ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಸುರಿದ ಧಾರಾಕಾರ ಮಳೆಯ ಜೊತೆಗೆ ಮಹಾರಾಷ್ಟ್ರದ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ತಾಲೂಕಿನ ಉಪವಿಭಾಗದ ಹುಕ್ಕೇರಿ, ನಿಪ್ಪಾಣಿ, ಗೋಕಾಕ, ಅಥಣಿ, ಕಾಗವಾಡದಲ್ಲಿ ಪ್ರವಾಹದಿಂದ ಸುಮಾರು 32 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ತಾಲೂಕಿನ ಕೃಷಿ ಇಲಾಖೆ ಆಯುಕ್ತ ಡಿ. ರೋಡಗಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ತಾಲೂಕುವಾರು ಪ್ರದೇಶ ಬೆಳೆ ಹಾನಿ ನೋಡುವುದಾದರೆ ವೇದಗಂಗಾ ದೂಧಗಂಗಾ ನದಿ ನೀರಿನಿಂದ ನಿಪ್ಪಾಣಿ ತಾಲೂಕಿನಲ್ಲಿ 4,870 ಹೆಕ್ಟೇರ್ ಪ್ರದೇಶ, ಕೃಷ್ಣಾ ನದಿಯಿಂದಾಗಿ ತಾಲೂಕಿನಲ್ಲಿ 11,392 ಸಾವಿರ ಹೆಕ್ಟೇರ್, ರಾಯಬಾಗ ತಾಲೂಕಿನ 2,200 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ವಿವರಿಸಿದರು.
ಇನ್ನು ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿ ನೀರಿನಿಂದಾಗಿ ಹುಕ್ಕೇರಿ ತಾಲೂಕಿನಲ್ಲಿ 539 ಹೆಕ್ಟೇರ್, ಮೂಡಲಗಿ ತಾಲೂಕಿನಲ್ಲಿ 5,500 ಹೆಕ್ಟೇರ್ ಹಾಗೂ ಗೋಕಾಕ ತಾಲೂಕಿನ 7,500 ಹೆಕ್ಟೇರ್ ಭೂ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.