ETV Bharat / state

ಸೇನಾ ನೇಮಕಾತಿ ರ‍್ಯಾಲಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಚಾಲನೆ

ಇಂದಿನಿಂದ ಫೆ‌.15 ರವರೆಗೆ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದ್ದು, ಆನ್​​ಲೈನ್​​ನಲ್ಲಿ ಡಿ. 5 ರಿಂದ ಜ.18 ರವೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಲ್ಲಿ ಆರು ಜಿಲ್ಲೆಗಳ 62,217 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ದಿನಾಂಕ ನೀಡಲಾಗಿದ್ದು, ಅದೇ ರೀತಿ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

DC MG Hiremat gave drive to Army recruitment rally
ಸೇನಾ ನೇಮಕಾತಿಗೆ ರ್ಯಾಲಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಂದ ಹಸಿರು ನಿಶಾನೆ
author img

By

Published : Feb 4, 2021, 2:09 PM IST

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈದಾನದಲ್ಲಿಂದು ಸೇನಾ ನೇಮಕಾತಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಡಿಸಿ, ಇಂದಿನಿಂದ ಫೆ‌.15 ರವರೆಗೆ ಸೇನಾ ನೇಮಕಾತಿ ರ‍್ಯಾಲಿ ನಡೆಯಲಿದ್ದು, ಆನ್​​ಲೈನ್​​ನಲ್ಲಿ ಡಿ. 5 ರಿಂದ ಜ.18 ರವೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಲ್ಲಿ ಆರು ಜಿಲ್ಲೆಗಳ 62,217 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ದಿನಾಂಕ ನೀಡಲಾಗಿದ್ದು, ಅದೇ ರೀತಿ ಅಭ್ಯರ್ಥಿಗಳು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸೇನಾ ನೇಮಕಾತಿಗೆ ರ‍್ಯಾಲಿ

ಬೆಳಗಾವಿ ಜಿಲ್ಲೆಯ 51,423 ವಿದ್ಯಾರ್ಥಿಗಳು, ಬೀದರ್ 2,709, ಕಲಬುರಗಿ 3,007, ಕೊಪ್ಪಳ 2,909, ರಾಯಚೂರು 1,445, ಯಾದಗಿರಿ 724 ಸೇರಿ ಒಟ್ಟು 62,217 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ವಿ.ಟಿ.ಯು. ಮೈದಾನದಲ್ಲಿ ಯಾವುದೇ ರೀತಿ ರ‍್ಯಾಲಿಗೆ ಸಮಸ್ಯೆ ಆಗದಂತೆ ಮೊಬೈಲ್ ಶೌಚಾಲಯ, ಆರೋಗ್ಯ ಇಲಾಖೆ ತಂಡ, ಪೊಲೀಸ್ ಪಡೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರತಿದಿನ 5 ಸಾವಿರ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಎಂದರು.

ಊಟ‌, ವಸತಿ ವ್ಯವಸ್ಥೆ:

ಪ್ರತಿ ವರ್ಷ ಮೈದಾನ ಸುತ್ತಮುತ್ತಲಿನ ಸ್ಥಳದಲ್ಲಿ ಫುಟ್​​ಪಾತ್ ಮೇಲೆ ಅಭ್ಯರ್ಥಿಗಳು ರಾತ್ರಿಯಿಡೀ ಕಳೆಯುತ್ತಿದ್ದರು. ಆದರೆ ಈ ಬಾರಿ ಜಿಲ್ಲಾಡಳಿತ, ಪೀರನವಾಡಿಯಲ್ಲಿನ ಮೂರು ಕಲ್ಯಾಣ ಮಂಟಪ‌ಗಳನ್ನು ಗುರುತಿಸಿದ್ದು, ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.

