ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಒಟ್ಟು 36 ಗ್ರಾಮ ಪಂಚಾಯಿತಿ ಹೊಂದಿದ್ದು, ಅದರಲ್ಲಿ ಜನವಾಡ ಗ್ರಾಮ ಪಂಚಾಯಿತಿಯ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಒಟ್ಟು 36 ಗ್ರಾಮ ಪಂಚಾಯಿತಿಗಳ ಪೈಕಿ 35 ಗ್ರಾಮ ಪಂಚಾಯಿತಿಗಳು ಸ್ಪರ್ಧೆಗೆ ಸಜ್ಜುಗೊಂಡಿದ್ದು, ಪುರುಷ ಅಭ್ಯರ್ಥಿಗಳು 854 ಹಾಗೂ ಮಹಿಳಾ ಅಭ್ಯರ್ಥಿಗಳು 774 ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ. 667 ಸ್ಥಾನಗಳ ಪೈಕಿ 625 ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟರೆ, ಇನ್ನುಳಿದ 42 ಸ್ಥಾನಗಳಲ್ಲಿ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ. ಅಂತಿಮವಾಗಿ ಕಣದಲ್ಲಿ ಒಟ್ಟು 1,628 ಅಭ್ಯರ್ಥಿಗಳಿದ್ದಾರೆ. ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಾಗಿ ಮಹಿಳೆಯರೇ ಕಣದಲ್ಲಿದ್ದು ಪತಿರಾಯರೇ ಪ್ರಚಾರಕ್ಕಿಳಿದು ಮನೆ ಮನೆಗೆ ತೆರಳಿ ಮತಬೇಟೆ ನಡೆಸುತ್ತಿದ್ದಾರೆ.
ಓದಿ: ಹೊಸ ಕೋವಿಡ್ ವೈರಸ್: ಇಂಗ್ಲೆಂಡ್, ನೆದರ್ಲೆಂಡ್ಸ್, ಡೆನ್ಮಾರ್ಕ್ ಪ್ರಯಾಣಿಕರಿಗೆ ನಿಷೇಧ: ಸಚಿವ ಸುಧಾಕರ್
ತಾಲೂಕಿನ ಗ್ರಾಮ ಪಂಚಾಯ್ತಿಯಲ್ಲಿ ಅವಿರೋಧ ಆಯ್ಕೆ ಅಭ್ಯರ್ಥಿ ಪಟ್ಟಿ : ಮಾಂಜರಿ ಗ್ರಾ.ಪಂ -1, ಖಡಕಲಾಟ ಗ್ರಾ.ಪಂ ತಪರಾಕವಾಡಿ -1, ಯಡುರ ಗ್ರಾ.ಪಂ ಯ ಯಡೂವಾಡಿ -1, ಶಿರಗಾಂವ ಗ್ರಾಂ.ಪಂ ಶಿರಗಾಂವವಾಡಿ -1, ನಾಗರಮುನ್ನೋಳಿ ಗ್ರಾ.ಪಂ -1, ಜಾಗನೂರು ಗ್ರಾ.ಪಂ. ವಿಜಯನಗರ -1, ಸ್ನೇಹನಗರ -1, ಪೋಗತ್ಯಾನಟ್ಟಿ - 4, ಮಮದಾಪೂರ ಕೆ.ಕೆ - 3, ಗ್ರಾ.ಪಂ ಯ ಜೋಡಕೂರಳಿ - 1, ವಡ್ರಾಳ ಗ್ರಾ.ಪಂ ಯ ಮಜಲಟ್ಟಿ -1, ಬಂಬಲವಾಡ ಗ್ರಾ.ಪಂ ಯ ಕುಂಗಟೊಳ್ಳಿ -1, ಕರಗಾಂವ ಗ್ರಾ.ಪಂ ಯ ಕರಗಾಂವ - 1, ಹಂಚನಾಲ ಕೆ.ಕೆ - 2, ಮುಗಳಿ ಗ್ರಾ.ಪಂ ಯ ಕಮತ್ಯನಟ್ಟಿ ಒಟ್ಟು 5, ನನದಿ ಗ್ರಾ.ಪಂ ಯ ಶುಗರ್ ಪ್ಯಾಕ್ಟರಿ - 1, ಮಲಿಕವಾಡ ಗ್ರಾ.ಪಂ ಯ - 6, ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಜನವಾಡ ಗ್ರಾಮ ಪಂಚಾಯಿತಿ ಒಟ್ಟು 10 ಸ್ಥಾನಗಳ ಪೈಕಿ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿರುವುದು ಅಚ್ಚರಿ ಮೂಡಿಸಿದೆ.