ಬೆಳಗಾವಿ: ಒಡಿಶಾದಲ್ಲಿ ಎರಡು ದಿನಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಮೂಲದ ಯೋಧ ಚಿಕಿತ್ಸೆ ಫಲಿಸದೇ ಇಂದು ಸಂಜೆ ವಿಧಿವಶರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲೇಶ ಶಿವಲಿಂಗಪ್ಪ ಮರಕಟ್ಟಿ (52) ಮೃತಪಟ್ಟಿದ್ದಾರೆ. 1993ರಲ್ಲಿ ಸಿಆರ್ಪಿಎಫ್ ಸೇರಿದ್ದ ಮಲ್ಲೇಶ ಅವರು ಪ್ರಸ್ತುತ ಒಡಿಶಾದಲ್ಲಿ ಸಿಆರ್ಪಿಎಫ್ ನಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಎರಡು ದಿನಗಳ ಹಿಂದೆ ಸರ್ಕಾರಿ ವಾಹನದಲ್ಲಿ ಕಚೇರಿಗೆ ತೆರಳುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಲ್ಲೇಶ ಮರಕಟ್ಟಿ ಗಂಭೀರ ಗಾಯಗೊಂಡಿದ್ದರು. ಇವರನ್ನು ಒಡಿಶಾದ ಸಿಆರ್ಪಿಎಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಇಂದು ಸಂಜೆ ಮಲ್ಲೇಶ ಮರಕಟ್ಟಿ ಅವರು ವಿಧಿವಶರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.