ETV Bharat / state

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರ ಬಂಧನ

ಬೆಳಗಾವಿ ನಗರದಲ್ಲಿ ಮಹಿಳಾ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಗರದ ಹಿಂಡಲಗಾ-ಸುಳಗಾ ರೋಡನಲ್ಲಿರುವ ಅಂಬಿಕಾ ಲಾಡ್ಡ್ & ಬೋರ್ಡಿಂಗ್​ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 4 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳ ಬಂಧನ

author img

By

Published : Jul 27, 2022, 10:49 PM IST

ಬೆಳಗಾವಿ: ತಾಲೂಕಿನ ಹಿಂಡಲಗಾ-ಸುಳಗಾ ರೋಡ್​ನಲ್ಲಿರುವ ಅಂಬಿಕಾ ಲಾಡ್ಡ್ & ಬೋರ್ಡಿಂಗ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಮಹಿಳಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ನಗರದಲ್ಲಿ ಮಹಿಳಾ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಗರದ ಹಿಂಡಲಗಾ - ಸುಳಗಾ ರೋಡನಲ್ಲಿರುವ ಅಂಬಿಕಾ ಲಾಡ್ಡ್ & ಬೋರ್ಡಿಂಗ್​ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 4 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಪಿಐ ಶ್ರೀದೇವಿ ಪಾಟೀಲ ನೇತೃತ್ವದಲ್ಲಿನ ತಂಡದ ಸಿಬ್ಬಂದಿ ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಅಲ್ಲಿದ್ದ ಮಹಿಳೆಯರನ್ನು ರಕ್ಷಿಸಿದ್ದಾರೆ. ಬಳಿಕ ನಗರದ ಗೌಳ್ಳಿ ಗಲ್ಲಿಯ ಸೋಮನಾಥ್ ಗೌಳಿ, ಕಂಗ್ರಾಳಿ ಕೆ. ಹೆಚ್ ಗ್ರಾಮದ ರಾಹುಲ್ ಪಾಟೀಲ, ಮಯೂರ್ ಪಾಟೀಲ, ಮಾರಿಹಾಳ ಗ್ರಾಮದ ರಮೇಶ ತಾರಿಹಾಳ ಬಂಧಿತ ಆರೋಪಿಗಳು. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಹಿಳಾ ಠಾಣೆಯ ಪಿಐ ಶ್ರೀದೇವಿ ಮತ್ತವರ ತಂಡದ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಶಿವಮೊಗ್ಗ ಪೊಲೀಸರಿಂದ ಸ್ಪೆಷಲ್ ಡ್ರೈವ್: ಮಾರಕಾಸ್ತ್ರ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.