ಬೆಳಗಾವಿ: ನಗರದ ಶಿವಗಂಗಾ ಸ್ಕೇಟಿಂಗ್ ಕ್ಲಬ್ ಆಯೋಜಿಸಿದ್ದ ಮೂರು ದಿನಗಳ ಏಷ್ಯನ್ ಚಾಂಪಿಯನ್‌ಶಿಪ್ ರೋಲ್ ಸ್ಕೇಟಿಂಗ್ ಟೂರ್ನಾಮೆಂಟ್ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದರು.
ನಗರದ ಶಿವಗಂಗಾ ಸ್ಕೇಟಿಂಗ್ ಕ್ಲಬ್, ಭಾರತೀಯ ರೋಲ್ ಬಾಲ್ ಫೆಡರೇಶನ್ ಪ್ರಾಯೋಜಕತ್ವದಲ್ಲಿ ನಡೆದ ಏಷ್ಯನ್ ರೋಲ್ ಬಾಲ್ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ನಡೆಯಿತು. ಹತ್ತು ದೇಶಗಳ ಸುಮಾರು 150 ಸ್ಪರ್ಧಿಗಳು ಭಾಗವಹಿಸಿದ್ದರು. ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾ ತಂಡಗಳು ಭಾರತದ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದರು.
ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡ ಬಾಂಗ್ಲಾದೇಶವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇನ್ನು ಮಹಿಳಾ ತಂಡ ಬಾಂಗ್ಲಾದೇಶದ ವನಿತೆಯರನ್ನು ಸೋಲಿಸಿ ಫೈನಲ್ ಗೆಲುವಿನಲ್ಲಿ ನಗೆ ಬೀರಿದೆ.
ಕ್ರಮವಾಗಿ ಪುರುಷರ ವಿಭಾಗದಲ್ಲಿ ಬಾಂಗ್ಲಾದೇಶ ಹಾಗೂ ನೇಪಾಳ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.