ಬೆಳಗಾವಿ: ನಾನು ಎರಡು ಬಾರಿ ಅನಿಲ ಬೆನಕೆಯವರ ಜತೆಗೆ ಮಾತಾಡಿದ್ದೇನೆ.ಬೆನಕೆ ಅವರು ಪಕ್ಷದ ಶಿಸ್ತನ್ನು ಮೀರಿ ಎಂದೂ ಕೆಲಸ ಮಾಡಿದ ವ್ಯಕ್ತಿ ಅಲ್ಲ. ಶಿಸ್ತಿನ ಸಿಪಾಯಿ ಆಗಿರುವ ಅವರು ಬೇರೆ ಎಲ್ಲಿಯೂ ಹೋಗುವುದಿಲ್ಲ. ಆದರೆ ಬೇರೆಯವರ ಬಗ್ಗೆ ನಾನು ಹೇಳಲ್ಲ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.
ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ಶನಿವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ನೇತೃತ್ವದ ಸಭೆಗೆ ಆಗಮಿಸಿದ ವೇಳೆ ಮಾಧ್ಯಮ ಜತೆಗೆ ಮಾತನಾಡಿದ ಅವರು,ಬಿಜೆಪಿ ಬೆಳಗಾವಿ ಜಿಲ್ಲೆಯಲ್ಲಿ 7-8 ಸ್ಥಾನವಷ್ಟೇ ಗೆಲ್ಲಲಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆಸಿದ ಅವರು, ಕಾಂಗ್ರೆಸ್ ಯಾವತ್ತು ಸತ್ಯ ಹೇಳಿದ್ದು ಇದ್ರ ಅದನ್ನೂ ಹೇಳಿರಿ. ಮೇ 13ರಂದು ಫಲಿತಾಂಶವಿದ್ದು, ನಿಶ್ಚಿತವಾಗಿ 15 ಸ್ಥಾನಗಳನ್ನು ಗೆಲ್ಲುತ್ತೇವೆ. ನಮಗೆ ಯಾವುದೇ ರೀತಿ ಹಿನ್ನೆಡೆ ಆಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ: ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಆಗಿರುವ ವಿಚಾರಕ್ಕೆ ಪತ್ರಕರ್ತ ಪ್ರಶ್ನೆಗೆ ಪ್ರತಿಕ್ರಿಯೆಸಿದ ಅವರು, ಒಮ್ಮೆ ಪಕ್ಷದ ನಿರ್ಣಯ ಆದ ಮೇಲೆ ನಾವೆಲ್ಲರೂ ಒಪ್ಪಿ ಕೆಲಸ ಮಾಡುವ ಸಂಘಟನೆಯಿಂದ ಬಂದವರು ಎಂದು ಸಮರ್ಥಿಸಿಕೊಂಡರು. ಲಕ್ಷ್ಮಣ್ ಸವದಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಲಿ ಎಂಬ ವಿಚಾರಕ್ಕೆ ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ. ಹಿಂದುತ್ವ ಮತ್ತು ಅಭಿವೃದ್ಧಿ ನೋಡಿಕೊಂಡು ನಾವೆಲ್ಲಾ ಕೆಲಸ ಮಾಡುವವರು. ಹೀಗಾಗಿ ಕಾರ್ಯಕರ್ತರೇ ಈ ಪಕ್ಷವನ್ನು ಗೆಲ್ಲಿಸುವವರು ಎಂದು ಅಭಯ ಪಾಟೀಲ ಹೇಳಿದರು.
ಒಂದು ಮತಕ್ಷೇತ್ರಕ್ಕೆ ಸೀಮಿತ ಶಾಸಕ. ಪಕ್ಷದ ನಿರ್ಣಯಕ್ಕೆ ಬದ್ಧರಾಗಿ ನಾವೆಲ್ಲಾ ಕೆಲಸ ಮಾಡಬೇಕಾಗುತ್ತದೆ ಎಂದ ಅಭಯ ಪಾಟೀಲ ಅವರು, ನಾಲ್ಕು ವರ್ಷದಲ್ಲಿ ಲಕ್ಷ್ಮಣ ಸವದಿ ಅವರಿಗೆ ಬಹಳಷ್ಟು ನೋವಾಗಿ ಬಿಜೆಪಿ ಬಿಡುತ್ತಿದ್ದೇನೆ. ನಿಮ್ಮ ಜತೆಗೆ ಏನಾದರೂ ಈ ಬಗ್ಗೆ ಮಾತಾಡಿದ್ದರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದಷ್ಟೇ ಹೇಳಿದರು.
ಯಮಕನಮರಡಿ ಕ್ಷೇತ್ರದ ಮಾರುತಿ ಅಷ್ಟಗಿಗೆ ಟಿಕೆಟ್ ತಪ್ಪಿದ್ದು, ಬಸವರಾಜ ಹುಂದ್ರಿಗೆ ಟಿಕೆಟ್ ಕೊಟ್ಟಿದ್ದಿರಿ. ಅಲ್ಲಿ ನೀವು ಗೆಲ್ಲುತ್ತಿರಾ ಎಂಬ ಪ್ರಶ್ನೆಗೆ ಯಮಕನಮರಡಿ ಅಷ್ಟೇ ಅಲ್ಲ 18 ಕ್ಷೇತ್ರ ನಾವು ಗೆಲ್ಲಬೇಕು ಎಂದಿದ್ದೇವೆ, ಹೀಗಾಗಿ ರಮೇಶ ಕತ್ತಿಯಂತ ಪ್ರಬಲ ಎದುರಾಳಿ ಕಣಕ್ಕಿಳಿದಿದ್ದಾರೆ. ಆದ್ದರಿಂದ ಪಕ್ಷಕ್ಕೆ ಯಾವುದೇ ರೀತಿ ಹಿನ್ನಡೆಯಾಗಿಲ್ಲ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಧರ್ಮೇಂದ್ರ ಪ್ರಧಾನ ನೇತೃತ್ವದಲ್ಲಿ ಸಂಧಾನ ಯಶಸ್ವಿಯಾಗುತ್ತಾ ಎಂಬ ಪ್ರಶ್ನೆಗೆ ಅವರು ಯಾಕೆ ಬಂದಿದ್ದಾರೋ ನನಗೆ ಗೊತ್ತಿಲ್ಲ. 2005ರಿಂದ 2007ರ ವರೆಗೆ ಧರ್ಮೇಂದ್ರ ಅವರು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ನಾನು ಅವರ ಜತೆ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೆನು, ಹೀಗಾಗಿ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:ಶೆಟ್ಟರ್ ಸಭೆ ಬಗ್ಗೆ ಗೊತ್ತಿದೆ..2 ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