ETV Bharat / state

ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‍ಶಿಪ್​ಗೆ ಬಳ್ಳಾರಿ ಕ್ರೀಡಾಪಟುಗಳು ಆಯ್ಕೆ - ಅಥ್ಲೆಟಿಕ್ ಚಾಂಪಿಯನ್‍ಶಿಪ್

ಬಳ್ಳಾರಿ ಜಿಲ್ಲೆಯ ಇಬ್ಬರು ಕ್ರೀಡಾಪಟುಗಳು ಗೋವಾದಲ್ಲಿ ನಡೆಯಲಿರುವ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‍ಶಿಪ್​ಗೆ ಆಯ್ಕೆಯಾಗಿದ್ದಾರೆ.

ಬಳ್ಳಾರಿಯ ಕ್ರೀಡಾಪಟುಗಳು
ಬಳ್ಳಾರಿಯ ಕ್ರೀಡಾಪಟುಗಳು
author img

By ETV Bharat Karnataka Team

Published : Jan 5, 2024, 7:37 PM IST

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಬಿ.ರವಿಶಂಕರ್ ಹಾಗೂ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಕ್ರೀಡಾಪಟು ಬಸವರಾಜ.ಕೆ ಎಂಬವರು ಗೋವಾದಲ್ಲಿ ನಡೆಯುವ 22ನೇ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‍ಶಿಪ್-2024ರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸಾಲಿನ 22ನೇ ಚಾಂಪಿಯನ್‍ಶಿಪ್‌ ಕ್ರೀಡಾಕೂಟಗಳು ಪಣಜಿಯ ಜಿಎಂಸಿ ಕ್ರೀಡಾಂಗಣದಲ್ಲಿ ಜನವರಿ 09ರಿಂದ 13ರವರೆಗೆ ಜರುಗಲಿವೆ.

ಬಿ.ರವಿಶಂಕರ್ 1,500 ಮೀಟರ್ ರನ್ನಿಂಗ್, ಜಾವೆಲಿನ್ ಥ್ರೋ ಕ್ರೀಡೆಗೆ ಆಯ್ಕೆಯಾಗಿದ್ದು, ಬಸವರಾಜ.ಕೆ ಉದ್ದ ಮತ್ತು ಎತ್ತರ ಜಿಗಿತಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟಗಳಲ್ಲಿ ಇಬ್ಬರೂ ಗೆಲುವು ಸಾಧಿಸಿದ್ದರು. ಇದೀಗ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‍ಶಿಪ್‌ಗೆ ಆಯ್ಕೆಯಾಗಿದ್ದಕ್ಕೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಶುಭ ಕೋರಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ವ್ಹೀಲ್‌ ಚೇರ್ ಬಾಸ್ಕೆಟ್​​ ಬಾಲ್ ಟೂರ್ನಿ: ಭಾರತ ತಂಡಕ್ಕೆ ಬೆಳಗಾವಿಯ ನಾಲ್ವರು ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.