ETV Bharat / state

ಬಿಜೆಪಿ ಮುಳುಗಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ: ಲಕ್ಷ್ಮಣ್ ಸವದಿ - ಬಿಜೆಪಿಗೆ ವಿನಾಶ ಕಾಲಕ್ಕೆ ವೀಪರೀತ ಬುದ್ದಿ

ಬಿಜೆಪಿಗೆ ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಬಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಟೀಕಿಸಿದರು.

Congress candidate Laxman Savadi spoke to reporters.
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By

Published : Apr 16, 2023, 3:49 PM IST

Updated : Apr 16, 2023, 3:57 PM IST

ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಮಾತನಾಡಿದರು.

ಚಿಕ್ಕೋಡಿ: ಸವದಿ, ಶೆಟ್ಟರ್ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪನವರಿಗೆ ಇಲ್ಲ. ಬಿಜೆಪಿಯನ್ನು ಮುಳುಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಬಿಜೆಪಿ ತ್ಯಜಿಸಿ ಹೋಗುತ್ತಿದ್ದಾರೆ. ಈ ನಿರ್ಧಾರದ ಹಿಂದಿನ ವಿಚಾರ ಹಾಗೂ ಅನ್ಯಾಯವನ್ನರಿತು ಬಿಎಸ್​ವೈ ಮಾತನಾಡಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಹೋಗಿ ಪಕ್ಷವನ್ನು ಮುಳುಗಿಸಿದ್ದರು. ಅವರ ಬಗ್ಗೆ ಹೆಚ್ಚಿಗೆ ಮಾತನಾಡುವದಿಲ್ಲ. ನನ್ನ ಬಗ್ಗೆ ಟೀಕೆ-ಟಿಪ್ಪಣಿ ಮಾಡುವ ಹಕ್ಕು ಅವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶೆಟ್ಟರ್ ಕುಟುಂಬಕ್ಕೆ ಬಿಜೆಪಿಯಿಂದ ಅಪಮಾನ: ಜಗದೀಶ್ ಶೆಟ್ಟರ್ ಕುಟುಂಬಕ್ಕೆ ಬಿಜೆಪಿಯವರು ಅವಮಾನ ಮಾಡಿದ್ದಾರೆ. ಅವರು ದಶಮಾನಗಳಿಂದ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದವರು. ಇಂದು ಶೆಟ್ಟರ್ ಬಿಜೆಪಿಗೆ ರಾಜೀನಾಮೆ ಕೊಡುವ ರೀತಿ ಮಾಡಿದ್ದಾರೆ. ಶೆಟ್ಟರ್ ಆಪ್ತರ ಜತೆ ಮಾತನಾಡಿ, ಸಂಜೆ ಒಂದು ತೀರ್ಮಾನಕ್ಕೆ ಬರ್ತಾರೆಂದು ಸವದಿ ಪ್ರತಿಕ್ರಿಯಿಸಿದರು.

ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ: ಕಾಂಗ್ರೆಸ್ ಈ ಬಾರಿ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ. ಪಕ್ಷದ ನಾಯಕರು ನನಗೆ ಟಾಸ್ಕ್ ನೀಡಿದ್ದಾರೆ. ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕು. ನನ್ನ ನೇತೃತ್ವದಲ್ಲಿ 15 ರಿಂದ 20 ಸ್ಥಾನ ಗೆಲ್ಲಬೇಕೆಂದು ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪೂರಕ ವಾತಾವರಣ ನಿರ್ಮಾಣವಾಗಿದೆ. ಇದರಿಂದ ರಾಜ್ಯಾದ್ಯಂತ 125ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆ: ಕಾಂಗ್ರೆಸ್ ಸೇರಿದ ಬಳಿಕ ಮೊದಲ ಬಾರಿಗೆ ಅಥಣಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸವದಿ ಮಾತನಾಡಿ, ನಿಸರ್ಗ ಕೆಲವು ಬದಲಾವಣೆ ಮಾಡಿಕೊಳ್ಳುತ್ತದೆ. ಪ್ರಾಮಾಣಿಕ ಕಾರ್ಯಕರ್ತರನ್ನು ಯಾವಾಗ ಬಿಜೆಪಿ ಕಳೆದುಕೊಳ್ಳುವ ಪ್ರಯತ್ನ‌ಪಟ್ಟಿತೋ ಆ ಗಳಿಗೆಯಿಂದ ರಾಜಕೀಯ ಧ್ರುವೀಕರಣ ಪ್ರಾರಂಭವಾಯ್ತು. ನಾನು ಕಾಂಗ್ರೆಸ್‌ಗೆ ಬರ್ತೀನಿ ಅಂತ ಕನಸೂ ಇರಲಿಲ್ಲ. ಆದರೆ ಸೃಷ್ಟಿಯ ನಿಯಮ ಬರುವ ಹಾಗೆ ಮಾಡಿತು ಎಂದರು.

