ಚಿಕ್ಕೋಡಿ: ಧಾರಾಕಾರ ಮಳೆಗೆ ಜಮೀನಿಗೆ ನುಗ್ಗಿದ ನೀರು: ಸಂಕಷ್ಟದಲ್ಲಿ ಚಿಕ್ಕೋಡಿ ರೈತರು ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಇಂದು ಬೆಳಿಗ್ಗೆ ಸುದ್ದಿ ಬಿತ್ತರಿಸಿದ ಹಿನ್ನಲೆಯಲ್ಲಿ ಚಿಕ್ಕೋಡಿ ಭಾಗದ ರೈತರ ಜಮೀನುಗಳಿಗೆ ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಭೇಟಿ ನೀಡಿ ಜಮೀನುಗಳಲ್ಲಿ ನಿಂತ ಮಳೆ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದರು.
ಚಿಕ್ಕೋಡಿ ತಾಲೂಕಿನ ಉತ್ತರ ಭಾಗದಲ್ಲಿ ಬರುವಂತಹ ಇಂಗಳಿ, ಮಾಂಜರಿ, ಯಡೂರ ಸೇರಿದಂತೆ ವಿವಿಧ ನದಿ ತೀರದ ಭಾಗದ ಜಮೀನುಗಳಲ್ಲಿ ಮಳೆ ನೀರಿನಿಂದ ಅಪಾರವಾದ ಬೆಳೆಗಳು ನಾಶವಾಗಿ ಜಮೀನುಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿ, ರೈತರ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ರೈತನು ಜಮೀನುಗಳಲ್ಲಿ ಸಂಗ್ರಹವಾದ ನೀರನ್ನು ಹೊರ ತೆಗೆಯಲು ಪಂಪ್ಸೆಟ್ಗಳ ಮೊರೆ ಹೋಗಿದ್ದಾನೆ. ಈ ಕುರಿತು ಈಟಿವಿ ಭಾರತ ವರದಿ ಮಾಡಿದ ನಂತರ ವರದಿಯಿಂದ ಎಚ್ಚೆತ್ತ ಚಿಕ್ಕೋಡಿ ತಹಶೀಲ್ದಾರ್ ಸುಭಾಷ ಸಂಪಗಾವಿಯವರು ಮಳೆ ನೀರಿನಿಂದ ನಿಂತ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಸುಭಾಷ ಸಂಪಗಾವಿ ಅವರು ಜಮೀನುಗಳಲ್ಲಿ ಸಂಗ್ರಹವಾದ ಮಳೆನೀರಿನ ಪ್ರಮಾಣವನ್ನು ವೀಕ್ಷಿಸಿ, ಕೆಲಹೊತ್ತು ರೈತರ ಜೊತೆ ಸಮಾಲೋಚನೆಯನ್ನು ನಡೆಸಿದರು. ನಂತರ ರೈತರಿಂದ ಮನವಿಯನ್ನು ಸ್ವೀಕರಿಸಿದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ರೈತರಿಗೆ ಶಾಶ್ವತ ಪರಿಹಾರದ ಭರವಸೆಯನ್ನು ನೀಡಿದರು.