ಬೆಳಗಾವಿ : ಕೊರೊನಾ ಭೀತಿ ಹಿನ್ನೆಲೆ ಅಪರಿಚಿತರು ಯಾರೇ ಊರಿಗೆ ಬಂದರೂ ಪೊಲೀಸರ ಮೂಲಕ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡುವಂತೆ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸಲಾಯಿತು.
ಕೊರೊನಾ ವೈರಸ್ ಭೀತಿಯಿಂದಾಗಿ ಹಿರೇಬಾಗೇವಾಡಿಯಲ್ಲಿ ತೀವ್ರ ಕಟ್ಟೆಚ್ಚರವಹಿಸಲಾಗಿದೆ. ಕೊರೊನಾ ಸೋಂಕು ಹರಡದಂತೆ ನಾಳೆ ನಡೆಯುವ ಸಂತೆ ರದ್ದಾಗಿರುವುದಾಗಿ ಡಂಗೂರ ಸಾರಲಾಯಿತು. ಈಗಾಗಲೇ ರೋಗ ಹರಡದಂತೆ ತಡೆಯಲು ಗ್ರಾಪಂ ಅಗತ್ಯ ಕ್ರಮಕೈಗೊಳ್ಳಲಾಗಿದೆ. ವಿದೇಶ ಅಥವಾ ಹೊರಗಡೆಯಿಂದ ಯಾರೇ ಊರಿಗೆ ಬಂದರೂ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡುವಂತೆ ಡಂಗೂರ ಸಾರಿ ಅರಿವು ಮೂಡಿಸಲಾಗಿದೆ.