20 ವರ್ಷಗಳ ಕಾಲ ಬೇರೆ ಪಕ್ಷದ ಆಲೋಚನೆ ಸಹ ಮಾಡಿರಲಿಲ್ಲ. ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಎಂಬಂತೆ ಬಿಜೆಪಿಗೆ ವಿನಾಶ ಕಾಲ‌ಬಂದಿದೆ. ನನಗೂ ಕೂಡ ಆತಂಕ ಇತ್ತು. ನಿಮ್ಮನ್ನೆಲ್ಲ ವಿರೋಧ ಮಾಡ್ತಾ ಬಂದಿದ್ದೇನೆ. ಯಾವ ರೀತಿ ಸ್ವೀಕಾರ ಮಾಡ್ತಾರೆ, ರಕ್ಷಣೆ ಮಾಡ್ತಾರೆ ಅಂತ. ನನಗೆ ಬೆಂಬಲ ನೀಡಿದ್ದಕ್ಕೆ ನಿಮಗೆ ನಾನು ಮೊದಲು ದನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ನಿಮ್ಮನ್ನು ಕೇಳದೆ ನಿಮ್ಮ ಪಕ್ಷಕ್ಕೆ ಬಂದೆ. ನಿಮಗೆ ಏನಾದ್ರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ನಾವು ನೀವು ಹಾಲು ಸಕ್ಕರೆಯಾಗಿ ಇರೋಣ. ನನ್ನೊಂದಿಗೆ ಬಂದವರು ಹಾಗೂ ಮೂಲ‌ ಕಾರ್ಯಕರ್ತರ ಜತೆಗೆ ಮನೆ ಮಗನಾಗಿ ಯಾರಿಗೂ ಅನ್ಯಾಯವಾಗದಂತೆ ಇರುತ್ತೇನೆ. ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ, ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ತಿಳಿಸಿದರು.

ಡಿಕೆಶಿ, ಸಿದ್ದರಾಮಯ್ಯ ನಿಮ್ಮ ಬೇಡಿಕೆ ಏನು ಅಂದಾಗ, ನಾನು ನನ್ನ ಕ್ಷೇತ್ರಕ್ಕೆ ಬರಬೇಕಾದ ನ್ಯಾಯಬದ್ದ ಅನುದಾನ ಬರಬೇಕು. ನೀರಾವರಿ ವಂಚಿತ ಪ್ರದೇಶಕ್ಕೆ ಬರಬೇಕಾದ 2000 ಕೋಟಿ ರೂ ಮೊದಲನೇ ಬಜೆಟ್‌ನಲ್ಲಿ ಒದಗಿಸಿಕೊಡಬೇಕು ಎಂದು ಕೇಳಿದೆ. ನಂತರ ಸಿದ್ದರಾಮಯ್ಯ ಮಾತನಾಡಿ, ಮಂತ್ರಿ ಕೇಳ್ತೀರಿ ಅಂದುಕೊಂಡಿದ್ದೆ. ಆದರೆ ನೀರಾವರಿ ಹಾಗೂ ಅಭಿವೃದ್ದಿ ಕೇಳಿದ್ದೀರಿ ಎಂದು ಪ್ರಶಂಸಿಸಿದರು ಎಂದಿದ್ದಾರೆ ತಿಳಿಸಿದರು.

ಇದನ್ನೂ ಓದಿ: ಶೆಟ್ಟರ್, ಸವದಿಯಿಂದ ಪಕ್ಷಕ್ಕೆ ದ್ರೋಹ.. ರಾಜ್ಯ ಪ್ರವಾಸ ಮಾಡಿ ಇವರ ಬಂಡವಾಳ ಬಯಲು ಮಾಡುವೆ: ಬಿಎಸ್​​ವೈ

Last Updated : Apr 16, 2023, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.