ETV Bharat / state

ಬಿಎಸ್​ವೈ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆಯಿಲ್ಲ: ಸಿಎಂ ಬೊಮ್ಮಾಯಿ - ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ

ಈಗ ತಾನೇ ಜನರು ಕೋವಿಡ್‌ನಿಂದ ಹೊರಬಂದಿದ್ದು, ಆರ್ಥಿಕ ಚಟುವಟಿಕೆ ನಡೆಸುತ್ತಿದ್ದಾರೆ. ಭಾರತ್ ಬಂದ್​ನಿಂದ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ರೈತ ಸಂಘಟನೆಗಳು ಸಹಕಾರ ನೀಡಬೇಕು. ಕೋವಿಡ್ ಹಿನ್ನೆಲೆ ಬಹಳಷ್ಟು ಆರ್ಥಿಕ ಚಟುವಟಿಕಗಳು ನಿಂತು ಹೋಗಿದ್ದವು. ಈಗಷ್ಟೇ ಪುನಾರಂಭ ಆಗಿವೆ. ಇದಕ್ಕೆ ಅನುವು ಮಾಡಿಕೊಡಬೇಕು ಎಂದು ಸಿಎಂ ಮನವಿ ಮಾಡಿದರು.

CM Basavaraj bommai reaction on yeddyurappa's state tour
ಬಿಎಸ್​ವೈ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆಯಿಲ್ಲ: ಸಿಎಂ ಬೊಮ್ಮಾಯಿ
author img

By

Published : Sep 26, 2021, 10:37 AM IST

Updated : Sep 26, 2021, 12:50 PM IST

ಬೆಳಗಾವಿ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಈ ಬಗ್ಗೆ ಸ್ಪಷ್ಟ‌ನೆ ಕೊಟ್ಟಿದ್ದಾರೆ. ಬಿಎಸ್‌ವೈ ರಾಜ್ಯ ಪ್ರವಾಸಕ್ಕೆ ಯಾವುದೇ ತೊ‌ಂದರೆ ಇಲ್ಲ ಅಂತ ಹೇಳಿದ್ದಾರೆ. ಅದಕ್ಕಿಂತ ಹೆಚ್ಚು ಏನೂ ಹೇಳಲ್ಲ ಎಂದರು.

861 ಕೋಟಿ ರೂ. ಪರಿಹಾರ:

2019-20ರಲ್ಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಾಗಿ ಸಾಕಷ್ಟು ಬೆಳೆ, ಮ‌ನೆಗಳಿಗೆ ಹಾನಿಯಾಗಿತ್ತು. ಪೂರ್ಣ ಬಿದ್ದ ಮನೆಗಳಿಗೆ ಬಿಎಸ್​ವೈ 5 ಲಕ್ಷ ರೂ. ಘೋಷಣೆ ಮಾಡಿದ್ದರು. ಭಾಗಶಃ ಬಿದ್ದ ಮನೆಗಳ ಎರಡು ಭಾಗ ಮಾಡಿ ಒಂದು ಲಕ್ಷ, ಮೂರು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಮನೆಗಳ ರಿಪೇರಿಗೆ 50 ಸಾವಿರ ರೂ ಪರಿಹಾರ ಘೋಷಿಸಿಸಲಾಗಿತ್ತು. ಬೆಳಗಾವಿ ಜಿಲ್ಲೆಯ 44,205 ಮನೆಗಳಿಗೆ ಈಗಾಗಲೇ ಈಗಾಗಲೇ 861 ಕೋಟಿ ರೂ. ಪರಿಹಾರ ಕೊಟ್ಟಿದ್ದೇವೆ. ಬೆಳೆಹಾನಿಯಾದ 1 ಲಕ್ಷ 63 ಸಾವಿರ ರೈತರಿಗೆ 263 ಕೋಟಿ ರೂ. ನೀಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ಪರಿಹಾರ ಸಿಕ್ಕಿಲ್ಲ. ಈ ಸಂಬಂಧ ನಾನು, ಡಿಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒಂದು ಸಭೆ ಮಾಡಿದ್ದೇವೆ. ಮುಂದಿನ ವಾರ ಬೆಂಗಳೂರಿಗೆ ಬೆಳಗಾವಿ ಡಿಸಿ ಬರ್ತಾರೆ, ಈ ವೇಳೆ ಚರ್ಚೆ ಮಾಡುತ್ತೇವೆ. ಹಣಕಾಸು ಇಲಾಖೆಯವರ ಜೊತೆ ಚರ್ಚೆ ಮಾಡಿ ಪರಿಹಾರಕ್ಕೆ ಕ್ರಮವಹಿಸುತ್ತೇನೆ ಎಂದು ಹೇಳಿದರು.

