ಚಿಕ್ಕೋಡಿ: ಕೊರೊನಾ ಎಫೆಕ್ಟನಿಂದ ಕೋಳಿ ಮಾರುಕಟ್ಟೆ ವ್ಯಾಪಾರ ವಹಿವಾಟು ಕುಸಿದ ಹಿನ್ನೆಲೆ ಉಚಿತವಾಗಿ ಕೋಳಿ ವಿಚರಣೆ ಮಾಡಲಾಯಿತು.
ಚಿಕನ್ ತಿಂದರೆ ಕೊರೊನಾ ಬರುತ್ತದೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕೋಳಿ ಮಾರಾಟದಲ್ಲಿ ಇಳಿಕೆಯಾಗಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವಿವಿಧ ಬಡವಾಣೆಗಳಾದ ಪ್ರಭುವಾಡಿ, ರಾಮನಗರ, ಝಾರಿಗಲ್ಲಿಗಳಲ್ಲಿ 5 ಈಚರ್ ವಾಹನದಲ್ಲಿ 5 ಸಾವಿರಕ್ಕೂ ಅಧಿಕ ಕೋಳಿಗಳನ್ನು ಚಿಕ್ಕೋಡಿ ಪಟ್ಟಣದ ಸುತ್ತಮುತ್ತಲಿನ ಕೋಳಿ ವ್ಯಾಪಾರಸ್ಥರು ಉಚಿತವಾಗಿ ನೀಡಿದ್ರು.
ಇತ್ತೀಚೆಗಷ್ಟೆ ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ 5 ಸಾವಿರಕ್ಕಿಂತ ಹೆಚ್ಚು ಕೋಳಿಗಳನ್ನು ಜೀವಂತ ಸಮಾಧಿ ಮಾಡಿರುವ ಘಟನೆ ನಡೆದಿತ್ತು. ಒಟ್ಟಾರೆಯಾಗಿ ಹಕ್ಕಿ ಜ್ವರ ಹಾಗೂ ಕೊರೊನಾ ವೈರಸ್ ವದಂತಿ ಹಿನ್ನೆಲೆಯಲ್ಲಿ ಕೋಳಿ ವ್ಯಾಪಾರಸ್ಥರು ಕೋಳಿಗಳನ್ನು ಉಚಿತವಾಗಿ ಮಾರಾಟ ಮಾಡಲು ಮುಂದಾಗಿದ್ದು, ಇದರಿಂದ ಕೋಳಿ ಉದ್ಯಮಿದಾರರು ಅಕ್ಷರಶಃ ಬೀದಿಗೆ ಬಂದಂತಾಗಿದೆ.