ETV Bharat / state

ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರವಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ - ಕೋಮುವಾದಿ ಬಿಜೆಪಿ ಸರ್ಕಾರ

ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಬಿಜೆಪಿ ಸರ್ಕಾರದ ಭ್ರಷ್ಟಚಾರವನ್ನು ಬೆಂಬಲಿಸುತ್ತಿದ್ದಾರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Mar 3, 2023, 4:17 PM IST

ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಳಗಾವಿ: ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಅವರ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿರುವುದು ಬಿಜೆಪಿ ಸರ್ಕಾರ ಶೇ 40ರಷ್ಟು ಕಮೀಷನ್​ಗೆ ಸಾಕ್ಷಿ ಅಲ್ಲವೇ?. ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಡಬಲ್ ಇಂಜಿನ್ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕರ್ನಾಟಕ ಇತಿಹಾಸದಲ್ಲಿ ಗುತ್ತಿಗೆದಾರ ಸಂಘದ ಅಧ್ಯಕ್ಷರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಮುಖೇನ ದೂರು ನೀಡಿ ಒಂದು ವರ್ಷವಾದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಪ್ರಧಾನಿಯವರು ಕೂಡ ಕರ್ನಾಟಕದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರಾ? ಶೇ 40ರಷ್ಟು ಕಮಿಷನ್, ಕೆಲವು ಕಡೆ ಕೆಲಸ ಮಾಡದೇ ಬಿಲ್ ತೆಗೆದುಕೊಂಡಿದ್ದಾರೆ. ಆದರೆ ಬಸವರಾಜ ಬೊಮ್ಮಾಯಿ ದಾಖಲಾತಿ ನೀಡುವಂತೆ ಕೇಳುತ್ತಾರೆ ಎಂದರು.

ಗುತ್ತಿಗೆ ಸಂಘದವರು ಹೇಳಿಲ್ವಾ ನಿಮಗೆ, ಈ ಬಗ್ಗೆ ನ್ಯಾಯಾಂಗ ತನಿಖೆಯಾಗಲೆಂದು. ಗುತ್ತಿಗೆದಾರ ಸಂಘ ಒತ್ತಾಯಿಸುತ್ತಿದೆ. ಈ ಸರ್ಕಾರದ ಭ್ರಷ್ಟಾಚಾರ ಸಾಕ್ಷಿಯಂತೆ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಶೇ 40ರಷ್ಟು ಕಮಿಷನ್ ಕೊಡಲು ಆಗದೆ ಇದ್ದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರು. ತುಮಕೂರಿನ ಪ್ರವಾಸಿ ಮಂದಿರದಲ್ಲಿ ಓರ್ವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು. ಇವು ನಿಮಗೆ ಸಾಕ್ಷಿ ಅಲ್ಲವೇ? ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನೆ ಮಾಡಿದರು.

ಚನ್ನಗಿರಿ ಶಾಸಕ ಮಾಡಾಲ್ ವಿರುಪಾಕ್ಷಪ್ಪನವರ ಮಗ ಹಾಗೂ ಸರ್ಕಾರಿ ಅಧಿಕಾರಿ ಓರ್ವರು ಗುತ್ತಿಗೆದಾರರ ಬಳಿ ಲಂಚ ಪಡೆದುಕೊಳ್ಳುವಾಗ ನೇರವಾಗಿ ಲೋಕಾಯುಕ್ತ ಕೈಗೆ ಸಿಕ್ಕಿಕೊಂಡಿದ್ದಾರೆ. ಇವೆಲ್ಲವೂ ನಿಮಗೆ ಸಾಕ್ಷಿ ಅಲ್ಲವೇ? ಮುಖ್ಯಮಂತ್ರಿಗಳೇ ಎಂದು ಮರು ಪ್ರಶ್ನೆ ಮಾಡಿದರು. ಇದಕ್ಕಿಂತ ನಿಮಗೆ ಸಾಕ್ಷಿ ಬೇಕಾ?. ನಾನು ಸಿಎಂ ಇದ್ದಾಗ ಆರೋಪ ಬಂದ ತಕ್ಷಣ ಎಂಟು ಪ್ರಕರಣ ಸಿಬಿಐಗೆ ಕೊಟ್ಟಿದ್ದೇ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಮೋದಿಯವರೇ ಪ್ರಧಾನಿ ಆಗಿದ್ರು. 6 ಕೇಸ್‌ಗಳಲ್ಲಿ ಬಿ ರಿಪೋರ್ಟ್ ಬಂದಿದೆ. ಇವರು ಒಂದಾದರೂ ವಿಚಾರಣೆಗೆ ಹೋಗಿದ್ದಾರಾ ?ಎಂದು ಪ್ರಶ್ನೆ ಮಾಡಿದರು.

