ETV Bharat / state

ಸಚಿವ ಸ್ಥಾನಕ್ಕಿಂತಲೂ ಹೆಚ್ಚಾಗಿ ನಾನು ಚುನಾವಣೆ ತಯಾರಿ ಮಾಡುತ್ತಿದ್ದೇನೆ: ರಮೇಶ್ ಜಾರಕಿಹೊಳಿ

ನನನ್ನು ಮಂತ್ರಿ ಮಾಡು ವಿಚಾರವೆಲ್ಲವೂ ಸಿಎಂ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ - ವಿರೋಧ ಮಾಡೋರು ವಿರೋಧ ಮಾಡಲಿ ನಾವೇನೂ ಮಾಡಬೇಕು ಮಾಡುತ್ತೇವೆ ಎಂದ ರಮೇಶ್ ಜಾರಕಿಹೊಳಿ - ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಾವೇಶಕ್ಕೆ ಪ್ಲಾನ್​​

MLA Ramesh Jarakiholi
ಶಾಸಕ ರಮೇಶ ಜಾರಕಿಹೊಳಿ
author img

By

Published : Jan 19, 2023, 2:45 PM IST

Updated : Jan 19, 2023, 4:15 PM IST

ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ

ಬೆಳಗಾವಿ: ನಾವಂತೂ ಕಳೆದ ಎರಡು ತಿಂಗಳಿಂದ ವಿಧಾನ ಸಭೆ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ನಾನು ಮಂತ್ರಿಯಾಗುವುದರ ಬಗ್ಗೆ ತಲೆ ಕೆಡಸಿಕೊಂಡಿಲ್ಲ. ಮಂತ್ರಿ ಮಾಡು ವಿಚಾರವೆಲ್ಲವೂ ಸಿಎಂ ಮತ್ತು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ. ಅವರು ಏನು ಆದೇಶ ಕೊಡುತ್ತಾರೆ ಅದರ ಪ್ರಕಾರ ಕೆಲಸ ಮಾಡುತ್ತೇನೆ ಎಂದು ಶಾಸಕರಾದ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ರಮೇಶ್​ ಜಾರಕಿಹೊಳಿ ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಬಿಜೆಪಿಯಲ್ಲೇ ಉಳಿಯುತ್ತೇನೆ ಎಂದು ಬಹಳ ಸ್ಪಷ್ಟವಾಗಿ ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ 2023ರ ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟು ವರಿಷ್ಠರು ಹೇಳಿದ ಕಡೆ ಹೋಗಿ ಕೆಲಸ ಮಾಡಿ ಬಿಜೆಪಿ ಪಕ್ಷ ಪೂರ್ಣ ಬಹುಮತ ತರಲು ಪ್ರಯತ್ನ ಮಾಡುತ್ತೇನೆ ಎಂದರು.

ಸಕ್ಕರೆ ಕಾರ್ಖಾನೆ ಅವ್ಯವಹಾರ ಬಯಲು: ರಮೇಶ್ ಜಾರಕಿಹೊಳಿ ಮಂತ್ರಿಯಾದ್ರೇ ಸಕ್ಕರೆ ಕಾರ್ಖಾನೆಯಲ್ಲಿ ಮಾಡಿದ ಅವ್ಯವಹಾರ ಬಯಲು ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಚಿವರು ಪ್ರತಿಕ್ರಿಯಿಸಿದರು. ಅವರಿಗೆ ಮೋಸ್ಟ್ ವೆಲ್ ಕಮ್, ಇದನ್ನ ಸ್ವಾಗತ ಮಾಡುತ್ತೇನೆ ಎಂದು ವ್ಯಂಗ್ಯ ಮಾಡಿದರು. ಇಷ್ಟು ದಿನ ಯಾಕೆ ಸುಮ್ಮನೆ ಕುಳಿತಿದ್ದರು, ವಿರೋಧ ಮಾಡೋರೆ ವಿರೋಧಿ ಮಾಡಲಿ ನಾವೇನೂ ಮಾಡಬೇಕು ಮಾಡುತ್ತೇವೆ ಎಂದು ಹೇಳಿದರು. ಕಾನೂನು ಬದ್ಧವಾಗಿ ಸಕ್ಕರೆ ಕಾರ್ಖಾನೆ ನನ್ನ ಮಗ ನಡೆಸುತ್ತಾನೆ. ಕಳೆದ ಆರು ವರ್ಷದಿಂದ ಕಾರ್ಖಾನೆಗೆ ನಾನು ಕಾಲಿಟ್ಟಿಲ್ಲ ಎಂದರು. ಆ ಫ್ಯಾಕ್ಟರಿ ವ್ಯವಹಾರ ನನ್ನ ಮಗ ನೋಡುತ್ತಾನೆ. ಅವನು ಅದಕ್ಕೆ ಉತ್ತರ ಕೊಡ್ತಾನೆ ಅಂತಾ ಡಿಕೆಶಿಗೆ ತಿರುಗೇಟು ನೀಡಿದರು.

