ETV Bharat / state

ಮೌಢ್ಯದಿಂದ ಕೊರೊನಾ ವಿರುದ್ಧ ಗೆಲುವು ಅಸಾಧ್ಯ, ಇದರಿಂದಲೇ ಸೋಂಕು ಹೆಚ್ಚಾಗುತ್ತೆ: ಬೆಳಗಾವಿ ಎಸ್​ಪಿ - ಎಸ್​ಪಿ ಲಕ್ಷ್ಮಣ ನಿಂಬರಗಿ ಸುದ್ದಿ,

ಮೌಢ್ಯಗಳಿಂದ ಕೊರೊನಾ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಿಲ್ಲ. ಇವುಗಳ ಆಚರಣೆಯಿಂದಲೇ ಕೊರೊನಾ ಹೆಚ್ಚಾಗಲಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

Corona is increased by ignorance, Corona is increased by ignorance says SP Laxman Nimbaragi, SP Laxman Nimbaragi, SP Laxman Nimbaragi news, Belagavi news, ಮೌಢ್ಯಗಳಿಂದಲೇ ಕೊರೊನಾ ಹೆಚ್ಚಾಗಲಿದೆ, ಮೌಢ್ಯಗಳಿಂದಲೇ ಕೊರೊನಾ ಹೆಚ್ಚಾಗಲಿದೆ ಎಂದ ಎಸ್​ಪಿ ಲಕ್ಷ್ಮಣ ನಿಂಬರಗಿ, ಎಸ್​ಪಿ ಲಕ್ಷ್ಮಣ ನಿಂಬರಗಿ, ಎಸ್​ಪಿ ಲಕ್ಷ್ಮಣ ನಿಂಬರಗಿ ಸುದ್ದಿ,
ಮೌಢ್ಯಗಳಿಂದಲೇ ಕೊರೊನಾ ಹೆಚ್ಚಾಗಲಿದೆ ಎಂದ ಎಸ್​ಪಿ
author img

By

Published : May 29, 2021, 8:10 AM IST

ಬೆಳಗಾವಿ: ಮೌಢ್ಯ ಮತ್ತು ಮೂಢನಂಬಿಕೆಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲವು ಸಾಧಿಸಲು ಸಾಧ್ಯವಿಲ್ಲ. ಮೌಢ್ಯಗಳಿಂದ ಕೊರೊನಾ ವೈರಸ್ ಹೆಚ್ಚಾಗಲಿದ್ದು, ವಿನಾಕಾರಣ ಮೌಢ್ಯದ ಹೆಸರಿನಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿದ್ದರೇ ಅಂಥವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದರು.

ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಜಿಲ್ಲೆಯ ‌ಕೆಲವು ಹಳ್ಳಿಗಳಲ್ಲಿ ಮೌಢ್ಯ, ಮೂಢನಂಬಿಕೆಗಳು ವೈಜ್ಞಾನಿಕ ತಳಹದಿಯ ಮೇಲೆ ನಂಬಿಕೆ ಕಳದುಕೊಂಡಿರುವ ಜನರು ಮರಳಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಎಸ್ಪಿ ಬೇಸರ ವ್ಯಕ್ತಪಡಿಸಿದರು.

ಗೋಕಾಕ್​ ತಾಲೂಕಿನ ಮರಡಿಮಠ ಗ್ರಾಮದಲ್ಲಿ ದೇವರ ಕುದುರೆ ಮರಣ ಹೊಂದಿದೆ ಜನರು ಅಂದುಕೊಂಡಿದ್ದರು. ಕುದುರೆಯ ಅಂತ್ಯಕ್ರಿಯೆ ಮಾಡಲು ಸಾವಿರಾರು ಜನರು ಸೇರಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಜನರಿಗೆ ಕೋವಿಡ್ ಸೋಂಕಿನ ಬಗ್ಗೆ ತಿಳುವಳಿಕೆ ಇದೆ. ಆದ್ರೂ ಸಹ ಕೆಲ ಮೌಢ್ಯಗಳ ವೈಜ್ಞಾನಿಕ ತಳಹದಿಯನ್ನು ಬದಿಗೆ ಒತ್ತಿ ಅದು ಮುಂದುವರೆಯುತ್ತದೆ ಎಂಬುದು ಅದೊಂದು ಪ್ರಕರಣ ನಿದರ್ಶನವಾಗಿತ್ತು. ಹೀಗಾಗಿ ಅಂತ್ಯಕ್ರಿಯೆ ನಡೆದ ಮರಡಿಮಠದ ಗ್ರಾಮವನ್ನು ಸೀಲ್‌ಡೌನ್ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಕೋವಿಡ್ ತಪಾಸಣೆ‌ ನಡೆಸಿ 14 ದಿನಗಳ ಕಾಲ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜತೆಗೆ ಪೊಲೀಸ್ ಇಲಾಖೆಯೂ ಆ ಗ್ರಾಮದ ಮೇಲೆ ನಿಗಾ ಇಟ್ಟಿದೆ ಎಂದರು.