ಡಿಕೆ ರವಿ, ಗಣಪತಿ ಆತ್ಮಹತ್ಯೆ ಕೇಸ್, ಬೆಳ್ತಂಗಡಿ ಸೌಜನ್ಯ ಕೇಸ್ ದಾಖಲಾತಿ ಕೊಟ್ಟಿದ್ರಾ. ಆರೋಪ ಬಂದ ತಕ್ಷಣ ಸಿಬಿಐಗೆ ಕೊಟ್ಟಿದ್ದೆ. ನಾವು ಕೇಂದ್ರದಲ್ಲಿ ಇದ್ದಾಗ ಸಿಬಿಐ ಚೋರ್ ಬಚಾವೋ ಸಂಸ್ಥೆ ಅಂತಿದ್ರು. ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ಆಗಿತ್ತು ಅಂತಾ ಹೇಳಿದ್ರು. ಐದು ವರ್ಷ ವಿರೋಧ ಪಕ್ಷದಲ್ಲಿ ಇದ್ರಿ, ಆಗ ಈ ವಿಷಯ ಪ್ರಸ್ತಾಪಿಸಿಲ್ಲ ನೀವು. ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಯ್ತು. ಏಕೆ ತನಿಖೆ ಮಾಡಿಸಲಿಲ್ಲ, ದಾಖಲಾತಿ ಇದ್ರೆ ಏಕೆ ತನಿಖೆ ಮಾಡಿಸಲಿಲ್ಲ. ಈಗ ಅವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇಟ್ ಇಸ್ ವೇರಿ ಬ್ಯಾಡ್ ಎಂದ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ: ಇವತ್ತಿನಿಂದ ಬಸವಕಲ್ಯಾಣದಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. 40ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಪ್ರಜಾಧ್ವನಿ ಯಾತ್ರೆ ಜನರ ಭಾವನೆ, ಸಲಹೆಗಳನ್ನು ತಿಳಿದುಕೊಳ್ಳಬೇಕು. ಜನರ ಆಶಯಗಳ ಮೇರೆಗೆ ಈ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಣಾಳಿಕೆ ತಯಾರು ಮಾಡಬೇಕು. ಅಲ್ಲಿ ಜನರ ಸಮಸ್ಯೆ ಪರಿಹರಿಸುವ ಕಾರ್ಯಕ್ರಮ ಸೂಚಿಸಲು ಎರಡು ಹಂತದ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದೇವೆ ಎಂದರು.

