ETV Bharat / state

'108 ಕಾಮಗಾರಿಗಳಿಗೆ ಮೌಖಿಕ ಆದೇಶ ಕೊಟ್ಟಿದ್ದೇ ಈಶ್ವರಪ್ಪ': ಹಿಂಡಲಗಾ ಗ್ರಾಪಂ ಅಧ್ಯಕ್ಷ - ಈಶ್ವರಪ್ಪ ಮೇಲೆ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ

'ಕಾಮಗಾರಿ ಚಾಲನೆಗೂ ಮುನ್ನ ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಈಶ್ವರಪ್ಪರನ್ನು ಭೇಟಿ ಮಾಡಿದ್ದು ನಿಜ. ಸಂತೋಷ​ ಪಾಟೀಲ್ ಜೊತೆಗೆ ನಾನೂ ಸಹ ಎರಡು ಬಾರಿ ಬೆಂಗಳೂರಿಗೆ ತೆರಳಿ ಸಚಿವರನ್ನು ಭೇಟಿಯಾಗಿದ್ದೆ. ನಮ್ಮ ಜೊತೆಗೆ ಬೈಲಹೊಂಗಲದ ಓರ್ವ ಸ್ವಾಮೀಜಿ ಕೂಡ ಬಂದಿದ್ದರು' ಎಂದು ಗುತ್ತಿಗೆದಾರ ಸಂತೋಷ್​ ಸ್ನೇಹಿತ ಮಾಹಿತಿ ನೀಡಿದ್ದಾರೆ.

'108 ಕಾಮಗಾರಿಗಳಿಗೆ ಮೌಖಿಕ ಆದೇಶ ಕೊಟ್ಟಿದ್ದೇ ಈಶ್ವರಪ್ಪ': ಗುತ್ತಿಗೆದಾರ ಸಂತೋಷ ಸ್ನೇಹಿತ

author img

By

Published : Apr 13, 2022, 3:37 PM IST

Updated : Apr 13, 2022, 4:09 PM IST

ಬೆಳಗಾವಿ: 108 ಕಾಮಗಾರಿಗಳನ್ನು ಕೈಗೊಳ್ಳುವಂತೆ ಗುತ್ತಿಗೆದಾರ ಸಂತೋಷ ಪಾಟೀಲ್‌ಗೆ ಸಚಿವ ಕೆ.ಎಸ್. ಈಶ್ವರಪ್ಪನವರೇ ಮೌಖಿಕ ಆದೇಶ ನೀಡಿದ್ದರು ಎಂದು ಹಿಂಡಲಗಾ ಗ್ರಾ.ಪಂ.ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಹೇಳಿದ್ದಾರೆ. ಗ್ರಾ.ಪಂ. ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ಮೌಖಿಕ ಆದೇಶದ ಮೇರೆಗೆ ಹಿಂಡಲಗಾ ಗ್ರಾಮದಲ್ಲಿ ಸಂತೋಷ ಪಾಟೀಲ 4 ಕೋಟಿ ರೂ ವೆಚ್ಚದ 108 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದರು.

ಕಾಮಗಾರಿ ಚಾಲನೆಗೂ ಮುನ್ನ ಗುತ್ತಿಗೆದಾರ ಪಾಟೀಲ್ ಅವರು ಈಶ್ವರಪ್ಪರನ್ನು ಭೇಟಿ ಮಾಡಿದ್ದು ನಿಜ. ಸಂತೋಷ​ ಪಾಟೀಲ್ ಜೊತೆಗೆ ನಾನೂ ಸಹ ಎರಡು ಬಾರಿ ಬೆಂಗಳೂರಿಗೆ ತೆರಳಿ ಈಶ್ವರಪ್ಪರನ್ನು ಭೇಟಿಯಾಗಿದ್ದೆ. ನಮ್ಮ ಜೊತೆಗೆ ಬೈಲಹೊಂಗಲದ ಓರ್ವ ಸ್ವಾಮೀಜಿ ಕೂಡ ಬಂದಿದ್ದರು. ಕಳೆದ ವರ್ಷವಷ್ಟೇ ನೂರು ವರ್ಷದ ಬಳಿಕ ಹಿಂಡಲಗಾ ಗ್ರಾಮದ ಲಕ್ಷ್ಮಿ ದೇವರ ಜಾತ್ರೆ ನಡೆಯಿತು. ಹೀಗಾಗಿ ರಸ್ತೆ ಅಭಿವೃದ್ಧಿ ಸೇರಿ ಹಲವು ಕಾಮಗಾರಿ ಮಾಡಿಕೊಡಬೇಕು ಎಂದು ಪಟ್ಟಿ ಸಮೇತ ಸಚಿವರನ್ನು ಭೇಟಿ ಮಾಡಿದ್ದೆವು. 'ಆಯ್ತು‌ ನೀವು ಕೆಲಸ ಸ್ಟಾರ್ಟ್ ಮಾಡಿ' ಅಂತ ಆಗ ಕೆ.ಎಸ್.ಈಶ್ವರಪ್ಪ ಮೌಖಿಕ ಆದೇಶ ನೀಡಿದ್ದರು ಎಂದು ಹೇಳಿದರು.