ನಿಲ್ದಾಣಗಳಲ್ಲಿ‌ ಮಾಹಿತಿ‌ ಕೇಂದ್ರ:

ಆರು‌ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ನೇಮಕಾತಿಗೆ ಆಗಮಿಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದ್ದು, ಅಭ್ಯರ್ಥಿಗಳಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿದೆ. ನಿನ್ನೆ ರಾತ್ರಿಯಿಂದಲೇ ವಿ.ಟಿ.ಯು.ವರೆಗೆ ಸಾರಿಗೆ ಬಸ್​​ಗಳ ಸಂಚಾರ‌ ಕೂಡ ಆರಂಭಿಸಲಾಗಿದೆ ಎಂದರು.

ವೈದ್ಯರ ತಪಾಸಣೆ ಪತ್ರ:

ಸೇನಾ ಭರ್ತಿ ರ‍್ಯಾಲಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕೋವಿಡ್-19 ಪರೀಕ್ಷೆ ಅಥವಾ ತಪಾಸಣಾ ವರದಿಯ ಅಗತ್ಯವಿಲ್ಲ. ಆರ್.ಟಿ.ಪಿ.ಸಿ.ಆರ್ ಅಥವಾ ಆ್ಯಂಟಿಜೆನ್ ಸೇರಿದಂತೆ ಯಾವುದೇ ರೀತಿಯ ಕೋವಿಡ್ ಪರೀಕ್ಷೆಯ ಅಗತ್ಯವಿಲ್ಲ. ಆದರೆ, ಕೋವಿಡ್​​ ಲಕ್ಷಣ ಇಲ್ಲದಿರುವ ಬಗ್ಗೆ ಯಾವುದಾದರೂ ವೈದ್ಯರಿಂದ ಪಡೆದಿರುವ ಪತ್ರವಿದ್ದರೆ ಸಾಕು ಎಂದು ಅವರು ತಿಳಿಸಿದರು.

ಸೇನಾ ನೇಮಕಾತಿಗಾಗಿ ಕೊಪ್ಪಳ, ಕಲಬುರಗಿ, ಬೆಳಗಾವಿ ಸೇರಿದಂತೆ ನಾನಾ ಕಡೆಗಳಿಂದ ಬುಧವಾರ ರಾತ್ರಿಯೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಅಭ್ಯರ್ಥಿಗಳು ಬಂದು ಸೇರಿದ್ದರು. ಇಂದು ಬೆಳಗ್ಗೆ 6.30 ಗಂಟೆಗೆ ಆರಂಭವಾದ ನೇಮಕಾತಿ‌ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಈ ಸುದ್ದಿಯನ್ನೂ ಓದಿ: 'ತೇಜಸ್'​ ಏರಿ ಏರ್​ ಶೋನಲ್ಲಿ ಹಾರಾಟ ನಡೆಸಿದ ತೇಜಸ್ವಿ ಸೂರ್ಯ

ಇನ್ನೂ ಕೊಪ್ಪಳದ ಅಭ್ಯರ್ಥಿ ಶಿವಪ್ಪ ಜಲನ್ನವರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದೇಶ ಸೇವೆ ಮಾಡಬೇಕೆಂಬ ಆಸೆಯಿಂದಲೇ ನೇಮಕಾತಿಗೆ ಕೊಪ್ಪಳದಿಂದ ಬಂದಿದ್ದೇನೆ. ಐದು ವರ್ಷದಿಂದ‌ ನೇಮಕಾತಿಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಈಗಾಗಲೇ ದೈಹಿಕ‌ ಪರೀಕ್ಷೆಯಲ್ಲಿ ಪಾಸ್ ಆಗಿದ್ದೇನೆ. ತಯಾರಿ ಮಾಡಿಕೊಂಡ‌ ನಂತರ ರ‍್ಯಾಲಿಯಲ್ಲಿ ಭಾಗವಹಿಸುವುದು ಉತ್ತಮ. ಬೆಳಗಾವಿಗೆ ಕೊಪ್ಪಳದಿಂದ ಶನಿವಾರವೇ ಬಂದಿದ್ದೇನೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.