ಜನವರಿ ತಿಂಗಳಲ್ಲಿ ಜಿಲ್ಲಾ ಮಟ್ಟದ ಪ್ರಜಾಧ್ವನಿ ಯಾತ್ರೆ ಮುಗಿದಿದೆ. ಎರಡು ಗುಂಪು ಮಾಡಿ ಪ್ರತಿ ವಿಧಾನಸಭಾ ಕ್ಷೇತ್ರ ಭೇಟಿ ನೀಡುತ್ತಿದ್ದೇವೆ. ನಾನು ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಪ್ರವಾಸ ಮಾಡ್ತಿದೀನಿ. ಡಿಕೆಶಿ ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಿರೀಕ್ಷೆ ಮೀರಿ ಪ್ರಜಾಧ್ವನಿ ಯಾತ್ರೆಗೆ ಜನ ಸ್ಪಂದಿಸುತ್ತಿದ್ದಾರೆ. ಈ ಬಾರಿ ಮಹಿಳೆಯರು, ಯುವಕರು ಹೆಚ್ಚು ಹೆಚ್ಚು ಭಾಗವಹಿಸುತ್ತಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದೇವೆ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 10 ರಿಂದ 25 ಸಾವಿರ ಜನರು ಸೇರುತ್ತಿದ್ದಾರೆ. ಜನ ಸಕ್ರೀಯವಾಗಿ ಉತ್ಸಾಹದಿಂದ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಮುಂದಿನ ಚುನಾವಣೆಯಲ್ಲಿ ಧೂಳಿಪಟ ಆಗುತ್ತದೆ : ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸ ಸಂಪೂರ್ಣವಾಗಿ ಬಂದಿದೆ. ಇವತ್ತು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಬರೀ ಗಾಳಿ ಅಲ್ಲ, ಬಿರುಗಾಳಿ ಪ್ರಾರಂಭವಾಗಿದ್ದು ನಾನು ದಿನಕ್ಕೆ ಮೂರು ವಿಧಾನಸಭಾ ಕ್ಷೇತ್ರ ಕವರ್ ಮಾಡ್ತಿದೀನಿ. ನಿನ್ನೆ ಹುಕ್ಕೇರಿ ಮಾತ್ರ ಮಾಡಿದ್ದು, ಇಂದು ಧಾರವಾಡದಲ್ಲಿ ಪ್ರಜಾಧ್ವನಿ ಯಾತ್ರೆಗೆ ಭಾಗವಹಿಸುತ್ತಿದ್ದೇನೆ ಎಂದರು.

