ETV Bharat / state

ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಮಾಜಿ ಶಾಸಕ ಸಂಜಯ ಪಾಟೀಲ್​​ - ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಂಜಯ್ ಪಾಟೀಲ್ ಟಾಂಗ್

ಯಾರು ಅಭಿವೃದ್ಧಿ ಮಾಡುತ್ತಾರೋ ಅವರು ಏನೂ ಹಂಚುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಂಜಯ್ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಂಜಯ್ ಪಾಟೀಲ್
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಂಜಯ್ ಪಾಟೀಲ್
author img

By

Published : Nov 23, 2022, 9:29 PM IST

ಬೆಳಗಾವಿ: ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ ಎನ್ನುವ ಮೂಲಕ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅಂಜಲಿ ನಿಂಬಾಳ್ಕರ್ ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಟಾಂಗ್ ನೀಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಂಚುವವರು ಹಂಚುತ್ತಾರೆ. ನಾನು ಸದ್ಯಕ್ಕೆ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಾನು ಗಂಡಸು. ನಾನು ಹೇಗೆ ಹಳದಿ, ಕುಂಕುಮ ಕಾರ್ಯಕ್ರಮ ಮಾಡೋಕೆ ಆಗುತ್ತದೆ?. ಕಾರ್ಯಕ್ರಮ ಮಾಡಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಎಲ್ಲರೂ ಏನು ಬೇಕಾದ ಕಾರ್ಯಕ್ರಮ ಮಾಡಬಹುದು. ಅವರವರ ಕಾರ್ಯಕ್ರಮ ಮಾಡುತ್ತಾರೆ. ನಾನು ಪಕ್ಷದ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಬೆಳೆಸಲು ಪಕ್ಷದ ಕಾರ್ಯಕ್ರಮಗಳಲ್ಲಿ ಇರುತ್ತೇನೆ ಎಂದರು.

ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ಟಿಫಿನ್ ಬಾಕ್ಸ್ ಹಂಚುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಫಿನ್ ಬಾಕ್ಸ್ ತೆಗೆದುಕೊಳ್ಳುವವರು, ತೆಗೆದುಕೊಳ್ಳುತ್ತಿರಬಹುದು. ಆದರೆ, ಟಿಫಿನ್ ಬಾಕ್ಸ್ ಅನ್ನು ಬಿಜೆಪಿ ಕಾರ್ಯಕರ್ತರು ಯಾರೂ ತೆಗೆದುಕೊಳ್ಳುವುದಿಲ್ಲ. ಮುಂದೆ ಮತ್ತೆ ಬೇರೆ ಬೇರೆ ಇರಬಹುದು. ಈ ಬಗ್ಗೆ ಚಿಂತನೆ ಮಾಡಬೇಕಿದೆ. ಚುನಾವಣೆ ಅಭಿವೃದ್ಧಿ ಮೇಲೆ ಆಗಬೇಕೇ ಹೊರತು, ಏನಾದ್ರೂ ಹಂಚಿ ಆಗಬಾರದು. ಬಾಬಾಸಾಹೇಬ ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಮತ ಹಾಕುವ ಅಧಿಕಾರ ಕೊಟ್ಟಿದ್ದಾರೆ. ಆ ಮತವನ್ನೂ ಯಾರೂ ಮಾರಾಟ ಮಾಡಿಕೊಳ್ಳಬಾರದು ಎಂದು ಕಿಡಿಕಾರಿದರು.

ಬಡವರ ಮಕ್ಕಳಿಗೆ ಕಲಿಸಬೇಕು: ನಿಮ್ಮ ಪಕ್ಷದವರು ಯಾರೂ ಏನೂ ಹಂಚಿಲ್ಲವೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ನಮ್ಮವರು ಪುಸ್ತಕ ಹಂಚಿದ್ದಾರೆ. ಆದರೆ, ಅವರು ಸಾರಾಯಿಯನ್ನು ಹಂಚುತ್ತಿಲ್ಲವಲ್ಲ. ಪುಸ್ತಕ ಹಂಚಬೇಕು. ಬಡವರ ಮಕ್ಕಳಿಗೆ ಕಲಿಸಬೇಕು. ಇದರಿಂದ ಅವರಿಗೆ ಜ್ಞಾನ ಬರುತ್ತದೆ. ಟಿಫಿನ್ ಬಾಕ್ಸ್ ಚುನಾವಣೆ ಸಂದರ್ಭದಲ್ಲಿ ಹಂಚುವುದು. ನಮಗೆ ಮತ ಹಾಕಬೇಕು ಎಂದು ಷರತ್ತು ಹಾಕುವುದು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗುಡಿ ಕಟ್ಟಲು 50 ಲಕ್ಷ ರೂಪಾಯಿ ಕೊಡುತ್ತೇನೆ. ಒಂದೂ ಬೇರೆ ಟೇಬಲ್‌ ಹಾಕಬಾರದು ಎಂದು ಕಂಡಿಷನ್ ಹಾಕುತ್ತಿದ್ದಾರೆ. ನಾನು 10 ವರ್ಷ ಏನೂ ಕೆಲಸ ಮಾಡಿಲ್ಲ. ಇದನ್ನು ಜನರ ಮೇಲೆ ಬಿಡುತ್ತೇನೆ ಎಂದರು.

ಏನೂ ಹಂಚುವ ಅವಶ್ಯಕತೆ ಇಲ್ಲ: ನಾನು ನಾಳೆ ಬೆಳಗ್ಗೆಯದ್ದನ್ನೇ ನಾನು ಗ್ಯಾರಂಟಿ ಹಿಡಿದುಕೊಳ್ಳುತ್ತಿಲ್ಲ. ನಾಳೆ ಬೆಳಗ್ಗೆ ಏಳುತ್ತೇವೋ ಇಲ್ಲವೋ ಗೊತ್ತಿಲ್ಲ. ಅಂತಹ ಆಸೆ ಇರಬಾರದು. ಯಾರು ಅಭಿವೃದ್ಧಿ ಮಾಡುತ್ತಾರೆ. ಅವರು ಏನೂ ಹಂಚುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಂಜಯ್ ಪಾಟೀಲ್ ಟಾಂಗ್ ಕೊಟ್ಟರು.

ಓದಿ: ಎಸ್​ಡಿಪಿ​ಐ ಕಚೇರಿಗಳಿಗೆ ಬೀಗಮುದ್ರೆ: ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಹೈಕೋರ್ಟ್​ ನೋಟಿಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.