ಸ್ವಾಮೀಜಿ ಜೊತೆಗೆ ಸಂಪರ್ಕದಲ್ಲಿದ್ದೇನೆ:

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅ.1ರಂದು ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆಗೆ ನಿರ್ಧರಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಾನು ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಿಂದುಳಿದ ವರ್ಗಗಳ ಆಯೋಗ ವರದಿ ಬಂದ ಮೇಲೆ ಕ್ರಮವಹಿಸುತ್ತೇನೆ. ಅದರ ಪ್ರಗತಿ ಬಗ್ಗೆ ತಿಳಿದುಕೊಂಡು ಮಾತನಾಡ್ತೇನೆ. ಇಂದು ಶ್ರೀಗಳ ಜೊತೆ ಫೋನ್‌ನಲ್ಲಿ ಮಾತನಾಡ್ತೇ‌ನೆ. ಸಮಸ್ಯೆಗಳನ್ನು ಎಲ್ಲರೂ ಸೇರಿ ಬಗೆಹರಿಸಬೇಕಿದೆ. ಕಿತ್ತೂರು ಕರ್ನಾಟಕ ಘೋಷಣೆ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ಮಾಡುವುದಾಗಿ ತಿಳಿಸಿದರು.

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ನಾಳೆ ಭಾರತ್ ಬಂದ್‌ಗೆ ಕಿಸಾನ್ ಮೋರ್ಚಾ ಕರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ತಾನೇ ಜನರು ಕೋವಿಡ್‌ನಿಂದ ಹೊರಬಂದಿದ್ದು, ಆರ್ಥಿಕ ಚಟುವಟಿಕೆ ನಡೆಸುತ್ತಿದ್ದಾರೆ. ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ, ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ರೈತ ಸಂಘಟನೆಗಳು ಸಹಕಾರ ಮಾಡಬೇಕು. ಕೋವಿಡ್ ಹಿನ್ನೆಲೆ ಬಹಳಷ್ಟು ಆರ್ಥಿಕ ಚಟುವಟಿಕಗಳು ನಿಂತು ಹೋಗಿದೆ. ಈಗ ಪ್ರಾರಂಭ ಆಗಿದೆ. ಇದಕ್ಕೆ ಅನುವು ಮಾಡಿಕೊಡಬೇಕು ಎಂದು ರೈತರಿಗೆ ಸಿಎಂ ಮನವಿ ಮಾಡಿದರು.

ಮಕ್ಕಳಲ್ಲಿ ಜ್ವರ; ಸಿಎಂ ಏನಂದ್ರು?

ರಾಜ್ಯದ ಎಲ್ಲ ಕಡೆ ಮಕ್ಕಳಲ್ಲಿ ಜ್ವರ ಕಾಣಿಸುತ್ತಿದೆ. ಮಕ್ಕಳಿಗೆ ಫೀವರ್ ಇರುವುದರಿಂದ ಜಿಲ್ಲಾಸ್ಪತ್ರೆಗಳಲ್ಲಿ ಚೆಕಪ್ ಮಾಡಲು ಸೂಚಿಸಲಾಗಿದೆ. ಪಿಹೆಚ್‌ಸಿಗಳಲ್ಲಿ ಚೆಕಪ್ ಹಾಗೂ ಆರೋಗ್ಯ ಶಿಬಿರ ಆಯೋಜನೆಗೆ ನಿರ್ದೇಶನ ನೀಡಲಾಗಿದೆ ‌ಎಂದು ತಿಳಿಸಿದರು.

