ಅವರನ್ನು ಭೇಟಿಯಾಗಿ‌ ಅಭಿನಂದಿಸಲಾಗಿದೆ. ಈ ವೇಳೆ, ಅವರು ಇನ್ನೂ ಹೆಚ್ಚಿನ ಅನುದಾನದ ಭರವಸೆ ನೀಡಿದ್ದಾರೆ. ನಾವು ಮರಾಠ ಪ್ರಾಧಿಕಾರ ರಚನೆ ಹಿಂಪಡೆಯುವಂತೆ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅನಿಲ ಬೆನಕೆ

ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ವಿರೋಧಿಸಿ ಬಂದ್‌ಗೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಂದ್‌ಗೆ ಕರೆ ನೀಡಿದ ಸಂಘಟನೆಗಳಲ್ಲೇ ಮರಾಠ ಸಮುದಾಯದವರಿದ್ದಾರೆ. ಮರಾಠ, ಮರಾಠಿ ಮಧ್ಯದ ವ್ಯತ್ಯಾಸವನ್ನು ಸಂಘಟನೆಗಳು ತಿಳಿದುಕೊಳ್ಳಬೇಕು. ಕನ್ನಡ ಮಾತನಾಡುವ ಹಲವರು ಮರಾಠ ಸಮುದಾಯದಲ್ಲಿದ್ದಾರೆ. ಮರಾಠಾ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದ್ದಾರೆ. ಕೆಲ ಕನ್ನಡಪರ ಸಂಘಟನೆಗಳಲ್ಲೂ ಮರಾಠ ಸಮುದಾಯ ಕಾರ್ಯಕರ್ತರಿದ್ದಾರೆ. ಹೀಗಾಗಿ ಮರಾಠ ಸಮುದಾಯದಲ್ಲಿರುವ ಕನ್ನಡಿಗರಿಗೆ ಅನ್ಯಾಯ ಆಗಬಾರದು. ಮರಾಠ ಸಮುದಾಯದೊಳಗೆ ಎಂಇಎಸ್‌ ಇದೆ. ಆದ್ರೆ, ಅದು ಒಂದು ಸಂಘಟನೆ ಮಾತ್ರ ಹೀಗಾಗಿ ಎಂಇಎಸ್ ಸೇರಿದಂತೆ ಯಾರು ವಿರೋಧಿಸಿಬಾರದು ಎಂದರು.

ಮರಾಠಿಗರು ಕನ್ನಡ ಭಾಷೆ ಒಪ್ಪಿಕೊಂಡಿದ್ದಾರೆ. ಕೆಲವರಷ್ಟೇ ಒಪ್ಪಿಕೊಂಡಿಲ್ಲ. ಎಂಇಎಸ್ ಸಂಘಟನೆಯೇ ಬೇರೆ, ಮರಾಠ ಸಮುದಾಯವೇ ಬೇರೆಯಾಗಿದೆ‌. ಎಂಇಎಸ್‌ನವರು ಸಹ ಈ ನಿಗಮಕ್ಕೆ ವಿರೋಧ ವ್ಯಕ್ತಪಡಿಸಬಾರದು. ಮರಾಠ ನಿಗಮ ವಿರೋಧಿಸಿದರೆ ಅವರೂ ಸಹ ಮರಾಠಿಗರಿಗೆ ಅನ್ಯಾಯ ಮಾಡಿದಂತೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.