ETV Bharat / state

ಮಹಾರಾಷ್ಟ್ರದಲ್ಲಿ ಮುಂದುವೆರೆದ ಮಳೆಯ ಅಬ್ಬರ: ತುಂಬಿ ಹರಿಯುತ್ತಿದೆ ಕೃಷ್ಣಾ ನದಿ - ಕೃಷ್ಣಾ ನದಿ

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಮತ್ತೆ ಕೃಷ್ಣಾ ನದಿ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಸದ್ಯ 2 ಲಕ್ಷ 15 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ತುಂಬಿ ಹರಿಯುತ್ತಿರುವ ಕೃಷ್ಣಾ ನದಿ
author img

By

Published : Aug 2, 2019, 11:07 AM IST

Updated : Aug 2, 2019, 12:15 PM IST

ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಮತ್ತೆ ಕೃಷ್ಣಾ ನದಿ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ನೀರು ಹೆಚ್ಚಳದಿಂದ ಇಲ್ಲಿನ ಸುಗಂಧಾ ದೇವಿ ದೇವಸ್ಥಾನ ಜಲಾವೃತಗೊಂಡಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸದತ್ತಿ ಗ್ರಾಮದ ಸುಗಂಧಾ ದೇವಿ ದೇವಸ್ಥಾನ ಜಲಾವೃತಗೊಂಡಿದ್ದು, ಸದ್ಯ 2 ಲಕ್ಷ 15 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಂಬಿ ಹರಿಯುತ್ತಿರುವ ಕೃಷ್ಣಾ ನದಿ

ಈಗಾಗಲೇ ಮಹಾರಾಷ್ಟ್ರದ ರಾಧಾನಗರಿ ಜಲಾಶಯ ಹಾಗೂ ಸಾತಾರ ಜಿಲ್ಲೆಯ ಕೊಯ್ನಾ ಜಲಾಶಯ ಶೇ. 85ರಷ್ಟು ಭರ್ತಿಯಾದ ಪರಿಣಾಮ ಇಂದಿನಿಂದ ಕ್ರಮೇಣ ನೀರು ಬಿಡಲು ನಿರ್ಧಾರಿಸಲಾಗಿದೆ.

ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಒಟ್ಟು 8 ಸೇತುವೆಗಳು ಮುಳುಗಡೆ:

ರಾಯಬಾಗ ತಾಲೂಕಿನ ಕುಡಚಿ - ಉಗಾರ, ಚಿಂಚಲಿ-ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ಆರು ಸೇತುವೆಗಳು ಜಲಾವೃತವಾಗಿದ್ದು, ಪರ್ಯಾಯ ಮಾರ್ಗಗಳಿಂದ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ನದಿ ಪಾತ್ರದಲ್ಲಿ ಹೆಚ್ಚಿದ ಪ್ರವಾಹದ ಭೀತಿ: ಜಿಲ್ಲಾಡಳಿತವು ತೋಟದ ವಸತಿ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿದೆ. ಪ್ರವಾಹ ಎದುರಿಸಲು ಮುನ್ನೆಚ್ಚರಿಕೆಗಾಗಿ 10 ಬೋಟ್​​ ಹಾಗೂ ಎಸ್.ಡಿ.ಆರ್.ಎಫ್. ತಂಡ ನಿಯೋಜನೆ ಮಾಡಲಾಗಿದ್ದು, ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲಾಗಿದೆ.

ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ್​ ಘೋಷಣೆ ಮಾಡಿದ್ದು, ಮುನ್ನೆಚ್ಚರಿಕೆಯಾಗಿ ಗ್ರಾಮಗಳನ್ನು ಬಿಡಲು ಗ್ರಾಮಸ್ಥರಿಗೆ ಈಗಾಗಲೇ ಅಧಿಕಾರಿಗಳು ಸೂಚಿಸಿದ್ದಾರೆ.