ಸಕ್ಕರೆ ನಿರ್ದೇಶನಾಲಯ ಕಚೇರಿ ಆರಂಭಕ್ಕೆ ಸೂಚನೆ:

ಅ.3ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಸಕ್ಕರೆ ನಿರ್ದೇಶನಾಲಯ ಕಚೇರಿ ಕಾರ್ಯಾರಂಭ ಮಾಡಲಿದೆ. ಸುವರ್ಣಸೌಧಕ್ಕೆ ಕೆಲವು ಕಚೇರಿಗಳ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಡಿಸೆಂಬರ್​​ನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಚಿಂತನೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಡಿಸೆಂಬರ್ ಒಳಗೆ ಯಾವ ಕಚೇರಿ ಶಿಫ್ಟ್ ಮಾಡಲು ಸಾಧ್ಯ ಇದೆ ಆ ಎಲ್ಲ ಕಚೇರಿ ಸುವರ್ಣಸೌಧಕ್ಕೆ ಶಿಫ್ಟ್ ಮಾಡ್ತೇವೆ. ನಿನ್ನೆ ಸಾವರಿನ್ ಕಾರ್ಖಾನೆಯ ರೈತರು ನನ್ನ ಜೊತೆ ಮಾತನಾಡಿದ್ದಾರೆ. ಖಾಸಗಿ ಕಾರ್ಖಾನೆ, ಸರ್ಕಾರದ್ದಲ್ಲ ಹೀಗಾಗಿ ಪ್ರೈವೇಟ್‌ನವರೇ ಭರಿಸಬೇಕು. ಬಾಕಿ ಕೊಡದಿದ್ದರೆ ಕಾನೂನಾತ್ಮಕ ಕ್ರಮ ಜರುಗಿಸುತ್ತೇವೆ. ಕಾರ್ಖಾನೆಯವರು, ಸಕ್ಕರೆ ಆಯುಕ್ತಾಲಯ ಅಧಿಕಾರಿಗಳು, ಅಪೆಕ್ಸ್ ಬ್ಯಾಂಕ್​​ನವರ ಸಭೆ ನಡೆಸಿ ಬಗೆಹರಿಸುವೆ ಎಂದು ಭರವಸೆ ನೀಡಿದರು.

ಜಾರಕಿಹೊಳಿ‌ ಬ್ರದರ್ಸ್ ಬಗ್ಗೆ ಸಿಎಂ ಏನಂದ್ರು?

ಜಾರಕಿಹೊಳಿ ಬ್ರದರ್ಸ್ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಅದೇನು ಸಮಸ್ಯೆ ಇಲ್ಲ, ಬರಲ್ಲ ಅಂತಾ ಈಗಾಗಲೇ ತಿಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಬಾಲಚಂದ್ರ ಜಾರಕಿಹೊಳಿ ಪತ್ರ ಬರೆದಿದ್ದಾರೆ. ಗಡಿ ಸಂರಕ್ಷಣಾ ಆಯೋಗವನ್ನು ಶಕ್ತಿಶಾಲಿ ಮಾಡ್ತೇವೆ. ಬೊಮ್ಮಾಯಿ ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಎಲ್ಲರೂ ಟೇಕ್ ಆಫ್ ಆಗಿದೆ ಅಂತಾ ಹೇಳ್ತಿದಾರೆ. ಜನಸಾಮಾನ್ಯರ ಧ್ವನಿ ತುಂಬಾ ಮುಖ್ಯ, ಜನ ಸ್ಪಂದನೆ ಮಾಡಿದ್ದರಿಂದ ಜನರಲ್ಲಿ ವಿಶ್ವಾಸ ಮೂಡಿದೆ. ಸರ್ಕಾರ ಟೇಕ್ ಆಫ್ ಆಗಿ ಬಹಳ ದಿನ ಆಗಿದೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಬಾಂಗ್ಲಾ, ಒಡಿಶಾ, ಆಂಧ್ರದಲ್ಲಿ ಗುಲಾಬ್ ಚಂಡಮಾರುತದ ಅಬ್ಬರ.. ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ

Last Updated : Sep 26, 2021, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.