ಮೌಢ್ಯಗಳಿಂದಲೇ ಕೊರೊನಾ ಹೆಚ್ಚಾಗಲಿದೆ ಎಂದ ಎಸ್​ಪಿ

ಇದಲ್ಲದೇ ಕಳೆದ ಎರಡು ದಿನಗಳ ಹಿಂದೆ ರಾಯಬಾಗ ತಾಲೂಕಿನ ಅಳಕನೂರಿನ ನಿವಾಸಿಯೊಬ್ಬರು 21 ಕುರಿಗಳನ್ನು ಬಲಿ ಕೊಟ್ಟರೆ ಕೊರೊನಾ ಸೋಂಕು ತೊಲಗಲಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದರು. ಆತನ ವಿರುದ್ಧವೂ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ‌. ಆದ್ರೆ, ಸರ್ಕಾರ ಮತ್ತು ಜಿಲ್ಲಾಡಳಿತ ಕಳೆದ ಒಂದು ವರ್ಷದಿಂದ ಜನರಿಗೆ ವೈಜ್ಞಾನಿಕವಾಗಿ ಎಷ್ಟೇ ತಿಳುವಳಿಕೆ ನೀಡಿ, ಸೋಂಕು ಹೊಗಲಾಡಿಸಲು ಯಾವ ಯಾವ ಕ್ರಮ ಕೈಗೊಳ್ಳಬೇಕೆಂದು ಮಾರ್ಗಸೂಚಿ ಪ್ರಕಟಿಸಿದರೂ ಅದರ ಅರಿವು ಇಲ್ಲದಂತೆ ಜನರು ವರ್ತನೆ ಮಾಡುತ್ತಿದ್ದಾರೆ ಎಂದರು.

ಅರಿವಿಲ್ಲದ ಕೆಲವು ಮುಗ್ಧ ಜನರನ್ನು ಕೆಲವೊಂದಿಷ್ಟು ಜನರ ಹೇಳಿಕೆಗಳನ್ನು ನಂಬಿ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ಜೊತೆಗೆ ರಾಯಬಾಗದ ಸುಲ್ತಾನಪುರದಲ್ಲಿಯೂ ಕೂಡ ಅರ್ಚಕರು ಗ್ರಾಮದೇವತೆಯ ಜಾತ್ರೆಯಾಗಿಲ್ಲ ಅದನ್ನು ಮಾಡಬೇಕೆಂದು ಹೇಳಿದ ಕೂಡಲೇ ಇಲ್ಲಿನ ಜನ ಯಾರಿಗೂ ಹೇಳದೆ ಬೆಳಗ್ಗೆ ಗ್ರಾಮ ದೇವಿಯ ಪೂಜೆ ಮಾಡಲು ಪ್ರಯತ್ನಿಸಿದವರ ವಿರುದ್ಧವೂ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ಸೋಂಕನ್ನು ಮೌಢ್ಯಗಳಿಂದ ದೂರ ಮಾಡಲು ಸಾಧ್ಯವಿಲ್ಲ. ಇದಕ್ಕೆ ಬೇಕಾಗಿರುವುದು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಹಾಗೂ ವ್ಯಾಕ್ಸಿನೇಷನ್‌. ಈ ನಾಲ್ಕನ್ನು ಪಾಲಿಸಿದರೆ ಮಾತ್ರ ಕೊರೊನಾ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಗುತ್ತೆದೆ ಎಂದು ಎಸ್​ಪಿ ಸಲಹೆಗಳನ್ನು ನೀಡಿದರು.

ಮೌಢ್ಯದಿಂದ ಕೊರೊನಾ ಗೆಲ್ಲುತ್ತೇವೆ ಎಂದರೆ ಅದು ತಪ್ಪು ಕಲ್ಪನೆ. ಇದರಿಂದ ಕೊರೊನಾ ಸೋಂಕು ಕಡಿಮೆಯಾಗುವುದಿಲ್ಲ, ಹೆಚ್ಚಾಗುತ್ತದೆ. ಮೌಢ್ಯ ನಂಬಿಕೆಗೆ ಬಲಿಯಾಗದೆ ವೈಜ್ಞಾನಿಕ ಸತ್ಯ ಅರಿತುಕೊಳ್ಳಬೇಕಿದೆ. ವಿನಾಕಾರಣ ಮೌಢ್ಯದ ಹೆಸರಿನಲ್ಲಿ ಕೋವಿಡ್ ನಿಯಮ ಪಾಲನೆ ಮಾಡದಿದ್ದರೇ ಅಂಥವರ ಮೇಲೆ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದರು.

ಓದಿ: ಕಟ್ಕೊಂಡ ಹೆಂಡ್ತಿಯನ್ನೇ ಇನ್ನೊಬ್ಬನಿಗೆ ಧಾರೆ ಎರೆದ ಪತಿರಾಯ.. ಇದೊಂಥರಾ ವಿಲಕ್ಷಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.