ಬೆಳಗಾವಿ: ಕೊರೊನಾಗೆ ಇಂದು ಒಂದೇ ದಿನ ನಗರದ ನಾಲ್ವರು ಮೃತಪಟ್ಟಿದ್ದು, ಹೊಸದಾಗಿ ನಾಲ್ವರಿಗೆ ಸೋಂಕು ವಕ್ಕರಿಸಿದೆ.
ಬೆಳಗಾವಿಯಲ್ಲಿ ಈವರೆಗೆ ಕೊರೊನಾಗೆ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 789ಕ್ಕೆ ತಲುಪಿದೆ.
ಜಿಲ್ಲೆಯಲ್ಲಿ ಸದ್ಯ 391 ಕೊರೊನಾ ಪಾಸಿಟಿವ್ ಕೇಸ್ಗಳಿದ್ದು, ಈ ಎಲ್ಲಾ ಸೋಂಕಿತರಿಗೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.