ಬಿಕೆ ಹರಿಪ್ರಸಾದ್ 17ಜನ ಶಾಸಕರನ್ನ ವೆಷ್ಯಯರಿಗೆ ಹೋಲಿಸಿದ ವಿಚಾರ: ಬಿಕೆ ಹರಿಪ್ರಸಾದ್ ಅಂದಾಜು ತಪ್ಪು ಮಾತನಾಡಿರಬೇಕು ಆ ರೀತಿ ಮಾತಾಡುವ ಮನುಷ್ಯ ಅಲ್ಲಾ ಎನೋ ತಪ್ಪಿ ಮಾತಾಡಿರಬೇಕು ಎಂದು ಆ ಹೇಳಿಕೆಯನ್ನ ಸರ್ಮಥಿಸಿದಂತೆ ಉತ್ತರಿಸಿದರು. ನಾನು ಪೂರ್ಣ ಪ್ರಮಾಣದಲ್ಲಿ ನೋಡಿಲ್ಲ ನಮ್ಮ ಮಿತ್ರರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.

17 ಶಾಸಕರ ಸಿಡಿ ಬಿಡುಗಡೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು 17 ಜನ ಶಾಸಕರ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಈ ಹೇಳಿಕೆ ವಿಚಾರವಾಗಿ ಮಾತನಾಡಿ ಬಿಡಿ, ಸಿಡಿಗಳನ್ನ ಇಟ್ಟುಕೊಂಡು ಕುರಬಾರದು ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಬಹಿರಂಗ ಪಡಿಸಿ ಇಂತಹ ನೂರು ಸಿಡಿ ಬರಲಿ ಎಲ್ಲ ಶಾಸಕರು ಫೈಟ್ ಮಾಡಲು ರೆಡಿ ಇದ್ದಾರೆ. ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಜನರಿಗೆ ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಉತ್ತರ ಕೊಡ್ತಾರೆ ಎಂದು ಗುಡುಗಿದರು.

ಬಿಟ್ಟು ಹೋದ ಶಾಸಕರು ಕಾಂಗ್ರೆಸ್‌ಗೆ ಬಂದರೆ ಸ್ವಾಗತ : ಈಗಾಗಲೇ ಪಕ್ಷ ತೊರೆದು ಬಿಜೆಪಿ ಪಕ್ಷದಲ್ಲಿರುವ ನಾಯಕರು ಮತ್ತೆ ಕಾಂಗ್ರೆಸ್​ಗೆ ಬಂದರೆ ಸ್ವಾಗತ ಮಾಡುತ್ತೇನೆ ಎಂಬ ಡಿಕೆ ಶಿವಕುಮಾರ್​ ಹೇಳಿಕೆಗೆ ರಮೇಶ್​ ಪ್ರತಿಕ್ರಿಯಿಸಿದರು. ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ, ಉಳಿದವರ ಬಗ್ಗೆ ಗೊತ್ತಿಲ್ಲ ನನಗೆ ಗೊತ್ತಿರುವ ಹಾಗೇ ಯಾರು ಬಿಜೆಪಿ ಪಕ್ಷ ಬಿಡುವುದಿಲ್ಲ ಕಾಂಗ್ರೆಸ್ ಪರಿಸ್ಥಿತಿ ಏನಿದೆ ಇಡೀ ದೇಶಕ್ಕೆ ಗೊತ್ತಿದೆ ಎಂದ ಹೇಳಿದರು.

