ETV Bharat / state

ಜಾತಿಗಣತಿ: ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಪ್ರತಿಭಟನೆಗೆ ನಟ ಚೇತನ್ ಬೆಂಬಲ - ಸಾಚಾರ್ ವರದಿ

ಜಾತಿ ಗಣತಿ ವರದಿಯನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಕೊಂಡಸಕೊಪ್ಪದಲ್ಲಿ ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಪ್ರತಿಭಟಿಸಿದರು.

bhima Army student unit
ಭೀಮ ಆರ್ಮಿ ವಿದ್ಯಾರ್ಥಿ ಘಟಕದಿಂದ ಪ್ರತಿಭಟನೆ
author img

By ETV Bharat Karnataka Team

Published : Dec 8, 2023, 8:18 PM IST

Updated : Dec 8, 2023, 8:28 PM IST

ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಪ್ರತಿಭಟನೆ

ಬೆಳಗಾವಿ: ಜಾತಿ ಗಣತಿ ಅಂಕಿಅಂಶಗಳನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬೆಳಗಾವಿ ಕೊಂಡಸಕೊಪ್ಪ ಸಮೀಪ ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚಿತ್ರನಟ ಚೇತನ್ ಆಗಮಿಸಿ ಸಾಥ್ ಕೊಟ್ಟರು.

ಸರ್ಕಾರಿ ವಲಯದ ಖಾಸಗೀಕರಣ ನಿಷೇಧಿಸಬೇಕು. ಸಾಚಾರ್ ವರದಿ ಪರಿಶೀಲಿಸಿ ಅಲ್ಪಸಂಖ್ಯಾತರಿಗೆ ಶೇ. 10ರಷ್ಟು ಮೀಸಲಾತಿ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಸಚಿವ ಮಧು ಬಂಗಾರಪ್ಪ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ವಿಚಾರವನ್ನು ಸಿಎಂ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ನಟ ಚೇತನ್ ಮಾತನಾಡಿ, ಸಿದ್ದರಾಮಯ್ಯನವರು 2015ರಲ್ಲಿ 200 ಕೋಟಿ ಹಣ ಬಿಡುಗಡೆ ಮಾಡಿ, ಜಾತಿ ಗಣತಿ ತಯಾರು ಮಾಡಿದ್ದಾರೆ. 2018ರಲ್ಲಿ ತಯಾರಾಗಿದ್ದರೂ ಕೂಡ ಇನ್ನೂ ಜಾರಿಗೆ ತಂದಿಲ್ಲ. ಅವರ ಉದ್ದೇಶ ಚುನಾವಣೆ ಗೆಲ್ಲುವ ಲೆಕ್ಕಾಚಾರ ಆಗಿತ್ತೇ ಹೊರತು ಜನರ ಪರಿವರ್ತನೆ, ಜನರ ಬದುಕು ಸರಿಪಡಿಸುವುದಲ್ಲ ಎಂದು ಟೀಕಿಸಿದರು.

2018ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವರದಿಯನ್ನು ಲಿಂಗಾಯತ ಮತ‌ ಛಿದ್ರ ಆಗಬಹುದು ಎಂಬ ಉದ್ದೇಶದಿಂದ ತಯಾರಿಸಿದ್ದರು. ಅದೇ ರೀತಿ ಕೆಳ ಸಮುದಾಯಕ್ಕೆ ನ್ಯಾಯ ಸಿಗಬೇಕಾದ ಜಾತಿಗಣತಿ ವರದಿಯನ್ನೂ ಬಿಡುಗಡೆ ಮಾಡಲಿಲ್ಲ. ಅದಾದ ಮೇಲೆ ಅವರು ವಿರೋಧ ಪಕ್ಷದ ನಾಯಕ‌ರಾಗಿದ್ದಾಗಲೂ ಬಿಡುಗಡೆಗೆ ಒತ್ತಡ ಹಾಕಿದರೂ, ಅದು ನಮಗೆ ಸರಿ ಕಾಣಲಿಲ್ಲ. ಈಗ ಅಧಿಕಾರಕ್ಕೆ ಬಂದು 6 ತಿಂಗಳಾದ್ರೂ ಜಾತಿ ಗಣತಿ ವರದಿ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಜಾತಿ ಲಾಬಿಗಳ ಅಸಮಾಧಾನಿತರನ್ನು ಉಳಿಸಿಕೊಳ್ಳಲು ಇವತ್ತು ಜಾತಿಗಣತಿಗೆ ಅಡ್ಡ ಬರುತ್ತಿದ್ದಾರೆ ಎಂದು ಚೇತನ್ ಆರೋಪಿಸಿದರು.