'108 ಕಾಮಗಾರಿಗಳಿಗೆ ಮೌಖಿಕ ಆದೇಶ ಕೊಟ್ಟಿದ್ದೇ ಈಶ್ವರಪ್ಪ': ಗುತ್ತಿಗೆದಾರ ಸಂತೋಷ ಸ್ನೇಹಿತ

ಇದನ್ನೂ ಓದಿ: ಸಚಿವ ಈಶ್ವರಪ್ಪ, ಇಬ್ಬರು ಆಪ್ತರ ಮೇಲೆ ಎಫ್‌​ಐಆರ್​ ದಾಖಲು

ಬಳಿಕ, 4 ಕೋಟಿ ರೂ ವೆಚ್ಚದಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ 108 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರು. ಅಭಿವೃದ್ಧಿ ಕೆಲಸಕ್ಕಾಗಿ ನಾನು ಸಹ ನಮ್ಮ ಲೆಟರ್‌ಹೆಡ್‌ನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನನ್ನ ಸಹಿ ಮಾಡಿ ಪತ್ರ ಬರೆದಿದ್ದೆ. ನನ್ನ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಡುತ್ತಿರುವ ಆರೋಪ ಕೇಳಿ ನೋವಾಯ್ತು. ಸಂತೋಷ ಪಾಟೀಲ್ ಬಿಲ್ ಪಡೆಯಲು ಪರದಾಡುತ್ತಿದ್ದಾಗ ಶಾಸಕಿ ಹೆಬ್ಬಾಳ್ಕರ್ ಬೆಂಬಲಕ್ಕೆ ನಿಲ್ಲಬೇಕಿತ್ತು. ಈಗ ಆತ ಸತ್ತ ಮೇಲೆ ಪ್ರತಿಭಟನೆ ಮಾಡೋದು ಸರಿಯಲ್ಲ. ಹಿಂಡಲಗಾ ಗ್ರಾಮದಲ್ಲಿ ಸಂತೋಷ ಚೆನ್ನಾಗಿ ಕೆಲಸ ಮಾಡಿದ್ದರು ಎಂದು ವಿವರಿಸಿದರು.

ಹೋರಾಟಗಾರ ಸುಜೀತ್ ಮುಳಗುಂದ

ಕ್ರಮಕ್ಕೆ ಆಗ್ರಹ: ಮತ್ತೊಂದೆಡೆ, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಾಮಾಜಿಕ ಹೋರಾಟಗಾರ ಸುಜೀತ್ ಮುಳಗುಂದ, ಭ್ರಷ್ಟಾಚಾರ ಮಾಡಲ್ಲ, ಅದಕ್ಕೆ ಅವಕಾಶವನ್ನೂ ನೀಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆ ಹುಸಿಯಾಗಿದೆ. ಬಿಲ್ ಮಂಜೂರಾತಿ ಆಗದಿರುವುದಕ್ಕೆ ಗುತ್ತಿಗೆದಾರ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದವರ ತಲೆದಂಡ ಆಗಲೇ ಬೇಕು ಎಂದು ಆಗ್ರಹಿಸಿದರು.

Last Updated : Apr 13, 2022, 4:09 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.