ಕಿತ್ತೂರ(ಬೆಳಗಾವಿ): ಖಾನಾಪುರ ತಾಲೂಕಿನಲ್ಲಿ ಕುಂಭದ್ರೋಣ ಮಳೆ ಆರ್ಭಟಕ್ಕೆ ಎಂ.ಕೆ.ಹುಬ್ಬಳ್ಳಿಯಲ್ಲಿನ ಶರಣೆ ಗಂಗಾಂಬಿಕಾ ಐಕ್ಯಮಂಟಪ ಮುಳುಗಡೆಯಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಮಲಪ್ರಭಾ ನದಿ ಅಪಾಯಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದಾಗಿ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಬಸವಣ್ಣನವರ ಧರ್ಮಪತ್ನಿ ಶರಣೆ ಗಂಗಾಂಬಿಕಾ ಐಕ್ಯ ಮಂಟಪ ಮುಳುಗಡೆಯಾಗಿದೆ.
ಇದಲ್ಲದೇ ಎಂ.ಕೆ.ಹುಬ್ಬಳ್ಳಿ ಬಳಿ ಹಾದು ಹೋಗಿರುವ ಮಲಪ್ರಭಾ ನದಿ ತೀರದ ಗದ್ದೆಗಳಿಗೂ ನುಗ್ಗಿದ ನೀರು ಹೊಕ್ಕಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಗಳು ಜಲಾವೃತವಾಗಿವೆ.