ETV Bharat / state

ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ, ಕುಂದಾನಗರಿಗೆ 'ಮಹಾ' ವೈರಸ್ ಭೀತಿ! - ಎಚ್ಚೆತ್ತುಕೊಳ್ಳದ ಬೆಳಗಾವಿ ಜಿಲ್ಲಾಡಳಿತ

ಈಗಾಗಲೇ ಜಿಲ್ಲಾಡಳಿತ ಎಚ್ಚೆತ್ತು ಇವೆರಡು ರಾಜ್ಯಗಳ ಕೊಂಡಿಯಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್‌ ಪೋಸ್ಟ್‌ನಲ್ಲಿ ಮುಂಜಾಗೃತಾ ಕ್ರಮಗಳನ್ನು ಹಾಗೂ ಕೊವೀಡ್ ತಪಾಸಣೆ ಸೌಲಭ್ಯ ಒದಗಿಸಬೇಕಿದೆ‌. ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷಿಸಿದರೆ ಗಡಿ ಭಾಗದ ಗ್ರಾಮದ ಜನ ಕೊರೊನಾ ರೋಗಕ್ಕೆ ತುತ್ತಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ..

corona-panic-from-maharashtra-
ಕುಂದಾನಗರಿಗೆ 'ಮಹಾ' ವೈರಸ್ ಭೀತಿ
author img

By

Published : Feb 20, 2021, 3:31 PM IST

ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿಢೀರ್‌ ಏರಿಕೆಯಾಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಮತ್ತೆ ಆತಂಕ ಎದುರಾಗಿದೆ.

ಕುಂದಾನಗರಿಗೆ 'ಮಹಾ' ವೈರಸ್ ಭೀತಿ..

ಓದಿ: ಕಡೂರಿನಲ್ಲಿ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

ಮಹಾರಾಷ್ಟ್ರದಲ್ಲಿ ಕೊರೊ‌ನಾ ಕೇಸ್ ಹೆಚ್ಚಾದರೂ ಎಚ್ಚೆತ್ತುಕೊಳ್ಳದ ಬೆಳಗಾವಿ ಜಿಲ್ಲಾಡಳಿತ. ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಂಗನೋಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ಬಳಿ ಮಹಾರಾಷ್ಟ್ರದಿಂದ ಬರುವ ಯಾವುದೇ ವಾಹನ ತಪಾಸಣೆ ಇಲ್ಲದಿರುವುದರಿಂದ ಗಡಿ ಭಾಗದ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.

ಗಡಿ ಭಾಗದಲ್ಲಿ ಯಾವುದೇ ರೀತಿಯ ತಪಾಸಣೆಯೇ ಇಲ್ಲದೆ, ಬಿಂದಾಸ್ ಆಗಿ ಪ್ರಯಾಣಿಕರ ಸಂಚಾರ ನಡೆಯುತ್ತಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕೊಂಗನೋಳಿ ಟೋಲ್‌ನಿಂದ ರಾಜ್ಯಕ್ಕೆ ನಿತ್ಯ ಸಾವಿರಾರು ವಾಹನ ಮತ್ತು ಬಸ್‌ಗಳು ಸಂಚರಿಸುತ್ತವೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ಆತಂಕ ಇದ್ದರೂ, ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದರೆ ಬೆಳಗಾವಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಮಹಾ ಜಿಲ್ಲೆಗಳು ರಾಜ್ಯದ ಗಡಿ ಭಾಗಕ್ಕೆ ಕೊಂಡಿ : ಕರ್ನಾಟಕದ ಜನರಿಗೆ ಮಹಾರಾಷ್ಟ್ರದ ಕೊಲ್ಲಾಪೂರ, ಸಾಂಗಲಿ, ಪುಣೆ, ಮೀರಜ್ ಹೀಗೆ ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿ ಭಾಗದ ಗ್ರಾಮಗಳು ಪರಸ್ಪರ ವ್ಯಾವಹಾರಿಕ ಹಾಗೂ ಕೌಟುಂಬಿಕ ಸಂಬಂಧ ಹೊಂದಿವೆ. ಆರೋಗ್ಯ ಸೇವೆಗಳಿಗೂ ನಿಪ್ಪಾಣಿ, ಚಿಕ್ಕೋಡಿ, ಅಥಣಿ ಭಾಗದ ಜನ ಮಹಾರಾಷ್ಟ್ರ ರಾಜ್ಯದ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ.

ಈಗಾಗಲೇ ಜಿಲ್ಲಾಡಳಿತ ಎಚ್ಚೆತ್ತು ಇವೆರಡು ರಾಜ್ಯಗಳ ಕೊಂಡಿಯಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್‌ ಪೋಸ್ಟ್‌ನಲ್ಲಿ ಮುಂಜಾಗೃತಾ ಕ್ರಮಗಳನ್ನು ಹಾಗೂ ಕೊವೀಡ್ ತಪಾಸಣೆ ಸೌಲಭ್ಯ ಒದಗಿಸಬೇಕಿದೆ‌. ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷಿಸಿದರೆ ಗಡಿ ಭಾಗದ ಗ್ರಾಮದ ಜನ ಕೊರೊನಾ ರೋಗಕ್ಕೆ ತುತ್ತಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.