ನಮ್ಮ ವರಿಷ್ಠರು ನಾಳೆ ದಿಲ್ಲಿಯಿಂದ ಬಂದು ಕುಳಿತು ಕೊಂಡರೆ ಕಾಂಗ್ರೆಸ್ ಗಾಳಿಪಟ ಆಗುತ್ತೆ. ಆ ಪಕ್ಷಕ್ಕೆ ಭವಿಷ್ಯ ಇಲ್ಲಾ ಬಿಜೆಪಿ ಇನ್ನೂ ಇಪ್ಪತ್ತು ವರ್ಷ ಅಲುಗಾಡಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಕಾಂಗ್ರೆಸ್​ ಪಕ್ಷದ ವಿರುದ್ದ ಪ್ರತ್ಯೇಕ್ಷವಾಗಿ ಕಿಡಿಕಾರಿದರು.

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ವಿಚಾರ : ಮೋದಿ ಅವರು ಕರ್ನಾಟಕ ಅಷ್ಟೇ ಅಲ್ಲಾ ಇಡೀ ದೇಶಕ್ಕೆ ಪ್ರಭಾವ ಬೀರಿದ್ದಾರೆ. ಕರ್ನಾಟಕಕ್ಕೆ ಬರುವುದರಿಂದ ಬಿಜೆಪಿಗೆ ಅನುಕೂಲ ಆಗಲಿದೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು. ಹಾಗೂ ಮೋದಿ ರಾಜ್ಯಕ್ಕೆ ಎಷ್ಟು ಸಾರಿ ಬರುತ್ತಾರೊ ಅಷ್ಟು ಒಳ್ಳೆಯದ್ದು ಎಂದು ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಾವೇಶಕ್ಕೆ ಪ್ಲ್ಯಾನ್ ವಿಚಾರವಾಗಿಯೂ ಮಾತನಾಡಿದರು. ಚುನಾವಣೆ ಬಂದಾಗ ಎಲ್ಲ ಪಕ್ಷ ಸಮಾವೇಶ ಮಾಡುವುದು ಸಹಜ ಅದರ ವಿಶೇಷ ಏನಿಲ್ಲ ಇದರ ಬಗ್ಗೆ ತಲೆ ಕೆಡಸಿಕೊಳ್ಳಬೇಕಿಲ್ಲ ಎಂದು ಪ್ರತಿಕ್ರಿಯಿಸಿದರು.

ಗ್ರಾಮೀಣ ಕ್ಷೇತ್ರದಲ್ಲಿ ಮತದಾರರಿಗೆ ಗಿಪ್ಟ್ : ನಾನು ಗಿಪ್ಟ್ ಕೊಡುವುದಿಲ್ಲ. ಆದರೆ, ಕೊನೆಗೆ ಒಮ್ಮೆ ಕೊಡುವುದಿದೆ. ಆವರು ಎಷ್ಟು ಕೊಡುತ್ತಾರೆ. ಅದರ ಡಬಲ್ ಕೊಡುವುದಾಗಿ ಹೇಳಿದ್ದಿದೆ. ನೋಡೋಣ ಎಂದರು. ಗ್ರಾಮೀಣ ಕ್ಷೇತ್ರದಲ್ಲಿ ಸಮಾವೇಶ ಮಾಡುತ್ತಿರುವುದು ಬಿಜೆಪಿ ಸಮಾವೇಶ ಅಲ್ಲ, ಬಿಜೆಪಿ ಪಕ್ಷದಿಂದ ಸಮಾವೇಶ ಮಾಡುವಾಗ ಗ್ರಾಮೀಣ ಅಧ್ಯಕ್ಷರ ನೇತೃತ್ವದಲ್ಲಿ ಮಾಡುತ್ತೇವೆ ಎಂದರು. ನಾಳೆ ನಡೆಯಲಿರುವ ಸಮಾವೇಶ ನಮ್ಮ ಟೀಮ್ ಮಾಡುತ್ತಿದೆ ಅದು ಪಕ್ಷಾತೀತವಾಗಿ ನಡೆದಿದೆ. ಗಿಪ್ಟ್ ಹಂಚಲಿ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ರಿಯಾಕ್ಟ್ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ :ಅಮಿತ್ ಶಾ ಭೇಟಿಯಾದ ಜಾರಕಿಹೊಳಿ: ಸಂಪುಟ ವಿಸ್ತರಣೆ ಕುರಿತು ನಡೆಯದ ಚರ್ಚೆ

Last Updated : Jan 19, 2023, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.