ETV Bharat / state

ಕೃಷ್ಣಾ ನದಿ ನೀರಿನ‌ ಮಟ್ಟದಲ್ಲಿ ಏರಿಕೆ: ರಾತ್ರೋರಾತ್ರಿ ದೌಡಾಯಿಸಿದ ಅಧಿಕಾರಿಗಳು - Anxiety of the Krishna River Flood

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನದಿಪಾತ್ರದ ಯಡೂರ ಗ್ರಾಮಕ್ಕೆ ತಾಲೂಕು ಆಡಳಿತ ಅಧಿಕಾರಿಗಳು ಪ್ರವಾಹದ ಪರಿಸ್ಥಿತಿ ಅವಲೋಕನಕ್ಕೆ ಆಗಮಿಸಿದರು. ಎನ್​ಡಿಆರ್​ಎಫ್​​ ತಂಡಕ್ಕೆ ಸಿದ್ಧತೆಗೆ ಸೂಚಿಸಲಾಗಿದೆ.

Krishna River Flood
ರಾತ್ರೋರಾತ್ರಿ ಭೇಟಿ ನೀಡಿದ ಅಧಿಕಾರಿಗಳು
author img

By

Published : Aug 5, 2020, 11:44 PM IST

ಚಿಕ್ಕೋಡಿ: ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಧಾರಾಕಾರ‌ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ತೀರದಲ್ಲಿ ನೀರಿನ ಏರಿಕೆ ಪ್ರಮಾಣ ಹೆಚ್ಚಾಗಿದೆ.

Krishna River Flood
ರಾತ್ರೋರಾತ್ರಿ ಭೇಟಿ ನೀಡಿದ ಅಧಿಕಾರಿಗಳು

ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಮುಳಗಡೆಯಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾ‌ಮದಲ್ಲಿ ರಾತ್ರೋರಾತ್ರಿ ನದಿ ತೀರಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ವೇದಗಂಗಾ, ದೂದಗಂಗಾ ಹಾಗೂ ಕೃಷ್ಣಾ ನದಿಗೆ 48 ಕ್ಯೂಸೆಕ್​ಕ್ಕಿಂತ ಹೆಚ್ಚು ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ವಿಭಾಗದಲ್ಲಿ ‌ಪ್ರವಾಹದ ಭೀತಿ ನಿರ್ಮಾಣವಾಗಿದೆ. ಇದರಿಂದ ಚಿಕ್ಕೋಡಿ ತಾಲೂಕಾಡಳಿತ ನದಿ ತೀರಕ್ಕೆ ದೌಡಾಯಿಸಿದೆ. ಚಿಕ್ಕೋಡಿ ಎಸಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ್ ಸುಭಾಷ ಸಂಪಗಾವಿ ಹಾಗೂ ತಾಲೂಕಾಡಳಿತ ಅಧಿಕಾರಿಗಳು ಪ್ರವಾಹದ ಪರಿಸ್ಥಿತಿ ಅವಲೋಕಿಸಿದರು.

ಇನ್ನು ಮುಂಜಾಗ್ರತಾ ಕ್ರಮವಾಗಿ ಆಗಮಿಸಿರುವ ಎನ್‌ಡಿಆರ್‌ಎಫ್ ತಂಡದ ಜೊತೆ ಚರ್ಚಿಸಿ, ಸಿದ್ಧವಾಗುವಂತೆ ಎಸಿ ರವೀಂದ್ರ ಕರಲಿಂಗನ್ನವರು ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.