ETV Bharat / state

ಹಿಂದೂ ಸಮಾವೇಶದಲ್ಲಿ 'ಕೈ' ವಿರುದ್ಧ ಮುತಾಲಿಕ್‌ ಕಿಡಿ; ಗುಂಡೇಟು ತಗುಲಿದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಭಾಗಿ! - ಫೈರಿಂಗ್ ಮಾಡಿದ ಮೂರು ಆರೋಪಿ

ಭಾನುವಾರ ಬೆಳಗಾವಿಯಲ್ಲಿ ನಡೆದ ವಿರಾಟ್​ ಹಿಂದೂ ಸಮಾವೇಶದಲ್ಲಿ ಕಾಂಗ್ರೆಸ್​ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ತೀವ್ರ ವಾಗ್ದಾಳಿ ನಡೆಸಿದರು.

Fierce attack against Congress  Virat Hindu convention at Belagavi  firing at Belagavi  Virat Hindu sabha in Belagavi  ಗುಂಡೇಟು ಬಿದ್ರೂ ಸಭೆಯಲ್ಲಿ ಭಾಗಿಯಾದ ಜಿಲ್ಲಾಧ್ಯಕ್ಷ  ವಿರಾಟ್​ ಹಿಂದೂ ಸಮಾವೇಶ  ಕಾಂಗ್ರೆಸ್​ ವಿರುದ್ಧ ವಾಗ್ದಾಳಿ  ನೂರಾರು ಹಿಂದೂಪರ ಕಾರ್ಯಕರ್ತರು ಭಾಗಿ  ಸಮಾವೇಶದಲ್ಲಿ ರವಿ ಕೋಕಿತಕರ್ ಭಾಗಿ  ಫೈರಿಂಗ್ ಮಾಡಿದ ಮೂರು ಆರೋಪಿ  ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್
ವಿರಾಟ್​ ಹಿಂದೂ ಸಮಾವೇಶ
author img

By

Published : Jan 9, 2023, 8:12 AM IST

ಬೆಳಗಾವಿ: ನಗರದಲ್ಲಿ ಶ್ರೀರಾಮ ಸೇನೆ ಮತ್ತು ಹಿಂದೂ ರಾಷ್ಟ್ರ ಸೇನಾ ಸಂಯುಕ್ತಾಶ್ರಯದಲ್ಲಿ ನಡೆದ ವಿರಾಟ್ ಹಿಂದೂ ಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ವಾಕ್ಸಮರ ನಡೆಯಿತು. ಧರ್ಮವೀರ ಸಂಭಾಜಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ರಾಷ್ಟ್ರಸೇನಾ ಸಂಸ್ಥಾಪಕ ಧನಂಜಭಾಯ್ ದೇಸಾಯಿ, ಇತ್ತೀಚೆಗೆ ಗುಂಡೇಟಿನಿಂದ ಗಾಯಗೊಂಡಿದ್ದ ಶ್ರೀರಾಮ‌ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹಿಂದೂಪರ ಕಾರ್ಯಕರ್ತರು ಭಾಗಿಯಾಗಿದ್ದರು.

ಹಿಂದೂ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡುತ್ತಾ, 'ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಯ್ತು. ಸ್ವಾತಂತ್ರ್ಯಕ್ಕೂ ಮುನ್ನ ಸ್ವಾತಂತ್ರ್ಯ ಕೊಡಿ ಅಂತಾ ಒಂದೇ ಘೋಷಣೆ ಇತ್ತು. 75 ವರ್ಷಗಳ ಬಳಿಕ ನಾವು 'ದೇಶ ಬಚಾವೋ, ಧರ್ಮ ಬಚಾವೋ, ಹಿಂದೂ ಸಮಾಜ ಬಚಾವೋ' ಎಂಬ ಘೋಷಣೆ ಕೂಗಬೇಕಾಗಿದೆ. ಯಾರಿಂದ, ಏತಕ್ಕಾಗಿ ದೇಶ ಉಳಿಸಬೇಕಾಗಿದೆ. ಮೂರು ದುಷ್ಟ ಶಕ್ತಿಗಳು ಈ ದೇಶದಲ್ಲಿ ಕೆಲಸ ಮಾಡ್ತೀವೆ. ನಮ್ಮ ಶ್ರೇಷ್ಠ ಸಂಸ್ಕೃತಿ, ಧರ್ಮ, ಸಂಪ್ರದಾಯ ನಷ್ಟ ಮಾಡಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ ಎಂದರು.

