ETV Bharat / state

ಮುಗ್ದ ಜನರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಯತ್ನ: ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ - ಈಟಿವಿ ಭಾರತ​ ಕನ್ನಡ

ಬೆಳಗಾವಿಯಲ್ಲಿ ತಮ್ಮ ಕಾರಿಗೆ ಮುತ್ತಿಗೆ ಹಾಕಿರುವ ಘಟನೆ ಸಂಬಂಧ, ಕಾರಿಗೆ ಮುತ್ತಿಗೆ ಹಾಕಿದವರು ಮುಗ್ಧ ಜನರಿದ್ದಾರೆ. ಅವರಿಗೆ ಯಾರೋ ತಲೆತುಂಬಿ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನ ಮಾಡಿದ್ದಾರೆ. ಇದನ್ನು ಇನ್ನಷ್ಟು ಬೆಳೆಸುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

eranna-kadadi-spoke-about-car-besieged-incident
ಮುಗ್ದ ಜನರನ್ನು ರಾಜಕೀಯ ಬಳಸಿಕೊಳ್ಳುವ ಯತ್ನ: ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
author img

By

Published : Nov 12, 2022, 6:14 PM IST

Updated : Nov 12, 2022, 7:08 PM IST

ಬೆಳಗಾವಿ: ಮುಗ್ದ ಜನರನ್ನು ರಾಜಕೀಯ ಬಳಸಿಕೊಳ್ಳುವ ಯತ್ನ ಮಾಡಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈರಣ್ಣ ಕಡಾಡಿ, ನಿನ್ನೆ ತಮ್ಮ ಕಾರಿಗೆ ಮುತ್ತಿಗೆ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ನಮ್ಮೂರಿಗೆ ಹೋಗುವ ದಾರಿಯಲ್ಲಿ ಕೆಲವು ಜನರು ಸತೀಶ ಬೆಂಬಲಿಗರು ಎಂದು ಹೇಳಿಕೊಂಡು ಪ್ರತಿಭಟನೆ ಮಾಡಿದರು.

ಈ ವೇಳೆ ನನ್ನ ಕಾರಿಗೆ ದಾಳಿ ಮಾಡುವ ಯತ್ನವನ್ನೂ ಮಾಡಿದರು. ಈ ಘಟನೆಗಳನ್ನು ನೋಡಿ ನಮ್ಮೆಲ್ಲ ನಾಯಕರು ನನಗೆ ಕರೆ ಮಾಡಿದರು. ನಾನೇ ಬೆಳಗಾವಿಗೆ ಬಂದು ಈ ವಿಷಯದ ಬಗ್ಗೆ ತಿಳಿಸಿದ್ದೇನೆ ಎಂದರು.

ಇನ್ನು ಕಾರಿಗೆ ಮುತ್ತಿಗೆ ಹಾಕಿದವರು ಮುಗ್ಧ ಜನರಿದ್ದಾರೆ. ಅವರಿಗೆ ಯಾರೋ ತಲೆತುಂಬಿ ರಾಜಕೀಯವಾಗಿ ಬಳಸಿಕೊಳ್ಳಲು ಯತ್ನ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಹೀಗಾಗಿ ಇದನ್ನು ಹೆಚ್ಚು ಬೆಳೆಸುವ ಅವಶ್ಯಕತೆ ಇಲ್ಲ. ಆ ಜನರು ಯಾರು ಏನು ಎಂದು ನನಗೆ ಗೊತ್ತಿದೆ. ಕೆಲವರು ನನ್ನ ನೋಡಿದ ತಕ್ಷಣ ಬದಿಗೆ ಹೋಗಿದ್ದಾರೆ. ಇದನ್ನೆಲ್ಲ ನೋಡಿದಾಗ ಅವರಿಗೆ ಯಾರೋ ತಲೆ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕಾರಿಗೆ ಮುತ್ತಿಗೆ ಹಾಕಿರುವುದು ಪೂರ್ವ ನಿಯೋಜಿತ ಕೃತ್ಯ :ಕಾರಿಗೆ ಮುತ್ತಿಗೆ ಹಾಕಿರುವ ಘಟನೆ ಎಲ್ಲವೂ ಪೂರ್ವ ನಿಯೋಜಿತವಾಗಿದೆ. ನನ್ನ ಕಾರ್ಯಕ್ರಮ ಮೊದಲೇ ನಿಶ್ಚಿತವಾಗಿತ್ತು. ನಾನು ಎಲ್ಲೇ ಕಾರ್ಯಕ್ರಮಕ್ಕೆ ಹೋದರೂ ಪೊಲೀಸ್ ಇಲಾಖೆಗೆ ಮೊದಲೇ ಮಾಹಿತಿ ಕೊಡುತ್ತೇನೆ. ಪೊಲೀಸರು ಈ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ. ಪೊಲೀಸರು ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿದ್ದರೆ ನಾನು ಸ್ವಲ್ಪ ತಡೆದು ಹೋಗುತ್ತಿದ್ದೆ. ಆದರೆ, ಪೊಲೀಸರು ಅದನ್ನು ನಮಗೆ ತಿಳಿಸಿಲ್ಲ ಎಂದರು.

ಇನ್ನು ಈ ಬಗ್ಗೆ ಕ್ರಮಕೈಗೊಳ್ಳುವಂತೆ ನಾನು ಯಾವುದೇ ಒತ್ತಾಯ ಮಾಡಲ್ಲ. ಕಾನೂನು ರೀತಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ದೂರು ಕೊಟ್ಟು ಇದನ್ನು ಬೆಳೆಸುವ ಅಗತ್ಯ ನನಗಿಲ್ಲ. ಗಲಾಟೆ ಮಾಡಿದವರಿಗೆ ಬುದ್ಧಿ ಹೇಳುವ ಕೆಲಸ ಮಾಡಿ ಎಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು‌.

ಇದನ್ನೂ ಓದಿ : ಬೆಳಗಾವಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಸತೀಶ್​ ಜಾರಕಿಹೊಳಿ ಬೆಂಬಲಿಗರಿಂದ ಮುತ್ತಿಗೆ..!

Last Updated : Nov 12, 2022, 7:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.