ETV Bharat / state

ಕ್ವಾರಂಟೈನ್​​ನಿಂದ ಬಿಡುಗಡೆಯಾಗಿ ಪಾರ್ಟಿ ಕೊಟ್ಟ ವ್ಯಕ್ತಿಗೆ ಬಂತು ಕೊರೊನಾ: ತಂದಿತು ಆತಂಕ

author img

By

Published : Jun 2, 2020, 1:40 PM IST

ಕ್ವಾರಂಟೈನ್​​ನಿಂದ ಬಿಡುಗಡೆಯಾದ ಬಳಿಕ ತನ್ನ 25 ಸ್ನೇಹಿತರಿಗೆ ಪಾರ್ಟಿ ಕೊಟ್ಟ ವ್ಯಕ್ತಿಗೆ ಸೋಂಕು ಖಚಿತವಾಗಿರುವುದು ವರದಿಯಲ್ಲಿ ಗೊತ್ತಾಗಿದೆ.

Increased anxiety in Nanadivadi village
ನಣದಿವಾಡಿ ಗ್ರಾಮ

ಚಿಕ್ಕೋಡಿ (ಬೆಳಗಾವಿ): ಕ್ವಾರಂಟೈನ್​ನಿಂದ ಬಿಡುಗಡೆಯಾಗಿದ್ದಕ್ಕೆ ಪಾರ್ಟಿ ಕೊಟ್ಟ ಭೂಪನಿಗೆ ಕೊರೊನಾ ವಕ್ಕರಿಸಿದ್ದು, ಚಿಕ್ಕೋಡಿಯ ನಣದಿವಾಡಿ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ. ಗ್ರಾಮವನ್ನ ಈಗ ಬಫರ್​ ಝೋನ್​ ಎಂದು ಘೋಷಿಸಲಾಗಿದೆ.

ಹೊರ ರಾಜ್ಯಗಳಿಂದ ಬಂದವರಿಗೆ 14 ದಿನ ಕ್ವಾರಂಟೈನ್‌ ಮಾಡಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರದ ಆದೇಶ ಬಂದಿದೆ ಎಂದು ಹೇಳಿ ವ್ಯಕ್ತಿಯೊಬ್ಬರನ್ನು 7 ದಿನಗಳಲ್ಲಿ ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಿ ಕಳುಹಿಸಲಾಗಿತ್ತು.

ನಣದಿವಾಡಿ ಗ್ರಾಮ

ಬಿಡುಗಡೆಗೂ ಮುನ್ನ ಆತನ ಗಂಟಲು ದ್ರವ ಮತ್ತು ರಕ್ತದ ಮಾದರಿ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಕ್ವಾರಂಟೈನ್​ನಿಂದ ಬಿಡುಗಡೆಯಾದ ಬಳಿಕ ಗ್ರಾಮದಲ್ಲಿ ಕ್ಷೌರಿಕನೊಂದಿಗೆ ಹೇರ್​ಕಟ್​ ಮಾಡಿಸಿಕೊಂಡಿದ್ದಾನೆ. ಈತನಾದ ಬಳಿಕ ಆ ಕ್ಷೌರಿಕ 100ಕ್ಕೂ ಹೆಚ್ಚು ಮಂದಿಗೆ ಹೇರ್​​ಕಟ್ ಮಾಡಿದ್ದಾನೆ.

ಹೇರ್​ಕಟ್ ಮಾಡಿಸಿಕೊಂಡ ದಿನವೇ 25 ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾನೆ ಎನ್ನಲಾಗಿದೆ. ಹೀಗಾಗಿ ಗ್ರಾಮದ ಜನರನ್ನೇ ಕ್ವಾರಂಟೈನ್‌ಗೆ ಒಳಪಡಿಸುವ ಭೀತಿ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.