ದೇಶದ್ರೋಹಿ, ಮತಾಂತರ, ಲವ್ ಜಿಹಾದ್​ನಂತಹ ಕೆಲಸ ಮಾಡಿದ್ರೆ ನಾವು ಬಿಡಲ್ಲ. 2014ರವರೆಗೆ ಆಟ ಆಡಿದ್ದೀರಾ. ಈ ದೇಶದ ಸಂಪತ್ತನ್ನು ಪೋರ್ಚುಗೀಸ​ರು, ಬ್ರಿಟಿಷರು, ಮೊಘಲರು ತಗೆದುಕೊಂಡು ಹೋಗಿದ್ದರು. ನಂತರ ಇಟಲಿಯವರು ಭಾರತವನ್ನು ದೋಚಿದರು. ಯಾವಾಗೆಲ್ಲ ಅನ್ಯಾಯವಾಗುತ್ತದೆಯೋ, ಆಗೆಲ್ಲ ಕೃಷ್ಣ ಹುಟ್ಟಿ ಬರ್ತೀನಿ ಅಂದಿದ್ದ. ಅದರ ಭಾಗವೇ ನರೇಂದ್ರ ಮೋದಿ. ‘ನಾ ಖಾವೂಂಗಾ, ನಾ ಖಾನೇ ದೂಂಗಾ’ ಅಂತಾ 9 ವರ್ಷದಲ್ಲಿ ಒಂದೇ ಒಂದು ಅಪವಾದ ಇಲ್ಲದಂತೆ ಸರ್ಕಾರ ಮುಂದೇ ಸಾಗುತ್ತಿದೆ. 2014ರ ನಂತರ ಎಂತಹ ವಿಚಾರಧಾರೆ ಪರಿವರ್ತನೆ ಬದಲಾವಣೆ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಳಗಾವಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ಪ್ರಕರಣ​ : ಮೂವರ ಬಂಧನ

ಒಂದು ದಿನವಾದ್ರೂ ಜ್ವರ, ಕೆಮ್ಮು ನೆಗಡಿ ಅಂತಾ ಮೋದಿ ಆಸ್ಪತ್ರೆಯಲ್ಲಿ ಮಲಗಿದ್ದಾರಾ?. ಒಂದೇ ಒಂದು ದಿನ ರಜೆ ಪಡೆಯದೇ ಕೆಲಸ ಮಾಡಿದವರು ಮೋದಿ. ಈ ದೇಶದಲ್ಲಿ ಬಾಬರ್ ಆ್ಯಕ್ಷನ್ ಕಮಿಟಿ ಪರ ಇದ್ದಿದ್ದು ಕಾಂಗ್ರೆಸ್. ಮತಕ್ಕಾಗಿ ಮತ್ತು ಅಧಿಕಾರಕ್ಕಾಗಿ ರಾಮನ ಧಿಕ್ಕರಿಸಿದ ಕಾಂಗ್ರೆಸ್​ಗೆ ನಾವು ಧಿಕ್ಕಾರ ಹೇಳಬೇಕು. ರಾಮನನ್ನು ಬಿಟ್ಟವರು ಯಾರೂ ಉಳಿದಿಲ್ಲ, ಉಳಿಯುವುದಿಲ್ಲ. ಸಿದ್ದರಾಮಯ್ಯ ನಿಮ್ಮಲ್ಲಿ ರಾಮ ಇದ್ದಾನೆ. ಆದ್ರೆ ನೀವು ರಾಮನ ಪರವಾಗಿಲ್ಲ. ನೀವು ಟಿಪ್ಪು ಪರವಾಗಿ, ಬಾಬರ್ ಪರವಾಗಿ ಇದ್ದೀರಿ ಎಂದು ಟೀಕಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಿಂದೂ ಹೆಣ್ಣುಮಕ್ಕಳನ್ನು ಹರಾಜು ಮಾಡುತ್ತಾರೆ. ಮತಾಂತರ ನಿಷೇಧ ಕಾಯ್ದೆ ರದ್ದು ಮಾಡ್ತಾರೆ. ಕ್ರಿಶ್ಚಿಯನ್ನರು ಹಿಂದೂಗಳನ್ನು, ದಲಿತರನ್ನು, ಬ್ರಾಹ್ಮಣ, ಲಿಂಗಾಯತ, ಕುರುಬರನ್ನು ಮತಾಂತರ ಮಾಡ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಜನ ಕುರುಬ ಜನಾಂಗ ಮತಾಂತರವಾಗಿದ್ದಾರೆ ಎಂದು ಮುತಾಲಿಕ್‌ ಆರೋಪಿಸಿದರು.

ಇದನ್ನೂ ಓದಿ: ಬೆಳಗಾವಿ - ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್​​: ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.