ETV Bharat / state

ಸವದಿ, ಕತ್ತಿ, ಜಾರಕಿಹೊಳಿ ಬ್ರದರ್ಸ್ ಭಿನ್ನರಾಗ: ನಿರಾಣಿ, ಶಹಾಪುರಗೆ ಹೆಚ್ಚಿದ ಆತಂಕ - ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ

ನಿನ್ನೆ ಬೆಳಗಾವಿಯ ಸಂಕಂ ಹೋಟೆಲ್​ನಲ್ಲಿ ಜನಪ್ರತಿನಿಧಿಗಳು ಹಾಗೂ ಪ್ರಮುಖರ ಸಭೆ ಕರೆಯಲಾಗಿತ್ತು. ಜಿಲ್ಲೆಯ 13 ಹಾಲಿ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಭೆಗೆ 9 ಶಾಸಕರು ಗೈರಾಗಿದ್ದು, ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿಗೆ ಆತಂಕ ಶುರುವಾಗಿದೆ.

ಅರುಣ್ ಶಹಾಪುರ  ಹನುಮಂತ ನಿರಾಣಿ
ಅರುಣ್ ಶಹಾಪುರ ಹನುಮಂತ ನಿರಾಣಿ
author img

By

Published : May 18, 2022, 12:35 PM IST

ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಪರಿಷತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿ ಬಿಜೆಪಿ ನಾಯಕರ ಭಿನ್ನರಾಗ ಅಭ್ಯರ್ಥಿಗಳ ಎದೆಬಡಿತ ಹೆಚ್ಚಾಗಲು ಕಾರಣವಾಗಿದೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ವಾಯವ್ಯ ಪದವೀಧರ ಹಾಗೂ ವಾಯವ್ಯ ಶಿಕ್ಷಕ ಕ್ಷೇತ್ರಗಳಿಗೆ ಬೆಳಗಾವಿ ಮತದಾರರೇ ನಿರ್ಣಾಯಕರು. ಚುನಾವಣೆ ಅಖಾಡಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿರುವ ಪರಿಷತ್ ಸದಸ್ಯ ರವಿಕುಮಾರ್ ಧುಮಕಿದ್ದಾರೆ. ನಿನ್ನೆಯಷ್ಟೇ ಬೆಳಗಾವಿಯ ಸಂಕಂ ಹೋಟೆಲ್​ನಲ್ಲಿ ಜನಪ್ರತಿನಿಧಿಗಳು ಹಾಗೂ ಪ್ರಮುಖರ ಸಭೆ ಕರೆಯಲಾಗಿತ್ತು. ಜಿಲ್ಲೆಯ 13 ಹಾಲಿ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಭೆಗೆ 13 ಶಾಸಕರ ಪೈಕಿ 9 ಶಾಸಕರು ಗೈರಾಗಿದ್ದು, ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿಗೆ ಆತಂಕ ಶುರುವಾಗಿದೆ.

ಅರುಣ್ ಶಹಾಪುರ
ಅರುಣ್ ಶಹಾಪುರ
ಹನುಮಂತ ನಿರಾಣಿ
ಹನುಮಂತ ನಿರಾಣಿ

ಬಿಜೆಪಿ ಹೈಕಮಾಂಡ್‍ಗೂ ತಲೆನೋವು: ಬೆಳಗಾವಿ ಬಿಜೆಪಿ ನಾಯಕರ ಭಿನ್ನರಾಗ ಬಿಜೆಪಿ ಹೈಕಮಾಂಡ್‍ಗೂ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ನಾಯಕರನ್ನು ಒಗ್ಗೂಡಿಸಲು ಸ್ವತಃ ಮಾಜಿ ಸಿಎಂ ಬಿಎಸ್‍ವೈ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಬೆಳಗಾವಿಗೆ ಬಂದು ಹೋದರೂ ಪರಿಸ್ಥಿತಿ ಸುಧಾರಿಸಿಲ್ಲ. ಕಳೆದ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ನಾಯಕರ ಮಧ್ಯದ ವೈಮನಸ್ಸು ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲಿಗೆ ಕಾರಣವಾಗಿತ್ತು. ಜಿಲ್ಲೆಯಲ್ಲಿ ಇಬ್ಬರು ಸಚಿವರು, ಮೂವರು ಸಂಸದರು, 13 ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿ ಸೋಲು ನಾಯಕರಲ್ಲಿ ಆಘಾತ ಮೂಡಿಸಿತ್ತು.

ಸಚಿವ ಉಮೇಶ್​ ಕತ್ತಿ
ಸಚಿವ ಉಮೇಶ್​ ಕತ್ತಿ

ಆದರೂ, ಸೋಲಿಗೆ ಕಾರಣವನ್ನು ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪರಾಮರ್ಶೆ ಮಾಡಿದರೆ ಹೊರತು, ಭಿನ್ನಮತೀಯ ನಾಯಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಿಲ್ಲ. ಇನ್ನಾದರೂ ಬಿಜೆಪಿ ನಾಯಕರನ್ನು ಒಗ್ಗೂಡಿಸದಿದ್ದರೆ ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಚುನಾವಣೆ ಮುನ್ನವೇ ಬಿಜೆಪಿ ನಾಯಕರು ಬೆಳಗಾವಿಗೆ ಭೇಟಿ ನೀಡಿ, ನಾಯಕರಲ್ಲಿ ಸಮನ್ವಯತೆ ಸಾಧಿಸಬೇಕಿದೆ. ಇಲ್ಲವಾದರೆ ಬಿಜೆಪಿ ಅಭ್ಯರ್ಥಿಗಳಿಗೆ ಸೋಲು ತಪ್ಪಿದ್ದಲ್ಲ.

ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಯಾರು ಗೈರು, ಯಾರು ಹಾಜರು: ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಯ ಸಂಕಂ ಹೋಟೆಲ್​ನಲ್ಲಿ ನಿನ್ನೆ ಎಂಎಲ್‍ಸಿ ರವಿಕುಮಾರ್ ನೇತೃತ್ವದಲ್ಲಿ ಬಿಜೆಪಿ ನಾಯಕರ ಆಂತರಿಕ ಸಭೆ ನಡೆಸಲಾಯಿತು. ಚುನಾವಣೆಯಲ್ಲಿ ಗೆಲುವಿಗೆ ಬೇಕಾದ ರಣತಂತ್ರ ರೂಪಿಸಲಾಯಿತು. ಇದಕ್ಕಾಗಿಯೇ ಜಿಲ್ಲೆಯ ಮಹಾನಗರ, ಗ್ರಾಮಾಂತರ ಹಾಗೂ ಚಿಕ್ಕೋಡಿ ವಿಭಾಗದ ಪ್ರಮುಖರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಅಲ್ಲದೇ, ಮೂವರು ಸಂಸದರು ಹಾಗೂ ಇಬ್ಬರು ಸಚಿವರು ಸೇರಿ 13 ಶಾಸಕರಿಗೆ ಆಹ್ವಾನ ನೀಡಲಾಗಿತ್ತು.

ಸಭೆಗೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ಪಿ. ರಾಜೀವ್, ಮಹಾಂತೇಶ ದೊಡ್ಡಗೌಡರ, ಸಂಸದರಾದ ಮಂಗಲ ಅಂಗಡಿ, ಅಣ್ಣಾಸಾಬ್ ಜೊಲ್ಲೆ ಹಾಗೂ ಅಭ್ಯರ್ಥಿಗಳಾದ ಅರುಣ್ ಶಹಾಪುರ, ಹನುಮಂತ ನಿರಾಣಿ ಹಾಜರಿದ್ದರು. ಉಳಿದಂತೆ ಜಿಲ್ಲೆಯ ಘಟಾನುಘಟಿ ನಾಯಕರಾದ ಸಚಿವ ಉಮೇಶ್​ ಕತ್ತಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಅನಿಲ್ ಬೆನಕೆ ಹಾಗೂ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಗೈರಾಗಿದ್ದರು. ಜನಪ್ರತಿನಿಧಿಗಳ ಗೈರನ್ನು ಗಂಭೀರವಾಗಿ ಪರಿಗಣಿಸಿರುವ ರವಿಕುಮಾರ್, ಬಿಜೆಪಿ ಅಧ್ಯಕ್ಷರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

ಮಾಜಿ ಸಚಿವ ರಮೇಶ ಜಾರಕಿಹೊಳಿ
ಮಾಜಿ ಸಚಿವ ರಮೇಶ ಜಾರಕಿಹೊಳಿ

ಅಭ್ಯರ್ಥಿಗಳಿಗೆ ಡವಡವ: ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಅಭ್ಯರ್ಥಿಗಳು ಬೆಳಗಾವಿ ಮೂಲದವರಲ್ಲ. ಹನುಮಂತ ನಿರಾಣಿ ಬಾಗಲಕೋಟೆ ಹಾಗೂ ಅರುಣ್ ಶಹಾಪುರ ವಿಜಯಪುರದವರು. ಆದರೆ ಬೆಳಗಾವಿ ನಾಯಕರ ಭಿನ್ನರಾಗಕ್ಕೆ ಈ ಇಬ್ಬರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್, ಪ್ರಬಲ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ನ್ಯಾಯವಾದಿ ಸುನೀಲ ಸಂಕ್‍ರಿಗೆ ಟಿಕೆಟ್ ನೀಡಿದೆ. ಬೆಳಗಾವಿ ನಾಯಕರು ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲರಾಗಿದಾರೆ. ತಮ್ಮ ಪ್ರತಿಷ್ಠೆಗಾಗಿ ಚುನಾವಣೆಯಲ್ಲಿ ಶ್ರಮಿಸದಿದ್ದರೆ ನಕಾರಾತ್ಮಕ ಪರಿಣಾಮ ಬೀರುವ ಆತಂಕದಲ್ಲಿ ಅಭ್ಯರ್ಥಿಗಳಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಕಾಂಗ್ರೆಸ್ ಆಂತರಿಕ ಕಲಹ: ರಾಜೀನಾಮೆ ನೀಡಿದ ಹಾರ್ದಿಕ್​ ಪಟೇಲ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.