ETV Bharat / state

ಶೀಘ್ರದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ನೇಮಕ ಆಗಲಿದೆ : ಬಿ ವೈ ವಿಜಯೇಂದ್ರ - 136 ಶಾಸಕರು ಇರುವ ಆಡಳಿತ ಪಕ್ಷ

ದಸರಾ ಹಬ್ಬದ ಪ್ರಯುಕ್ತ ನಡೆದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಸಮಾರಂಭದಲ್ಲಿ ಶಾಸಕ ಬಿ ಎಸ್ ವಿಜಯೇಂದ್ರ ಭಾಗವಹಿಸಿದ್ದರು.

MLA BS Vijayendra spoke to reporters.
ಶಾಸಕ ಬಿ ಎಸ್ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Oct 21, 2023, 4:18 PM IST

Updated : Oct 21, 2023, 6:58 PM IST

ಶಾಸಕ ಬಿ ಎಸ್ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿಕ್ಕೋಡಿ: ಆದಷ್ಟು ಬೇಗನೆ ಬಿಜೆಪಿ ಪಕ್ಷಕ್ಕೆ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ನೇಮಕಾತಿ ಮಾಡಲಾಗುವುದು ಎಂದು ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ಹೇಳಿದರು. ದಸರಾ ಹಬ್ಬದ ಪ್ರಯುಕ್ತ ಹುಕ್ಕೇರಿ ಹಿರೇಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಚಂದ್ರಶೇಖರ ಶಿವಾಚಾರ್ಯರ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.ಯಡಿಯೂರಪ್ಪ ಹಿರಿಯರು ಇದ್ದಾರೆ. ಅವರು ಯಾವಾಗ ಬೇಕಾದರೂ ರಾಜ್ಯ ಪ್ರವಾಸ ಮಾಡಬಹುದು. ಅವರಿಗೆ ನೀವು ಪ್ರವಾಸ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ. ಯಾರೂ ಕೂಡ ಅದನ್ನ ತಡೆಯುವ ಪ್ರಯತ್ನ ಮಾಡೋದಿಲ್ಲ, ಮಾಡುವ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.

ರೈತರ ಬೆಳೆಹಾನಿ ಪರಿಹಾರ ಘೋಷಿಸಲಿ:ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನಾನು ಹೆಚ್ಚಿಗೆ ಹೇಳೋಕೆ ಇಷ್ಟಪಡಲ್ಲ. ಸರ್ಕಾರ ಬಂದು ಐದು ತಿಂಗಳು ಕಳೆದಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದು ರೈತರು ಸಂಕಷ್ಟದಲ್ಲಿದ್ದಾರೆ, ವಿದ್ಯುತ್ ಅಭಾವ ಇದೆ. ರೈತರಿಗೆ ಮಧ್ಯಂತರ ಬೆಳೆಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಬರಪೀಡಿತ ತಾಲೂಕು ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರ ಬಂದು ಇಷ್ಟು ದಿನ ಆದರೂ ಅಭಿವೃದ್ಧಿಗೆ ಒಂದು ರೂ‌. ಅನುದಾನ ಯಾವುದೇ ಶಾಸಕರಿಗೆ ಕೊಟ್ಟಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ಕಾರ ವಿಫಲವಾಗಿದೆ ಸಹಜವಾಗಿ ಆಡಳಿತ ಪಕ್ಷದ ಶಾಸಕರ ಅಸಮಾಧಾನ ಎದ್ದು ಕಾಣುತ್ತಿದೆ ಎಂದು ಹೇಳಿದರು.

ರೈತರ ಸಮಸ್ಯೆ ಕಡೆಗಣನೆ:ಡಿಸಿಎಂ ಡಿಕೆಶಿ ಭೇಟಿ ವೇಳೆ ಶಾಸಕರು ಗೈರು ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಆಡಳಿತಾರೂಢ ಪಕ್ಷದ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ. ಸರ್ಕಾರದಲ್ಲಿ ಏನೂ ಬೇಕಾದರೂ ಆಗಬಹುದು ಅಂತಾ ಸಾಮಾನ್ಯ ಜನರು ಮಾತನಾಡುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ. ರಾಜ್ಯದ ನಾನಾ ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳೋದನ್ನು ನೋಡುತ್ತಿದ್ದೇವೆ. ಸರ್ಕಾರದ ಒಳ ಕಚ್ಚಾಟ ಎಲ್ಲ ಮರೆತು ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.

ರೈತರಿಗೆ ಎರಡ್ಮೂರು ಗಂಟೆ ವಿದ್ಯುತ್ ಪೂರೈಸದ ಸರ್ಕಾರ : ಈ ಸರ್ಕಾರದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಮುಖ್ಯವಲ್ಲ. 136 ಶಾಸಕರು ಇರುವ ಆಡಳಿತ ಪಕ್ಷ ಯಾವ ರೀತಿ ಆಡಳಿತ ನಡೆಸಬೇಕು. ಜನರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದವರು ನೀವೇ, ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ಆಡಳಿತಕ್ಕೆ ಬಂದಿದ್ದೀರಿ.

ಇವತ್ತು ಪರಿಸ್ಥಿತಿ ಏನಾಗಿದೆ ? 200 ಯೂನಿಟ್ ಫ್ರೀ ವಿದ್ಯುತ್ ನೀಡ್ತೀರಿ ಎಂದು ರೈತರು ರಸ್ತೆಗೆ ಬಂದಿಲ್ವಾ? ರೈತರಿಗೆ ಯಾವ ರೀತಿ ಪರಿಹಾರ ನೀಡುತ್ತಿದ್ದೀರಿ? ಬಿ ಎಸ್ ವೈ ಸಿಎಂ ಆಗಿದ್ದಾಗ ಛತ್ತೀಸ್‌ಘಡ್‌ನಿಂದ ವಿದ್ಯುತ್ ಖರೀದಿಸಿ ರೈತರಿಗೆ 7-8ಗಂಟೆ ನೀಡುತ್ತಿದ್ರು, ಇವತ್ತು ಎರಡ್ಮೂರು ಗಂಟೆ ವಿದ್ಯುತ್ ಕೊಡುತ್ತಿಲ್ಲ, ಯಾವಾಗ ಕೊಡ್ತೀರಿ? ಇನ್ನು ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು? ಎಂದು ಪ್ರಶ್ನೆ ಮಾಡಿದರು.

ಜನರ ನಿರೀಕ್ಷೆ ಹುಸಿ:ಅನುದಾನ ನೀಡುತ್ತಿಲ್ಲ ರಾಜಕೀಯ ನಿವೃತ್ತಿ ಬಗ್ಗೆ ಕಾಂಗ್ರೆಸ್ ರಾಜು ಕಾಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಸರ್ಕಾರದ ಅನುದಾನ‌ ನಿರೀಕ್ಷೆ ಮಾಡುವ ಸ್ಥಿತಿ ಇಲ್ಲ. ಆಡಳಿತ ಪಕ್ಷದವರ ಪರಿಸ್ಥಿತಿ ಈ ರೀತಿ ಆದ್ರೆ ಇನ್ನೂ ವಿಪಕ್ಷ ಶಾಸಕರ ಸ್ಥಿತಿ ಏನು? ಜನರ ನಿರೀಕ್ಷೆ ಹುಸಿ ಮಾಡುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಹೇಳಿದರು.

ಇದನ್ನೂಓದಿ:'ನನ್ನ ಮೌನವೂ ವೀಕ್ನೆಸ್ ಅಲ್ಲ': ಪರೋಕ್ಷವಾಗಿ ಸತೀಶ್​ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್

Last Updated : Oct 21, 2023, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.