Intro:ಮಹಾರಾಷ್ಟದಲ್ಲಿ ಮುಂದುವೆರೆದ ಮಳೆಯ ಅಬ್ಬರ : ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಮತ್ತೆ ಏರಿಕೆ
Body:
ಚಿಕ್ಕೋಡಿ :

ಮಹಾ ಘಟ್ಟಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ದಿನದಿಂದ ದಿನಕ್ಕೆ ಮತ್ತೆ ಕೃಷ್ಣಾ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು ನೀರು ಹೆಚ್ಚಳದಿಂದ ಸುಗಂಧಾ ದೇವಿ ದೇವಸ್ಥಾನ ಜಲಾವೃತಗೊಂಡಿದೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸದತ್ತಿ ಗ್ರಾಮದ ಸುಗಂಧಾ ದೇವಿ ದೇವಸ್ಥಾನ ಜಲಾವೃತಗೊಂಡಿದ್ದು ಸದ್ಯ 2 ಲಕ್ಷ 15 ಸಾವಿರ ಕ್ಯೂಸೆಕ್ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಭರ್ತಿ ಆಗಿರುವ ಮಹಾರಾಷ್ಟ್ರದ ರಾಧಾನಗರಿ ಜಲಾಶಯ ಹಾಗೂ ಸಾತಾರ ಜಿಲ್ಲೆಯ ಕೊಯ್ನಾ ಜಲಾಶಯ ಶೇ 85 ರಷ್ಟು ಭರ್ತಿ ಇಂದಿನಿಂದ ಕ್ರಮೇಣ ನೀರು ಬಿಡಲು ನಿರ್ಧಾರಿಸಲಾಗಿದೆ.

ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಒಟ್ಟು 8 ಸೇತುವೆಗಳು ಮುಳುಗಡೆ :

ರಾಯಬಾಗ ತಾಲೂಕಿನ ಕುಡಚಿ - ಉಗಾರ, ಚಿಂಚಲಿ-ರಾಯಬಾಗ ಸೇತುವೆ ಮುಳುಗಡೆ ಹಾಗೂ ಚಿಕ್ಕೋಡಿ ತಾಲೂಕಿನ ಆರು ಸೇತುವೆ ಜಲಾವೃತ ಸ್ಥಿಥಿ ಮುಂದುವರಿಕೆ ಪರ್ಯಾಯ ಮಾರ್ಗಗಳಿಂದ ಸಂಚರಿಸುತ್ತಿರುವ ಪ್ರಯಾಣಿಕರು.

ನದಿ ಪಾತ್ರದಲ್ಲಿ ಹೆಚ್ಚಿದ ಪ್ರವಾಹದ ಭೀತಿ :

ತೋಟದ ವಸತಿ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿರುವ ಜಿಲ್ಲಾಡಳಿತ. ಪ್ರವಾಹ ಎದುರಿಸಲು ಮುನ್ನೆಚ್ಚರಿಕೆಗಾಗಿ 10 ಬೋಟಗಳು ಹಾಗೂ ಎಸ್.ಡಿ.ಆರ್.ಎಫ್. ತಂಡಗಳ ನಿಯೋಜನೆ ಮಾಡಲಾಗಿದ್ದು, ನದಿ ತೀರದಲ್ಲಿ ಬೆಳಗಾವಿ ಜಿಲ್ಲಾಡಳಿತದಿಂದ ಕಟ್ಟೆಚ್ಚರ ವಹಿಸಲಾಗಿದೆ.

ನದಿ ತೀರದ ಗ್ರಾಮಗಳಿಗೆ ಹೈ ಅಲರ್ಟ ಘೋಷಣೆ ಮಾಡಿದ್ದು ಮುನ್ನೆಚ್ಚರಿಕೆಯಾಗಿ ಗ್ರಾಮಗಳನ್ನು ಬಿಡಲು ಈಗಾಗಲೇ ಅಧಿಕಾರಿಗಳು ಸೂಚಿಸಿದ್ದಾರೆ.

Conclusion:
Last Updated : Aug 2, 2019, 12:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.