ETV Bharat / state

ಜಾತ್ರೆಯಲ್ಲಿ ಕೈ ಹಿಡಿದು ಎಳೆದ ಯುವಕ, ಮನನೊಂದು ಯುವತಿ ಆತ್ಮಹತ್ಯೆ.. - ETV Bharath Karnataka

ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಆತ್ಮಹತ್ಯೆ ಪ್ರಕರಣ - ಜಾತ್ರೆಯಲ್ಲಿ ಕೈ ಹಿಡಿದು ಎಳೆದಿದ್ದಕ್ಕೆ ಸಾವಿಗೆ ಶರಣಾದ ಯುವತಿ - ಪ್ರೀತಿಸಿದವನು ಮದುವೆ ಆಗುವುದಿಲ್ಲ ಎಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಚಿಕಿತ್ಸೆ ಫಲಿಸದೇ ಸಾವು

ಆತ್ಮಹತ್ಯೆ
Belagavi two suicide case
author img

By

Published : Jan 29, 2023, 5:01 PM IST

ಚಿಕ್ಕೋಡಿ(ಬೆಳಗಾವಿ): ಬೆಳಗಾವಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಯುವತಿಯರು ಮನನೊಂದು ಸಾವಿಗೆ ಶರಣಾಗಿದ್ದಾರೆ. ಒಂದು ಪ್ರಕರಣದಲ್ಲಿ ಜಾತ್ರೆಯಲ್ಲಿ ಊರ ಜನರ ಮುಂದೆ ಯುವಕನೋರ್ವ ಕೈ ಹಿಡಿದು ಬಲವಂತವಾಗಿ ಎಳೆದ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೊಂದು ಪ್ರಕರಣದಲ್ಲಿ ಪ್ರೀತಿಸಿದ ಹುಡುಗ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಸಾವಿಗೆ ಶರಣಾಗಿದ್ದಾರೆ. ಇಬ್ಬರೂ ಯುವತಿಯರ ಮನೆಯವರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೈ ಹಿಡಿದು ಎಳೆದಿದ್ದಕ್ಕಾಗಿ ಆತ್ಮಹತ್ಯೆ: ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈಹಿಡಿದು ಎಳೆದಾಡಿದ್ದಾನೆ ಎಂಬ ಕಾರಣಕ್ಕೆ ಯುವತಿಯೋರ್ವಳು ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ 19 ವರ್ಷ ವಯಸ್ಸಿನ ಯುವತಿ ಆತ್ಮಹತ್ಯೆಗೆ ಶರಣಾದವರು. ಸಂಕೋನಟ್ಟಿ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡರ ಎಂಬುವವರು ಕೈ ಹಿಡಿದು ಎಳೆದಾಡಿದ ಎಂದು ಆರೋಪಿಸಿ ಯುವತಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆ ವಿವರ: ಯುವತಿಯನ್ನು ಇಷ್ಟಪಟ್ಟಿದ್ದ ಆರೋಪಿ ಯುವಕ ತನ್ನೊಂದಿಗೆ ವಿವಾಹ ಮಾಡಿಕೊಡುವಂತೆ ತನ್ನ ತಂದೆ-ತಾಯಿಯೊಂದಿಗೆ ಇತ್ತೀಚೆಗೆ ಯುವತಿಯ ಮನೆಗೆ ಬಂದು ಕೇಳಿದ್ದರಂತೆ. ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಯುವತಿಯ ತಂದೆ ಹೇಳಿದ್ದರು. ಅದೇ ಸಿಟ್ಟಿನಲ್ಲಿ ಜನವರಿ 25 ರಂದು ಗ್ರಾಮದ ಜಾತ್ರೆಯಲ್ಲಿ ಸುನೀಲನು ಎಲ್ಲರ ಮುಂದೆ ಯುವತಿಯನ್ನು ಕೈ ಹಿಡಿದು ಎಳೆದಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರ ಮುಂದೆ ಕೈ ಹಿಡಿದು ಎಳೆದ ಎಂಬ ಕಾರಣಕ್ಕೆ ಯುವತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಇದರಿಂದ ಮನನೊಂದ ಯುವತಿ ಸಾವಿಗೆ ಶರಣಾಗಿದ್ದಾಳೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಡ್ಯ: ಜಾಯಿಂಟ್ ವೀಲರ್​​​ಗೆ ತಲೆಕೂದಲು ಸಿಲುಕಿ ಬಾಲಕಿಗೆ ಗಂಭೀರ ಗಾಯ

ಮದುವೆ ನಿರಾಕರಿಸಿದ ಪ್ರಿಯತಮ ಮನನೊಂದು ಯುವತಿ ಆತ್ಮಹತ್ಯೆ: ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಹಿನ್ನೆಲೆಯಲ್ಲಿ ತಾಂವಶಿ ಗ್ರಾಮದ ಯುವತಿಯೋರ್ವಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದ ತೇಜಸ್ವಿನಿ ಗಂಗಪ್ಪ ಗುಜ್ಜರ (21) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಅಥಣಿ ಪಟ್ಟಣದ ಆಸೀಫ್ ದೇಸಾಯಿ ಪ್ರೀತಿಸಿ ಕೈ ಕೊಟ್ಟಿದ್ದಾನೆಂದು ಆರೋಪಿಸಿ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಸೀಫ್‌ ಮತ್ತು ತೇಜಸ್ವಿನಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಜನವರಿ 26ರಂದು ಮದುವೆ ಆಗುವುದಿಲ್ಲ ಎಂದು ಆಸೀಫ್ ನಿರಾಕರಿಸಿದ ಹಿನ್ನೆಲೆ ಮನನೊಂದ ತೇಜಸ್ವಿನಿ ಆತ್ಮಹತ್ಯೆ ಪ್ರಯತ್ನ ಪಟ್ಟಿದ್ದರು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಜನವರಿ 27 ರಂದು ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಿದ್ದಾಳೆ. ಮೃತಳ ತಾಯಿ ಶೋಭಾ ಗುಜ್ಜರ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಪೊಲೀಸರೆಂದು ಹೆದರಿಸಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.