ETV Bharat / state

ಬೆಳಗಾವಿಯ ಕೋವಿಡ್ ವಾರ್ಡ್ ಭರ್ತಿ: ಮಾನವೀಯತೆ ಮರೆತ ಖಾಸಗಿ ಆಸ್ಪತ್ರೆಗಳು - ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಭರ್ತಿ

ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಭರ್ತಿಯಾಗಿದ್ದರೂ ಖಾಸಗಿ ಆಸ್ಪತ್ರೆಗಳು ಮಾತ್ರ ಜಿಲ್ಲಾಡಳಿತ ಬೆನ್ನಿಗೆ ನಿಲ್ಲಲು ಹಿಂದೇಟು ಹಾಕುತ್ತಿವೆ.

Belgaum
ಬೆಳಗಾವಿಯ ಕೋವಿಡ್ ವಾರ್ಡ್ ಭರ್ತಿ
author img

By

Published : Jul 16, 2020, 4:51 PM IST

ಬೆಳಗಾವಿ: ಕೊರೊನಾ ದಿನೇ ದಿನೇ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದು 250 ಬೆಡ್ ಸಾಮರ್ಥ್ಯದ ಬೆಳಗಾವಿ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಇಂದು ಸಂಪೂರ್ಣ ತುಂಬಿದೆ.

ನಿನ್ನೆಯವರೆಗಿನ ಮಾಹಿತಿ ಪ್ರಕಾರ, ಇಲ್ಲಿನ ಕೋವಿಡ್ ವಾರ್ಡ್‌ನಲ್ಲಿ 226 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಅಥಣಿ ತಾಲೂಕೊಂದರಲ್ಲೇ ಇಂದು 39 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಇದೀಗ ಈ ಎಲ್ಲರನ್ನೂ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಶಿಫ್ಟ್ ಮಾಡಲಾಗುತ್ತಿದೆ. ಇದೀಗ ಕೇವಲ 24 ಸೋಂಕಿತರಿಗೆ ಮಾತ್ರ ಬೆಡ್ ವ್ಯವಸ್ಥೆ ಇದ್ದು, ಉಳಿದ ಸೋಂಕಿತರಿಗೆ ಚಿಕಿತ್ಸೆ ನೀಡುವುದೆಲ್ಲಿ ಎಂಬ ಗೊಂದಲದಲ್ಲಿ ಬೀಮ್ಸ್ ಸಿಬ್ಬಂದಿ ಇದ್ದಾರೆ.

ಮಾನವೀಯತೆ ಮರೆತ ಖಾಸಗಿ ಆಸ್ಪತ್ರೆಗಳು:

ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಭರ್ತಿಯಾಗಿದ್ದರೂ ಖಾಸಗಿ ಆಸ್ಪತ್ರೆಗಳು ಮಾತ್ರ ಜಿಲ್ಲಾಡಳಿತ ಬೆನ್ನಿಗೆ ನಿಲ್ಲಲು ಹಿಂದೇಟು ಹಾಕುತ್ತಿವೆ. ಕೆಎಲ್ಇ ಆಸ್ಪತ್ರೆ ಕೇವಲ 30 ಬೆಡ್ ಕೋವಿಡ್ ವಾರ್ಡ್ ಆರಂಭಿಸಿದೆ. ಆದ್ರೆ ಉಚಿತ ಚಿಕಿತ್ಸೆ ವ್ಯವಸ್ಥೆ ಇಲ್ಲಿಲ್ಲ. ಹಣವಂತರು ಮಾತ್ರ ಇಲ್ಲಿ ತೆರಳಬಹುದಾಗಿದ್ದು ಬಡ ಸೋಂಕಿತರಿಗೆ ಜಿಲ್ಲಾಸ್ಪತ್ರೆಯೇ ಗತಿಯಾಗಿದೆ. ಇನ್ನು ನಗರದ ಉಳಿದ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನಿರಾಕರಿಸುತ್ತಿದ್ದು, ಅಮಾನವೀಯವಾಗಿ ವರ್ತಿಸುತ್ತಿವೆ. ಇವುಗಳಿಗೆ ಮೂಗುದಾರ ಹಾಕಬೇಕಿದ್ದ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದ್ದು, ಬಡ ರೋಗಿಗಳ ಜೀವಕ್ಕೆ ಬೆಲೆ ಇಲ್ವಾ ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡ್ತಿದೆ.

ಬೀಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ ಪ್ರತಿಕ್ರಿಯಿಸಿ, ಜಿಲ್ಲಾಸ್ಪತ್ರೆಯಲ್ಲಿ ಸದ್ಯ 226 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಬೆಡ್​ಗಳ ವ್ಯವಸ್ಥೆಗಳಿವೆ. ನಿರೀಕ್ಷೆಗೂ ಮೀರಿ ಸೋಂಕಿತರು ಬಂದ್ರೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 30 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಆದ್ರೆ ಕೋವಿಡ್ ಹೊರತುಪಡಿಸಿ ಇನ್ನಿತರ ಕಾಯಿಲೆಗಳಿಂದ ಬಳಲುತಿದ್ದರೆ ಅಂಥವರನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ಗೆ ಶಿಫ್ಟ್ ಮಾಡಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಜೊತೆಗೆ ಬೇರೆ ರೋಗಕ್ಕೆ ಚಿಕಿತ್ಸೆ ಕೊಡುವ ವ್ಯವಸ್ಥೆ ಇಲ್ಲ. ಕೋವಿಡ್ ಜತೆಗೆ ಬಹುರೋಗಗಳಿಂದ ಬಳಲುತ್ತಿರುವ ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್​ಗೆ ಶಿಫ್ಟ್ ಮಾಡಬೇಕಾದ ಅನಿವಾರ್ಯತೆ ಇದ್ದು, ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ತೆರೆಯಲು ಸೂಚನೆ ನೀಡಬೇಕಿದೆ. ಇಲ್ಲವಾದ್ರೆ ಕೋವಿಡ್​ಗೆ ಜಿಲ್ಲೆಯಲ್ಲಿ ಮತ್ತಷ್ಟು ಸೋಂಕಿತರು ಚಿಕಿತ್ಸೆ ಸಿಗದೇ ಪ್ರಾಣ ಚೆಲ್ಲಬೇಕಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.