ಚಿಕ್ಕೋಡಿ: ಮಹಾರಾಷ್ಟ್ರದ ಗಡಿಯಲ್ಲಿರುವ ಚಿಕ್ಕೋಡಿ ಪಟ್ಟಣವನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಗಡಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂದಿನಿಂದ ಒಂದು ವಾರದವರೆಗೆ ಸ್ವಯಂ ಪ್ರೇರಿತ ಚಿಕ್ಕೋಡಿ ಬಂದ್ಗೆ ವ್ಯಾಪಾರಿಗಳು ಕರೆ ನೀಡಿದ್ದಾರೆ. ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ.
ಸರ್ಕಾರಿ ಕಚೇರಿ ಹಾಗೂ ಸರ್ಕಾರಿ ಬಸ್ ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಲಾಗಿದೆ. ವ್ಯಾಪಾರ ಹಾಗೂ ವಸ್ತುಗಳ ಖರೀದಿಗೆ ಯಾರೂ ಚಿಕ್ಕೋಡಿ ಪಟ್ಟಣಕ್ಕೆ ಆಗಮಿಸದಂತೆ ಪುರಸಭೆಯಿಂದ ಮನವಿ ಮಾಡಲಾಗಿದೆ. ಎಲ್ಲಾ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಚಿಕ್ಕೋಡಿ ಲಾಕ್‌ಡೌನ್‌ಗೆ ಬೆಂಬಲ ನೀಡಿದ್ದಾರೆ.