ವಿದ್ಯುತ್ ಗುತ್ತಿಗೆದಾರ ಸಂಘದ ಪ್ರತಿಭಟನೆ

ವಿದ್ಯುತ್ ಗುತ್ತಿಗೆದಾರ ಸಂಘದ ಪ್ರತಿಭಟನೆ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಪದಾಧಿಕಾರಿಗಳು ಬೆಳಗಾವಿ ಸುವರ್ಣ ಗಾರ್ಡನ್ ಬಳಿ ಟೆಂಟ್‌ನಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರದಿಂದ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ ಎಂದು ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ್ದ ಹೆಸ್ಕಾಂ ಗುತ್ತಿಗೆದಾರರು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

300 ಕೋಟಿ ರೂ ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಬರಬೇಕು. 1200 ಕೋಟಿ ಕಾಮಗಾರಿ ಆದೇಶ ಆಗಿದ್ದರೂ ಕಾಮಗಾರಿ ಮಾಡಲು ಬಿಡುತ್ತಿಲ್ಲ. ಕಾಮಗಾರಿ ಮಾಡಲು ಬಿಡಬೇಕು.‌ ಅನಧಿಕೃತ ವಿದ್ಯುತ್ ಪಂಪ್‌ಸೆಟ್ ಸ್ಥಗಿತ ಮಾಡಿದ್ದು, ಮಾಡಿರುವ ಕಾಮಗಾರಿಗಳಿಗೆ ಬಜೆಟ್ ನೀಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ವಿದ್ಯುತ್ ಗುತ್ತಿಗೆದಾರರ ಬಿಲ್​ಗಳು ಕಚೇರಿಯಲ್ಲಿ ವಿಳಂಬವಾಗಿವೆ. ಗುತ್ತಿಗೆದಾರರ ಮತ್ತು ಗ್ರಾಹಕರ ಹೆಸ್ಕಾಂ ಇನ್ನಿತರ ಕಾಮಗಾರಿಗಳು ವಿಳಂಬವಾಗಿವೆ. ಹೆಸ್ಕಾಂ ಆನ್​ಲೈನ್ ಸೇವೆ ಕುಂಠಿತವಾಗಿರುವ ಕಾರಣ ಹೊಸ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘದ ಸದಸ್ಯ ಮಂಜುನಾಥ್ ‌ಮಾತನಾಡಿ, ಸರ್ಕಾರ ಹೆಸ್ಕಾಂ, ಮೆಸ್ಕಾಂ, ಸೆಸ್ಕಾಂನಲ್ಲಿ ಟೆಂಡರ್ ಬಿಡ್ ಆಗಿದೆ. ಸಚಿವ ಸಂಪುಟದಲ್ಲೂ ಕೆಲಸ ಮಾಡಲು ಅನುಮತಿ ಸಿಕ್ಕಿದೆ. ಆದರೆ 1,500 ಕೋಟಿ ರೂಪಾಯಿಯಷ್ಟು 250ಕ್ಕೂ ಹೆಚ್ಚು ಗುತ್ತಿಗೆದಾರರಿಗೆ ಮಾಡಲು ಅನುಮತಿ ಇದೆ. ಆದರೂ ಅಧಿಕಾರಿಗಳು ಕೆಲಸ ಮಾಡಬೇಡಿ ಅಂತಿದ್ದಾರೆ. ಅವರಿಗೆ ಕಮಿಷನ್ ಕೊಡದಿದ್ದರೆ ಫೈಲ್ ಮೂವ್ ಆಗಲ್ಲ. ಸರ್ಕಾರ ಮನವಿ ಆಲಿಸದಿದ್ದರೆ ಕೋರ್ಟ್‌ಗೆ ಹೋಗ್ತೀವಿ, ಕಾನೂನು ಹೋರಾಟ ಮಾಡ್ತೀವಿ ಎಂದು ಎಚ್ಚರಿಸಿದರು.

ಇದನ್ನೂಓದಿ: ವಕೀಲ ಈರಣ್ಣ ಗೌಡ ಪಾಟೀಲ್​ ಹತ್ಯೆ ಖಂಡಿಸಿ ಶಿವಮೊಗ್ಗ ವಕೀಲರ ಸಂಘದಿಂದ ಪ್ರತಿಭಟನೆ

Last Updated : Dec 8, 2023, 8:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.