ETV Bharat / state

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೈತಪ್ಪಿದ ಅವಕಾಶ.. ಸಂಸದೆ ಎದುರು ಟಿಕೆಟ್ ವಂಚಿತರಿಂದ ಅಸಮಾಧಾನ.. - ಸಂಸದೆ ಮಂಗಲ ಅಂಗಡಿ

ಸಂಸದೆ ಮಂಗಲ ಅಂಗಡಿಯವರನ್ನು ಭೇಟಿ ಮಾಡಿದ ಟಿಕೆಟ್ ವಂಚಿತರು, ಮೂಲ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಪಕ್ಷದವರು ಕಡೆಗಣಿಸಿದ್ದಾರೆ. ನಾವು ಹಲವಾರು ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇವೆ, ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ..

belgavi election ticket missed candidates meets mp mangala angadi
ಪಾಲಿಕೆ ಚುನಾವಣೆಯ ಟಿಕೆಟ್​ ವಂಚಿತ ಆಕಾಂಕ್ಷಿಗಳ ಅಸಮಾಧಾನ
author img

By

Published : Aug 23, 2021, 7:02 PM IST

Updated : Aug 23, 2021, 7:18 PM IST

ಬೆಳಗಾವಿ : ಸೆಪ್ಟೆಂಬರ್ 3ರಂದು ನಡೆಯುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪಕ್ಷದ 58 ವಾರ್ಡ್​​ಗಳಿಗೆ ಅಭ್ಯರ್ಥಿಗಳ‌ ಹೆಸರು ಘೋಷಣೆ ಮಾಡಲಾಗಿದೆ. ಹೆಸರು ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಹೊರ ಹಾಕಿದ್ದಾರೆ.

ಪಾಲಿಕೆ ಚುನಾವಣೆಯ ಟಿಕೆಟ್​ ವಂಚಿತ ಆಕಾಂಕ್ಷಿಗಳ ಅಸಮಾಧಾನ..

ಇದನ್ನೂ ಓದಿ:ಬೆಳಗಾವಿ ಪಾಲಿಕೆ ಚುನಾವಣೆಯ ಬಿಜೆಪಿ ಮೊದಲ‌ ಪಟ್ಟಿ ಘೋಷಣೆ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 25 ವರ್ಷಗಳ ಬಳಿಕ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ.

ಆದ್ರೆ, ಗೊಂದಲದ ಮಧ್ಯೆಯೂ ಮೂರು ಹಂತದಲ್ಲಿ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಮೂಲ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಪಾಲಿಕೆ ಚುನಾವಣೆ: ಮಧ್ಯರಾತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

ಈ ಹಿನ್ನೆಲೆ ಸಂಸದೆ ಮಂಗಲ ಅಂಗಡಿಯವರನ್ನು ಭೇಟಿ ಮಾಡಿದ ಟಿಕೆಟ್ ವಂಚಿತರು, ಮೂಲ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಪಕ್ಷದವರು ಕಡೆಗಣಿಸಿದ್ದಾರೆ. ನಾವು ಹಲವಾರು ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇವೆ, ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಚುನಾವಣೆಗೆ ಟಿಕೆಟ್​ ಕೊಡಿಸಿ ಅದನ್ನು ಸರಿಪಡಿಸುವಂತೆ ಸಂಸದೆ ಮಂಗಲ ಅಂಗಡಿಯವರಲ್ಲಿ ಮನವಿ ಮಾಡಿದ್ದಾರೆ.

Last Updated : Aug 23, 2021, 7:18 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.