ಚಿಕ್ಕೋಡಿ: ಯಾರಾದರೂ ತೀರಿಕೊಂಡರೆ ವಾಡಿಕೆಯಂತೆ ಮೂರು ದಿನದ ನಂತರ ಕಾಗೆಗಳಿಗೆ ಆಹಾರವನ್ನು ಇಡಲಾಗುತ್ತೆ. ಇಟ್ಟ ಆಹಾರವನ್ನು ಕಾಗೆ ಬಂದು ತಿಂದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾದಂತೆ ಎಂಬ ನಂಬಿಕೆ ಇದೆ.
ಆದರೆ ಇದು ಮೂಢನಂಬಿಕೆ. ಇದನ್ನು ಹೋಗಲಾಡಿಸಬೇಕು ಎಂದು ಬಯಸಿದ ಕೆಲ ಯುವಕರು ಕಾಗೆಗಿಟ್ಟ ಆಹಾರವನ್ನು ತಾವೇ ತಿಂದಿದ್ದಾರೆ. ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದಲ್ಲಿ.
ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸೇವಂತಿ ಕರುಣೆ ಎಂಬ ಮಹಿಳೆ ತೀರಿಕೊಂಡಿದ್ದರು. ಅವರ ಸಮಾಧಿ ಮೇಲೆ ಕಾಗೆಗೆಂದು ಮಹಿಳೆಯ ಸಂಬಂಧಿಕರು ಆಹಾರವಿಟ್ಟಿದ್ದರು. ಆದರೆ ಕಾಗೆಗೋಸ್ಕರ ಸತತ ಒಂದು ಗಂಟೆ ಕಾದರೂ ಸಹ ಕಾಗೆ ಬರದೆ ಇರುವುದನ್ನು ಗಮನಿಸಿದ ಯುವಕರು, ತಾವೇ ಮುಂದಾಗಿ ಆಹಾರ ಸೇವಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ಭೀಮವಾದ ಯುವ ಸೇನೆಗೆ ಸೇರಿದ ಯುವಕರು ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.