ಚಿಕ್ಕೋಡಿ: ಸಾಮಾನ್ಯವಾಗಿ ಎತ್ತು, ಕುದುರೆ, ಕೋಣಗಳ ಬಂಡಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ರೈತ ಮೇಕೆಗಳಿಗೆ ಬಂಡಿ ಕಟ್ಟಿ ಓಡಿಸುತ್ತಿದ್ದಾನೆ.
ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿರುವ ಅಪ್ಪಾಸಾಬ ಚನ್ನವರ ಎಂಬ ರೈತ ಕಳೆದೊಂದು ವರ್ಷದಿಂದ ಮೇಕೆಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಈತ ತನ್ನ ಪ್ರತಿಯೊಂದು ಕೆಲಸಗಳಿಗೂ ಮೇಕೆಯ ಸಣ್ಣ ಬಂಡಿಯನ್ನೇ ಅವಲಂಬಿಸಿದ್ದಾನೆ. ಈತನ ಬಂಡಿಯನ್ನು ನೋಡಲು ಅಕ್ಕಪಕ್ಕದ ಗ್ರಾಮಗಳಿಂದ ಜನ ಬರ್ತಿದ್ದಾರಂತೆ.
'ಕಳೆದೊಂದು ವರ್ಷದಿಂದ ಮೇಕೆಗಳ ಬಂಡಿ ಹೂಡಿದ್ದೇನೆ. ಮೊದಲು ನಾವು ಎತ್ತುಗಳಿಂದ ಗಾಡಿ ಹೂಡುತ್ತಿದ್ದೆವು. ಒಮ್ಮೆ ಮೇಕೆಗಳಿಗೂ ಬಂಡಿ ಕಟ್ಟಿ ನೋಡಿದೆ. ಇವೂ ಕೂಡ ಎತ್ತಿನ ರೀತಿಯಲ್ಲೇ ಕೆಲಸ ಮಾಡುತ್ತವೆ. ಕೃಷಿ ಚಟುವಟಿಕೆ ಹೊರತುಪಡಿಸಿ ಸಂಚಾರಕ್ಕೆ ಮಾತ್ರ ಮೇಕೆ ಬಂಡಿಯನ್ನು ಉಪಯೋಗಿಸಲಾಗುತ್ತಿದೆ' ಎಂದು ರೈತ ಅಪ್ಪಾಸಾಬ ಚನ್ನವರ ಹೇಳುತ್ತಾನೆ.