ETV Bharat / state

ರೈಲ್ವೆ ಪ್ರಯಾಣಿಕರಿಗೆ ವಂಚಿಸುತ್ತಿದ್ದ ನಕಲಿ ಟಿಟಿಇ ಬಂಧನ - ಟಿಟಿಇ ಹೆಸರಿನಲ್ಲಿ ಟಿಟಿಇ ಬಂಧನ

ಸೆಕ್ಷನ್ 170, 419 ಮತ್ತು 420 ಐಪಿಸಿ ಅಡಿಯಲ್ಲಿ ಅಪರಾಧ ಸಂಖ್ಯೆ 18/2021ರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಯಿಂದ ಟಿಟಿಇ ಸಮವಸ್ತ್ರ ಮತ್ತು ನಕಲಿ ಗುರುತಿನ ಚೀಟಿ ವಶಕ್ಕೆ ಪಡೆಯಲಾಗಿದೆ..

ನಕಲಿ ಟಿಟಿಇ ಬಂಧನ
ನಕಲಿ ಟಿಟಿಇ ಬಂಧನ
author img

By

Published : Jun 28, 2021, 7:25 PM IST

ಬೆಳಗಾವಿ : ಟಿಟಿಇ ಹೆಸರಿನಲ್ಲಿ ರೈಲ್ವೆ ಪ್ರಯಾಣಿಕರ ಟಿಕೆಟ್ ಪರಿಶೀಲನೆ ಮಾಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಖದೀಮನೊಬ್ಬನನ್ನು ರೈಲ್ವೆ ರಕ್ಷಣಾ ದಳದ( ಆರ್ ಪಿಎಪ್) ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಕಡೋಲಿ ಭರ್ಮದೇವ್ ಗಲ್ಲಿಯ ನಿವಾಸಿ ಧರ್ಮಪ್ಪ ಜೋಮಾಡಿ (26) ಬಂಧಿತ ಆರೋಪಿ. ಬೆಳಗಾವಿ ವ್ಯಾಪ್ತಿಯ ಲೋಂಡಾ ಮಾರ್ಗದ ನಡುವೆ ಸಂಚರಿಸುವ ರೈಲುಗಳನ್ನು ಗುರಿಯಾಗಿಸಿಕೊಂಡ ಯುವಕನೋರ್ವ ಟಿಟಿಇ ಅಧಿಕಾರಿಗಳ ಸೋಗಿನಲ್ಲಿ ಬಂದು ಜನದಟ್ಟನೆಯ ಇರುವ ರೈಲುಗಳಲ್ಲಿ ಪ್ರಯಾಣಿಕರನ್ನು ಯಾಮಾರಿಸಿ ಹಣ ವಸೂಲಿ ಮಾಡುತ್ತಿದ್ದನು.

ಈತನ ಚಲನವಲನ ಸೂಕ್ಷ್ಮವಾಗಿ ಗಮನಿಸಿದ ಆರ್​ಪಿಎಫ್ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಈತ ನಕಲಿ ಟಿಟಿಇ (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಎಂದು ತಿಳಿದು ಬಂದಿದೆ. ಬಳಿಕ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಉದ್ಯೋಗವಿಲ್ಲದೆ ವಸೂಲಿ ದಂಧೆಗೆ ಇಳಿದಿದ್ದ ಆರೋಪಿ : ಲಾಕ್​ಡೌನ್​ನಿಂದದ ಉದ್ಯೋಗವಿಲ್ಲದೇ ಪರದಾಡುವ ವೇಳೆ ಹಣ ವಸೂಲಿ ದಂಧೆಗೆ ಕೈ ಹಾಕಿದೆ. ಲೋಂಡಾ ಹಾಗೂ ಬೆಳಗಾವಿ ರೈಲ್ವೆ ನಿಲ್ದಾಣಗಳಲ್ಲಿ ಕೆಲವು ದಿನಗಳಿಂದ ಟಿಟಿಇ ಅಧಿಕಾರಿಗಳ ವೇಷದಲ್ಲಿ ಬಂದು ವಸೂಲಿ ಮಾಡುತ್ತಿದ್ದೆ ಎಂದು ಆರೋಪಿ ತಪ್ಪೊಪಿಕೊಂಡಿದ್ದಾನೆ.

ಸೆಕ್ಷನ್ 170, 419 ಮತ್ತು 420 ಐಪಿಸಿ ಅಡಿಯಲ್ಲಿ ಅಪರಾಧ ಸಂಖ್ಯೆ 18/2021ರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಯಿಂದ ಟಿಟಿಇ ಸಮವಸ್ತ್ರ ಮತ್ತು ನಕಲಿ ಗುರುತಿನ ಚೀಟಿ ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.