ETV Bharat / state

ತಂದೆ ಏರಿದ್ದ ಹುದ್ದೆಯನ್ನೇ ಅಲಂಕರಿಸಿದ್ದ ಆನಂದ ಮಾಮನಿ ಹ್ಯಾಟ್ರಿಕ್​ ಸಾಧಕ​

author img

By

Published : Oct 23, 2022, 7:21 AM IST

Updated : Oct 23, 2022, 9:57 AM IST

ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಸತತ ಮೂರು ಬಾರಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿದ್ದ ಆನಂದ ಮಾಮನಿ ಅವರು ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿದ್ದರು. ಶನಿವಾರ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ‌ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಸವೆಸಿದ ರಾಜಕೀಯ ಹಾದಿಯ ಚಿತ್ರಣ ಇಲ್ಲಿದೆ.

assembly-deputy-speaker-anand-mamani-life-details
ತಂದೆ ಏರಿದ್ದ ಹುದ್ದೆಯನ್ನೇ ಅಲಂಕರಿಸಿದ್ದ ಹ್ಯಾಟ್ರಿಕ್​ ಸಾಧಕ​ ಆನಂದ ಮಾಮನಿ

ಬೆಂಗಳೂರು: ರಾಜ್ಯ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್ ಮಾಮನಿ (56) ನಿಧನ ಹೊಂದಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಬೆಂಗಳೂರಿನ‌ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಆರಂಭಿಕ ಜೀವನ: 1966ರ ಜನವರಿ 18ರಂದು ಜನಿಸಿದ್ದರು. ಮಾಜಿ ಡ್ಯೆಪುಟಿ ಸ್ಪೀಕರ್ ಚಂದ್ರಶೇಖರ್ ಮಾಮನಿ ಹಾಗೂ ಗಂಗಮ್ಮ ಮಾಮನಿ ಅವರ ಮಗ. ಪತ್ನಿ ರತ್ನಾ ಮಾಮನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಮಾಮನಿ ಬಿಕಾಂ ಪದವೀಧರ. 2000, 2002ರಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು‌. 2005, 2008ರಲ್ಲಿ ಸವದತ್ತಿ ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2004ರಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

assembly-deputy-speaker-anand-mamani-life-details
ಪ್ರಧಾನಿ ಮೋದಿ ಜೊತೆ ಆನಂದ ಮಾಮನಿ

ಹ್ಯಾಟ್ರಿಕ್​ ಜಯ: 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ 2008ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸವದತ್ತಿ ವಿಧಾನಸಭೆ ಮತಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2013ರಲ್ಲಿ ಎರಡನೇ ಬಾರಿಗೆ ಹಾಗೂ 2018ರಲ್ಲಿ ಪುನಃ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

ಮಾಮನಿ ಕುಟುಂಬಸ್ಥರಿಂದ 30 ವರ್ಷ ಅಧಿಕಾರ: ಆನಂದ ಮಾಮನಿ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ 6 ಬಾರಿ ಶಾಸಕರಾಗಿ ಗೆದ್ದಿದ್ದಾರೆ. ತಂದೆ ಚಂದ್ರಶೇಖರ ಮಾಮನಿ 1998ರಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರಾಗಿದ್ದರು. ನಂತರದಲ್ಲಿ ತಂದೆ ನಿಭಾಯಿಸಿದ್ದ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಆನಂದ ಮಾಮನಿ 2020ರಲ್ಲಿ ಡೆಪ್ಯುಟಿ ಸ್ಪೀಕರ್ ಆದರು. 1985ರಲ್ಲಿ ಪಕ್ಷೇತರ ಹಾಗೂ 1994ರಲ್ಲಿ ಜನತಾದಳದಿಂದ ಶಾಸಕರಾಗಿ ಜಯ ಗಳಿಸಿದ್ದರು. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು.

ಸಂಸದ ಸುರೇಶ್​ ಅಂಗಡಿಯವರೊಂದಿಗೆ ಆನಂದ ಮಾಮನಿ

ಇದೀಗ ಬೆಳಗಾವಿ ಜಿಲ್ಲೆಯ ಎರಡು ವಿಧಾನಸಭೆ ಕ್ಷೇತ್ರಗಳು ತೆರವಾಗಿವೆ. ಇತ್ತೀಚೆಗೆ ಹುಕ್ಕೇರಿ ಕ್ಷೇತ್ರದ ಶಾಸಕ, ಸಚಿವ ಉಮೇಶ್​ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ಶಾಸಕ, ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ‌ ಮಾಮನಿ ವಿಧಿವಶ

Last Updated : Oct 23, 2022, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.