ಬೆಳಗಾವಿ: ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಸವದತ್ತಿ ಜನರ ಮೊಗದಲ್ಲಿ ಮಳೆರಾಯ ತುಸು ಖುಷಿ ತರಿಸಿದ್ದಾನೆ.
ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಯಿಂದ ರಸ್ತೆಗಳೆಲ್ಲವೂ ಜಲಾವೃತಗೊಂಡು, ಸವದತ್ತಿಯ ರೇಣುಕಾ ದೇವಿಯ ದರ್ಶನಕ್ಕೆ ಆಗಮಿಸಿದ್ದ ಭಕ್ತ ಸಮೂಹ ಮಳೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಭಾರಿ ಮಳೆಯಿಂದ ಸವದತ್ತಿ ಗುಡ್ಡದ ಹಳ್ಳಗಳಿಗೆ ಜೀವಕಳೆ ಬಂದಿದೆ. ಅಲ್ಲದೇ ಮುಂಗಾರು ಬಿತ್ತನೆ ಮಾಡಿದ ತಾಲೂಕಿನ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಮಳೆಯಿಂದ ರಸ್ತೆಗಳು ಜಲಾವೃತಗೊಂಡ ಕಾರಣ ಪಟ್ಟಣದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.