ETV Bharat / state

ಎಂಇಎಸ್ ಮುಖಂಡರಿಗೆ ಬದ್ಧಿ ಮಾತು ಹೇಳಿದ ಎಡಿಜಿಪಿ ಅಲೋಕ್ ಕುಮಾರ್ - ETV Bharath Kannada news

ಹುಬ್ಬಳ್ಳಿ ಧಾರವಾಡಕ್ಕಿಂತ ವೇಗವಾಗಿ ಬೆಳಗಾವಿ ಬೆಳೆಯಬೇಕಿತ್ತು. ಆದರೆ, ನಿಮ್ಮಿಬ್ಬರ ತಿಕ್ಕಾಟದಿಂದ ಬೆಳಗಾವಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಅಲೋಕ್​ ಕುಮಾರ್​ ಕರವೇ ಮತ್ತು ಎಂಇಎಸ್​ ಮುಖಂಡರಿಗೆ ಬುದ್ಧಿವಾದ ಹೇಳಿದ್ದಾರೆ.

ADGP Alok Kumar
ಎಡಿಜಿಪಿ ಅಲೋಕ್‌ ಕುಮಾರ್ ಸಭೆ
author img

By

Published : Dec 24, 2022, 11:39 AM IST

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆ ಎಂಇಎಸ್, ಕನ್ನಡಪರ ಮುಖಂಡರ ಒಟ್ಟಿಗೆ ಎಡಿಜಿಪಿ ಅಲೋಕ್‌ ಕುಮಾರ್ ಸಭೆ ನಡೆಸಿ ಬುದ್ಧಿಮಾತು ಹೇಳಿದ್ದಾರೆ. ಅಲೋಕ್‌ ಕುಮಾರ್ ನೇತೃತ್ವದಲ್ಲಿ ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ಶಾಂತಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಕರವೇ ನಾರಾಯಣಗೌಡ ಬಣದ ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಹಾಗೂ ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್, ಎಂಇಎಸ್ ಮುಖಂಡರಾದ ಪ್ರಕಾಶ್ ಮರಗಾಳೆ, ವಿಕಾಸ್ ಕಲಘಟಗಿ ಸೇರಿ ಹಲವರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ. ಜೊತೆಗೆ ಹುಬ್ಬಳ್ಳಿ ಧಾರವಾಡಗಿಂತ ವೇಗವಾಗಿ ಬೆಳಗಾವಿ ಬೆಳೆಯಬೇಕಿತ್ತು. ಆದರೆ ನಿಮ್ಮಿಬ್ಬರ ತಿಕ್ಕಾಟದಿಂದ ಬೆಳಗಾವಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ರಾಜ್ಯೋತ್ಸವ ದಿನದಂದು ಕರಾಳ ದಿನ ಮಾಡೋದು ಬಿಡಿ. ಬೆಳಗಾವಿ ಅಧಿವೇಶನ ವೇಳೆ ಮಹಾಮೇಳ ಮಾಡೋದು ಬಿಡಿ ಎಂದು ಎಂಇಎಸ್ ಮುಖಂಡರಿಗೆ ಅಲೋಕ್‌ ಕುಮಾರ್ ಬುದ್ಧಿ ಮಾತು ಜೊತೆಗೆ ಗಡಿವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದು ತೀರ್ಪು ಬರುವವರೆಗೂ ಶಾಂತಿ ಕಾಪಾಡುವಂತೆ ತಿಳಿಸಿದ್ದಾರೆ.

ಇದನ್ನೂ ಓದು: ಸಾರಿಗೆ ನೌಕರರ ಧರಣಿ: ಪ್ರತಿಭಟನೆ ಕೈ ಬಿಡುವಂತೆ ಪೊಲೀಸರಿಂದ ಧಮ್ಕಿ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.