ETV Bharat / state

ಬಸ್​ ಡಿಪೋದಲ್ಲಿ 3 ಸಾವಿರ ರೂ. ಡೀಸೆಲ್ ಹಾಕುವ ದುರ್ಗತಿ ನನಗಿಲ್ಲ; ಡಿಸಿಎಂ ಸವದಿ

author img

By

Published : Jan 9, 2021, 1:15 PM IST

Updated : Jan 9, 2021, 2:46 PM IST

ನನಗೆ 3 ಸಾವಿರ ರೂ. ಡಿಸೇಲ್ ಹಾಕುವ ದುರ್ಗತಿ ಬಂದಿಲ್ಲ. ಆರ್ಥಿಕವಾಗಿ ನಮ್ಮ ಕುಟುಂಬ ಸದೃಢವಾಗಿರುವುದರಿಂದ ಅದರ ಅವಶ್ಯಕತೆಯಿಲ್ಲ. ಯಾರೋ ಬೇಕಂತಲೇ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಸವದಿ ಪ್ರತಿಕ್ರಿಯಿಸಿದ್ದಾರೆ.

DCM Lakshman Savadi
ಡಿಸಿಎಂ ಲಕ್ಷ್ಮಣ ಸವದಿ

ಅಥಣಿ: 3 ಸಾವಿರ ರೂಗೆ ಬಸ್​ ಡಿಪೋ ಬಂಕ್​ನಲ್ಲಿ ಡೀಸೆಲ್ ಹಾಕುವ ದುರ್ಗತಿ ನನಗೆ ಬಂದಿಲ್ಲ. ದೇವರು ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ತುಂಬಾ ಶಕ್ತಿ ನೀಡಿದ್ದಾನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ 3 ಸಾವಿರ ರೂ. ಡೀಸೆಲ್ ಹಾಕುವ ದುರ್ಗತಿ ಬಂದಿಲ್ಲ. ಆರ್ಥಿಕವಾಗಿ ನಮ್ಮ ಕುಟುಂಬ ಸದೃಢವಾಗಿರುವುದರಿಂದ ಅದರ ಅವಶ್ಯಕತೆಯಿಲ್ಲ. ಯಾರೋ ಬೇಕಂತಲೇ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಮರದಲ್ಲಿ ಹಣ್ಣು ಇರುತ್ತದೋ ಆ ಮರಕ್ಕೆ ಕಲ್ಲುಗಳನ್ನು ಎಸೆಯುತ್ತಾರೆ ಎಂದರು. ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಇನ್ನು ಅಥಣಿ ಪಟ್ಟಣದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಅಥಣಿ ಘಟಕದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಾರಿಗೆ ಇಲಾಖೆ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿದೆ. ಆದಷ್ಟು ಬೇಗನೆ ಕಾರ್ಯರೂಪಕ್ಕೆ ಬರಲಿದೆ. 6ನೇ ವೇತನ ಸದ್ಯದಲ್ಲೇ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ

ಓದಿ: ಡೀಸೆಲ್ ಹಾಕಿಸಿದ್ದು ಕಾರು ಚಾಲಕ, ಕ್ರಮ ಮಾತ್ರ ನೌಕರನ ಮೇಲೆ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರೇ ಡಿಸಿಎಂ?

ಆರೋಪಿ ಬಹು ವಂಚಕ ಯುವರಾಜ್ ಸ್ವಾಮಿ ವಿಷಯಕ್ಕೆ ಪ್ರತಿಕ್ರಿಯಿಸಿ, ನಮಗೆ ಅವರಿಗೆ ಯಾವುದೇ ವೈಯಕ್ತಿಕ ಪರಿಚಯ ಇಲ್ಲ. ಪಕ್ಷದ ಕಾರ್ಯಕರ್ತ, ಸಂಘ ಪರಿವಾರದಿಂದ ಬಂದಿದ್ದೇನೆ ಎಂದು ಒಂದು ಸಾರಿ ನಮ್ಮ ಜೊತೆ ಫೋಟೋ ತೆಗೆಸಿಕೊಂಡಿದ್ದು, ಪಕ್ಷಕ್ಕೂ ಅವನಿಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದರು.

ಅಥಣಿ ಪಟ್ಟಣ ನಮ್ಮದೇ ಸ್ವ-ಕ್ಷೇತ್ರವಾಗಿದ್ದರಿಂದ ನಮ್ಮ ಇಲಾಖೆಯಿಂದ ಅಥಣಿ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಜಾರಿ ಮಾಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.

Last Updated : Jan 9, 2021, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.