ನಾನು ಬಹಳ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ರಾಜ್ಯದ ಜನ ಕಾಂಗ್ರೆಸ್ ಪರವಾಗಿ ಇದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಹಾಗೂ 9 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಕರ್ನಾಟಕ ಜನ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದಾರೆ. ಬಿಜೆಪಿಯವರು ಜನಾಶೀರ್ವಾದದಿಂದ ಬಂದವರಲ್ಲ, ಆಪರೇಷನ್ ಕಮಲ ಮಾಡಿ ನೂರಾರು ಕೋಟಿ ಖರ್ಚು ಮಾಡಿ ಹಿಂಬಾಗಿಲಿನಿಂದ ಅನೈತಿಕವಾಗಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಹೋಟೆಲ್​ನಲ್ಲಿ ಕುಳಿತು ಆಡಳಿತ ನಡೆಸಿದರು : ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಾಡಿದ್ವಿ. ನಾವು 80 ಶಾಸಕರಿದ್ದರೂ ಜೆಡಿಎಸ್‌ಗೆ ಸಿಎಂ ಸ್ಥಾನ ಕೊಟ್ವಿ. ಕೋಮುವಾದಿ ಬಿಜೆಪಿ ಸರ್ಕಾರ ಇರಬಾರದು ಎಂದ ಕುಮಾರಸ್ವಾಮಿರನ್ನ ಸಿಎಂ ಮಾಡಿದ್ವಿ. ಅವರ ಕಾರ್ಯ ವೈಖರಿಯಿಂದ ಸರ್ಕಾರ ಹೋಯ್ತು, ಎಂಎಲ್‌ಎ ಗಳ ಭೇಟಿಯಾಗಲಿಲ್ಲ. ಹೋಟೆಲ್‌ನಲ್ಲಿ ಕುಳಿತುಕೊಂಡರು. ಎಂಎಲ್‌ಎಗಳ ಅಸಮಾಧಾನವನ್ನೇ ಬಿಜೆಪಿ ಕಾಯುತ್ತಿದ್ದರು. ಬಳಿಕ ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ರು. ಬಿಜೆಪಿ ಸರ್ಕಾರ ಬಂದ ಮೇಲೆ ಜನರ ಪರ ಕೆಲಸ ಮಾಡಲಿಲ್ಲ, ಒಳ್ಳೆಯ ಆಡಳಿತ ಕೊಡಲಿಲ್ಲ. ಬರೀ ಭ್ರಷ್ಟಾಚಾರ, ಲೂಟಿ ಹೊಡೆಯಲು ನಿಂತಿದ್ದಾರೆ. ಯಡಿಯೂರಪ್ಪ ಕಾಲದಲ್ಲೂ ನಡೀತು. ಬೊಮ್ಮಾಯಿ ಕಾಲದಲ್ಲೂ ನಡೀತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಖುರ್ಚಿಗಾಗಿ ಕಿತ್ತಾಟ ಇದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರ : ಹೌದು ನಾನು ಸಿಎ‌ಂ ಸ್ಥಾನದ ಆಕಾಂಕ್ಷಿ. Is it any wrong? ಡಿ. ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತೀನಿ ಅಂತಾರೆ. Is it any wrong? ಕೊನೆಗೆ ಎಂಎಲ್‌ಗಳು ನಾಯಕನನ್ನು ಆಯ್ಕೆ ಮಾಡಿ ಹೈಕಮಾಂಡ್ ಗೆ ಕೊಡಬೇಕು. ನೀವು ಆಕಾಂಕ್ಷಿಗಳೇ ಆಗಬೇಡಿ ಅಂಥಾ ಹೇಳಿದ್ರೆ, ಇದೇನು ಡಿಕ್ಟೇಟರ್​ಶಿಪ್ಪಾ​ ? ಇದು ಪ್ರಜಾಪ್ರಭುತ್ವದ ಎಲ್ಲರಿಗೂ ಆಕಾಂಕ್ಷಿ ಆಗೋ ಅವಕಾಶ ಇದೆ. ನಿನಗೂ ಇದೆ, ನನಗೂ ಇದೆ. ಪಾಪ ಪ್ರಹ್ಲಾದ್ ಜೋಶಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ. ನಾವು ಹೊಡೆದಾಡುತ್ತಿಲ್ಲ, ಆಕಾಂಕ್ಷಿಗಳಿದ್ದೀವಿ ಎಂಎಲ್‌ಎಗಳು ಯಾರು ನಾಯಕ ಆಗಬೇಕು ಅಂತಾ ತೀರ್ಮಾನ ಮಾಡುತ್ತಾರೆ ಎಂದರು.

ಅವರು ಮುಖ್ಯಮಂತ್ರಿ ಆಗುತ್ತಾರೆ. ಅಲ್ಲಿ ಹೈಕಮಾಂಡ್ ಅವರು ಸಿಎಂ ಎಂದು ಘೋಷಣೆ ಮಾಡುತ್ತಾರೆ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇಲ್ಲ, ಹೀಗಾಗಿ ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದ್ರು. ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ್ರು. ಆಗ ಎಂಎಲ್‌ಎಗಳ ಅಭಿಪ್ರಾಯ ಪಡೆದ್ರಾ? ಎಂಎಲ್‌ಎಗಳು ಎಲೆಕ್ಟ್ ಮಾಡಿದ್ರಾ? ಬಿಜೆಪಿ ಎಂದರೆ ಪ್ರಜಾಪ್ರಭುತ್ವ ಇಲ್ಲ. ಕಾಂಗ್ರೆಸ್ ಅಂದ್ರೆ ಪ್ರಜಾಪ್ರಭುತ್ವ ಇದೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೆ ಗುಡುಗಿದರು.

ಇದನ್ನೂ ಓದಿ : 'ನನ್ನ ಮಾತನ್ನು ತಪ್ಪಾಗಿ ತೋರಿಸುತ್ತಿದ್ದಾರೆ': ವೈರಲ್ ವಿಡಿಯೋ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟೀಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.