ಬೆಳಗಾವಿ: ಇಬ್ಬರು ಪುಟ್ಟ ಮಕ್ಕಳ ಜೊತೆ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.
ರಾಮದುರ್ಗ ಪಟ್ಟಣದ ನಿವಾಸಿಗಳಾದ ಪ್ರವೀಣ್ ಶೆಟ್ಟರ್ (37), ಪತ್ನಿ ರಾಜೇಶ್ವರಿ (27), ಮಕ್ಕಳು ಅಮೃತಾ (8) ಹಾಗೂ ಅದ್ವಿತ್ (6) ಮೃತರು. ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರಗೈದು ಜೀವಂತವಾಗಿ ಹೂಳಲು ಯತ್ನಿಸಿದ ಕಾಮುಕ ಅಂದರ್!
ಮೃತ ಪ್ರವೀಣ ರಾಮದುರ್ಗ ಪಟ್ಟಣದಲ್ಲಿ ಗೊಬ್ಬರದ ಮಳಿಗೆ ಹೊಂದಿದ್ದರು. ಸದ್ಯ ಕೊನೆಯುಸಿರೆಳೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಭೇಟಿ ನೀಡಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.