ETV Bharat / state

ಕೊರೊನಾಗೆ ನಲುಗಿದ ಕುಂದಾನಗರಿ: ಒಂದೇ ದಿನ 51 ಪ್ರಕರಣಗಳು ಪತ್ತೆ - Gujarat Corona Travel History

ರಾಜ್ಯದಲ್ಲಿ ಇಂದು ಸಹ ಕೊರೊನಾ ರಣಕೇಕೆ ಮುಂದುವರಿದಿದೆ. ಇತ್ತ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಅಲ್ಲದೆ ಇಂದು ಒಂದೇ ದಿನ 51 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 211ಕ್ಕೆ ಏರಿಕೆಯಾಗಿದೆ.

Corona cases raised double hundred in Belagavi: 51 new cases reported today
ಕೊರೊನಾಗೆ ನಲುಗಿದ ಕುಂದಾನಗರಿ: ಒಂದೇ ದಿನ 51 ಪ್ರಕರಣ, ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ
author img

By

Published : Jun 2, 2020, 9:38 PM IST

ಬೆಳಗಾವಿ: ಜಿಲ್ಲೆಯಲ್ಲಿ ಇಂದು ಒಂದೇ ದಿನ 51 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 211ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನಲ್ಲಿದ್ದ 51 ಜನರಿಗೆ ಸೋಂಕು ದೃಢಪಟ್ಟಿದೆ. ಗೋಕಾಕ್, ಮೂಡಲಗಿಗೂ ಮಹಾಮಾರಿ ಕೊರೊನಾ ವ್ಯಾಪಿಸಿದ್ದು, ಕರದಂಟು ನಗರಿ ಜನತೆ ಬೆಚ್ಚಿಬಿದ್ದಿದ್ದಾರೆ.

ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ 22 ಜನರಲ್ಲಿ ಕೊರೊನಾ‌ ದೃಢಪಟ್ಟಿದೆ. ಬೆಳಗಾವಿ ತಾಲೂಕಿನ ಅತವಾಡ ಗ್ರಾಮದ 11, ಬಾಳೇಕುಂದ್ರಿಯಲ್ಲಿ 2, ಮುತಗಾ 2, ಸಾಂಬ್ರಾ 1, ಸಾವಗಾಂವ 1, ಸುಳಗಾ 2, ಉಚಗಾಂವನ ಮೂವರಲ್ಲಿ ಕೊರೊನಾ ದೃಢವಾಗಿದೆ.

ಬೆಳಗಾವಿ ಜಿಲ್ಲೆ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ 22 ಜನರಲ್ಲಿ ಪ್ರಕರಣ ಪತ್ತೆಯಾಗಿದೆ. ದಡ್ಡಿ ಗ್ರಾಮದಲ್ಲಿ 11, ಕೋತ್ ಗ್ರಾಮ 3, ಮೋದಗಾ 2, ಮನಗುತ್ತಿ 2, ಬೀದ್ರೇವಾಡಿ 1, ದುಂಡಗಟ್ಟಿಯಲ್ಲಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದ 7 ಪ್ರಕರಣಗಳು ಜಿಲ್ಲೆಯ ವಿವಿಧ ಪ್ರದೇಶಗಳದ್ದು ಎನ್ನಲಾಗುತ್ತಿದೆ.

ಪತ್ತೆಯಾದ 51 ಪ್ರಕರಣಗಳ ಪೈಕಿ 46 ಜನರಿಗೆ ಮಹಾರಾಷ್ಟ್ರ ನಂಟು, ದೆಹಲಿ 2 ಹಾಗೂ ಗುಜರಾತ್​ನಿಂದ ಮರಳಿದ ಇಬ್ಬರಿಗೆ ಹಾಗೂ ಮತ್ತೋರ್ವನಲ್ಲಿ ಸೋಂಕು ಪತ್ತೆಯಾಗಿದೆ.

ಇದಲ್ಲದೆ ಪಿ-3703, ಪಿ-3714 ರೋಗಿಗಳಿಗೆ ಸೋಂಕು ಹೇಗೆ ಬಂತು ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಯಾವುದೇ ಅನ್ಯರಾಜ್ಯಗಳ ಟ್ರಾವೆಲ್ ಹಿಸ್ಟರಿ ಇಲ್ಲದ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇನ್ನೂ 2,500 ಜನರ ವರದಿ ಬರಬೇಕಿದ್ದು, ಇದುವರೆಗೆ 126 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಸದ್ಯ 93 ಸಕ್ರೀಯ ಕೊರೊನಾ ಪ್ರಕರಣಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.