ETV Bharat / state

ಅಭಿಮಾನಿಗಳು ಆತಂಕಪಡೋ ಅಗತ್ಯವಿಲ್ಲ: ಸಿಎಂ‌ ಬಿ.ಎಸ್.ಯಡಿಯೂರಪ್ಪ - cm bs yediyurappa reaction

ಇದುವರೆಗೆ ಹೈಕಮಾಂಡ್​ನಿಂದ ಯಾವುದೇ ರೀತಿಯ ಸಂದೇಶ ಬಂದಿಲ್ಲ, ಅಭಿಮಾನಿಗಳು ಆತಂಕಪಡೋ ಅಗತ್ಯವಿಲ್ಲ ಎಂದು‌ ಸಿಎಂ‌ ಬಿ.ಎಸ್.ಯಡಿಯೂರಪ್ಪ ಬೆಳಗಾವಿಯಲ್ಲಿ ಹೇಳಿದ್ದಾರೆ.

cm yediyurappa message to fans
ಬೆಳಗಾವಿ
author img

By

Published : Jul 25, 2021, 5:23 PM IST

ಬೆಳಗಾವಿ: ಇದುವರೆಗೆ ಹೈಕಮಾಂಡ್​ನಿಂದ ಯಾವುದೇ ರೀತಿಯ ಸಂದೇಶ ಬಂದಿಲ್ಲ, ಕಾದು ನೋಡೋಣ. ಅಭಿಮಾನಿಗಳು ಆತಂಕಪಡೋ ಅಗತ್ಯವಿಲ್ಲ ಎಂದು‌ ಸಿಎಂ‌ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ‌ ಬಿ. ಎಸ್.ಯಡಿಯೂರಪ್ಪ ಪ್ರತಿಕ್ರಿಯೆ

ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಗೋವಾದಲ್ಲಿ ನಡ್ಡಾ ಏನ್​ ಹೇಳಿದ್ದಾರೆ ಅನ್ನೋದು ನನ್ನ ಗಮನಕ್ಕೆ ಬಂದಿಲ್ಲ. ನಾನು ಬೆಂಗಳೂರಿಗೆ ಹೋದ ಮೇಲೆ ಮಾತನಾಡುತ್ತೇನೆ ಎಂದು ಹೇಳಿದ್ರು.

ಇದನ್ನೂ ಓದಿ:ಬಿಎಸ್​ವೈ ಕಾರ್ಯಕ್ಕೆ ಜೆ.ಪಿ ನಡ್ಡಾ ಮೆಚ್ಚುಗೆ: ನಾಯಕತ್ವ ಬದಲಾವಣೆ ಬಗ್ಗೆ ಅವರು ಹೇಳಿದ್ದಿಷ್ಟು..

ಎಲ್ಲರೂ ಪಕ್ಷ ಸಂಘಟನೆ ಮಾಡೋಣ. ಎರಡು ವರ್ಷ ಸರ್ಕಾರ ನಡೆಸಿದ್ದು ನನಗೆ ತೃಪ್ತಿ ತಂದಿದೆ. ಶಕ್ತಿ ಮೀರಿ ಸಹೋದ್ಯೋಗಿಗಳ ಸಹಕಾರದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಅಭಿಮಾನಿಗಳು ಆತಂಕ ಪಡೋದು ಬೇಡ. ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಮೋದಿ‌, ಜೆ.ಪಿ.ನಡ್ಡಾ ಅವರು ನನ್ನ ಜೊತೆ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ನಾನು ಹೈಕಮಾಂಡ್​ ಹಾಕಿದ ಗೆರೆ ದಾಟುವುದಿಲ್ಲ: ಬಿ.ಎಸ್‌.ಯಡಿಯೂರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.